ಬೆಂಗಳೂರಿನಲ್ಲಿ ಸ್ವಯಂ ಅಪಘಾತಗಳ ಸಂಖ್ಯೆ ಹೆಚ್ಚಳ

ಬೆಂಗಳೂರು ನಗರದಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಸಂಚಾರಿ ನಿಯಮಗಳ ಪಾಲನೆ ಮಾಡುವಂತೆ ಎಷ್ಟೇ ಸೂಚನೆ ನೀಡಿದರೂ, ಕೆಲವರು ಪಾಲನೆ ಮಾಡುತ್ತಿಲ್ಲ. ಇದರಿಂದ ಅಪಘಾತ ಸಂಭವಿಸಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೌದು, ನಗರದಲ್ಲಿ ಕೇವಲ 152 ದಿನಗಳಲ್ಲಿ 159 ಅಪಘಾತಗಳು ಸಂಭವಿಸಿವೆ.

ಬೆಂಗಳೂರಿನಲ್ಲಿ ಸ್ವಯಂ ಅಪಘಾತಗಳ ಸಂಖ್ಯೆ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on: May 31, 2024 | 10:03 AM

ಬೆಂಗಳೂರು, ಮೇ 31: ಬೆಂಗಳೂರು (Bengaluru) ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕೇವಲ 152 ದಿನಗಳಲ್ಲಿ 159 ಅಪಘಾತಗಳು ಸಂಭವಿಸಿವೆ. ಈ ಪೈಕಿ 95 ಮಾರಣಾಂತಿಕ ಮತ್ತು 64 ಮಾರಣಾಂತಿಕವಲ್ಲ. 34 ಸ್ವಯಂ ಅಪಘಾತಗಳು ಸಂಭವಿಸಿವೆ. 34 ಸ್ವಯಂ ಅಪಘಾತಗಳಲ್ಲಿ 25 ಮಾರಣಾಂತಿಕ ಮತ್ತು 9 ಮಾರಣಾಂತಿಕವಲ್ಲದ ಅಪಘಾತಗಳಿವೆ. ಸ್ವಯಂ ಅಪಘಾತಕ್ಕೆ ಒಳಗಾದ ಚಾಲಕರು ಮತ್ತು ಸವಾರರು ಮದ್ಯದ ಅಮಲಿನಲ್ಲಿದ್ದರು.

ಸ್ವಯಂ-ಅಪಘಾತಗಳಿಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತು ಅತಿವೇಗವು ಪ್ರಮುಖ ಕಾರಣಗಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಜ್ಞರು ಈ ಅಪಘಾತಗಳಿಗೆ ಮೂಲಸೌಕರ್ಯಗಳ ಕೊರತೆ ಮತ್ತು ಕಳಪೆ ವಾಹನ ಚಾಲಕರ ನಡವಳಿಕೆ ಅಪಘಾತಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾತನಾಡಿ, ನಗರದಲ್ಲಿ ಸ್ವಯಂ ಅಪಘಾತ ಪ್ರಕರಣಗಳು ಹೆಚ್ಚಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಡ್ರಿಂಕ್ ಡ್ರೈವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. ಸ್ವಯಂ ಅಪಘಾತದಲ್ಲಿ ಮೃತಪಟ್ಟವರಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿದ್ದಾರೆ. ಬೆಂಗಳೂರು ಉತ್ತರ ಟ್ರಾಫಿಕ್​ ಡಿಸಿಪಿ ಸಿರಿ ಗೌರಿ ಮಾತನಾಡಿ, ಮದ್ಯಪಾನ ಮಾಡಿ ಸ್ವಯಂ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಹಾಗೇ ಸವಾರರು ಹೆಲ್ಮೆಟ್ ಧರಿಸದೆ ಅಜಾಗರೂಕತೆಯಿಂದ ಸವಾರಿ ಮಾಡುವವರು ಅಧಿಕವಾಗಿದ್ದಾರೆ ಎಂದರು.

ಡ್ರೈವಿಂಗ್ ಸ್ಕೂಲ್‌ಗಳಿಗೆ 8 ಸಾವಿರ ಪಾವತಿಸಿ ಒಂದೇ ವಾರದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಾಹನ ಚಾಲಕರ ಕಳಪೆ ಚಾಲನಾ ಕೌಶಲ್ಯವೇ ಸ್ವಯಂ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸಂಚಾರ ತಜ್ಞ ಎಂ.ಎನ್.ಶ್ರೀಹರಿ ಹೇಳಿದರು. ಚಾಲನಾ ಕೌಶಲ್ಯವನ್ನು ಪರೀಕ್ಷಿಸುವ ಸಂಪೂರ್ಣ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಅವರು ಸೂಚಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿನ ಫ್ಲೈಓವರ್, ಅಂಡರ್ ಪಾಸ್​ಗಳಲ್ಲಿ ಉರಿಯುತ್ತಿಲ್ಲ ಬೀದಿ ದೀಪಗಳು

ಯಾವುದೇ ನಾಲ್ಕು ತಪ್ಪುಗಳಿಗಾಗಿ, ವಾಹನ ಚಾಲಕರಿಗೆ ನೀಡಲಾದ ಪರವಾನಗಿಯನ್ನು ರದ್ದುಗೊಳಿಸಬೇಕು. ಭಾರತದಲ್ಲಿ, ಪರವಾನಗಿ ಪಡೆಯುವುದು ಸುಲಭ, ಈ ಲೈಸನ್ಸ್​ ವಾಹನ ಓಡಿಸಲು ಅಲ್ಲ ಕೊಲ್ಲಲು ಉಪಯೋಗಾವುತ್ತದೆ.

ನಿರ್ಲಕ್ಷ್ಯ, ಆಯಾಸ, ದುಡುಕಿನ ಚಾಲನೆ ಮತ್ತು ಕಳಪೆ ಕೌಶಲ್ಯದಿಂದ ಶೇ 68ರಷ್ಟು ಸ್ವಯಂ-ಅಪಘಾತಗಳು ಸಂಭವಿಸುತ್ತವೆ. ಆದರೆ ಶೇ 22 ರಷ್ಟು ಪ್ರಕರಣಗಳು ಹದಗೆಟ್ಟ ರಸ್ತೆ, ಮುನ್ನೆಚ್ಚರಿಕೆ ಫಲಕಗಳ ಕೊರತೆ ಇತ್ಯಾದಿಗಳಿಂದ ಉಂಟಾಗುತ್ತವೆ. ಕೆಟ್ಟ ರಸ್ತೆಯಲ್ಲಿ ಜಾಗರೂಕರಾಗಿ ವಾಹನ ಚಲಾಯಿಸುವುದು ಚಾಲಕನ ಬುದ್ಧಿವಂತಿಕೆ ಮತ್ತು ಕೌಶಲ್ಯ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ