AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಫಸ್ಟ್‌ ನೈಟ್‌ಗೆ ಸ್ನೇಹಿತರು ಇಷ್ಟೊಂದು ಕಾಟ ಕೊಡೋದಾ, ಗಿಚ್ಚಿ ಗಿಲಿಗಿಲಿ ಧನರಾಜ್‌ ಹಂಚಿಕೊಂಡ ವಿಡಿಯೋ

ಮದುವೆ ಮನೆಯಲ್ಲಿ ಅಥವಾ ಫಸ್ಟ್‌ ನೈಟ್‌ ದಿನ ಗೆಳೆಯರು ಮತ್ತು ಸಂಬಂಧಿಕರು  ಮದುಮಕ್ಕಳಿಗೆ ಕಾಟ ಕೊಡುತ್ತಾ ತರ್ಲೆ ತಮಾಷೆ ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಫನ್ನಿ ವಿಡಿಯೋವನ್ನು ಯುಟ್ಯೂಬರ್‌ ಧನರಾಜ್‌ ಆಚಾರ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು,   ಅಯ್ಯಯೋ ಫಸ್ಟ್‌ ನೈಟ್‌ ಅಲ್ಲಿ ಮದುಮಕ್ಕಳಿಗೆ ಇಷ್ಟೊಂದು ಕಾಟ ಕೊಡೋದಾ ಎಂದು ವಿಡಿಯೋ ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Video: ಫಸ್ಟ್‌ ನೈಟ್‌ಗೆ ಸ್ನೇಹಿತರು ಇಷ್ಟೊಂದು ಕಾಟ ಕೊಡೋದಾ, ಗಿಚ್ಚಿ ಗಿಲಿಗಿಲಿ ಧನರಾಜ್‌ ಹಂಚಿಕೊಂಡ ವಿಡಿಯೋ
ವೈರಲ್​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:May 24, 2024 | 3:03 PM

Share

ಸೋಷಿಯಲ್‌ ಮೀಡಿಯಾದ ಬಳಕೆದಾರರಿಗೆ ಧನರಾಜ್‌ ಆಚಾರ್‌ ಚಿರಪರಿಚಿತ. ಇವರು ತಮ್ಮ ಕ್ರಿಯೆಟಿವ್‌ ಕಂಟೆಂಟ್‌ ಹಾಗೂ ವಿಭಿನ್ನ ಮ್ಯಾನರಿಸಂ ಕಾಮಿಡಿ ಮೂಲಕ ಜನರಿಗೆ ತುಂಬಾನೇ ಹತ್ತಿರವಾದವರು. ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕಿರುತೆರೆ ಪ್ರವೇಶಿಸಿದ ಇವರು  ಯುಟ್ಯೂಬ್‌ ಸೇರಿದಂತೆ  ಇತರೆ ಸೋಷಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ಗಳಲ್ಲಿ  ವ್ಲಾಗ್ಸ್‌, ಕಾಮಿಡಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಜನರನ್ನು ಮನರಂಜಿಸುತ್ತಿರುತ್ತಾರೆ. ಸದ್ಯ ಇದೇ ರೀತಿಯ ಹಾಸ್ಯಮಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮದುಮಕ್ಕಳಿಗೆ ಫಸ್ಟ್‌ ನೈಟ್‌ ದಿನ ಧನರಾಜ್‌ ಕುಟುಂಬಸ್ಥರು ಕೊಟ್ಟ ಕಾಟಕ್ಕೆ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಈ ವಿಡಿಯೋವನ್ನು ಧನರಾಜ್‌ ಆಚಾರ್‌ (@Dhanraj Achar) ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ತೊಂದ್ರೆ ಕೊಡ್ಬೇಕು! ಆದ್ರೆ ಇಷ್ಟೊಂದಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಮದುವೆ ಮನೆಯಲ್ಲಿ ನವ ವಧುವರರ ಫಸ್ಟ್‌ ನೈಟ್‌ ದಿನ ಧನರಾಜ್‌ ಆಚಾರ್‌ ಮತ್ತು ಅವರು ಕುಟುಂಬದವರು ಪ್ರಸ್ತದ ಕೋಣೆಯನ್ನು ರೆಡಿ ಮಾಡುತ್ತಾ, ಮದುಮಕ್ಕಳನ್ನು ಕಾಲೆಳೆಯುತ್ತಾ ತರ್ಲೆ ತಮಾಷೆ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಒಂಟಿ ಕಾಲಿನಲ್ಲಿ ನಿಂತು ಬೆಂಗಳೂರಿನ ಬೀದಿ ಬದಿ ದೋಸೆ ಮಾರುವ ಈ ಯುವತಿಯ ಛಲಕ್ಕೆ ಸೋತ ಕ್ರಿಕೆಟ್​​​ ದಿಗ್ಗಜ 

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಾಸ್ಯಮಯ ದೃಶ್ಯವನ್ನು ಕಂಡು ಸೋಷಿಯಲ್‌ ಮೀಡಿಯಾದ ಬಳಕೆದಾರರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:55 pm, Fri, 24 May 24