ಆಸ್ತಿ ತೆರಿಗೆ ಬಾಕಿದಾರರಿಗೆ ಮತ್ತೆ ಬಿಸಿ ಮುಟ್ಟಿಸಲು ಪ್ಲಾನ್; ಜೂನ್ 7ರ ಬಳಿಕ ಬಾಕಿ ವಸೂಲಿಗೆ BBMP ಸಜ್ಜು

ಆಸ್ತಿ ತೆರಿಗೆ ಟಾರ್ಗೆಟ್ ರೀಚ್ ಆಗಲು ಕಸರತ್ತು ನಡೆಸಿದ್ದ ಪಾಲಿಕೆ ತೆರಿಗೆ ಬಾಕಿದಾರರಿಗೆ ನೋಟಿಸ್ ನೀಡೋ ಮೂಲಕ, ಆಸ್ತಿ ಸೀಜ್ ಮಾಡೋ ಮೂಲಕ ಬಿಸಿ ಮುಟ್ಟಿಸಿತ್ತು. ಎಷ್ಟೇ ವಾರ್ನಿಂಗ್ ಕೊಟ್ಟರೂ, ನೋಟಿಸ್ ಕೊಟ್ಟರೂ ಇನ್ನೂ ಆರಾಮಾಗಿರೋ ತೆರಿಗೆ ಬಾಕಿದಾರರಿಗೆ ಪಾಲಿಕೆ ಮತ್ತೆ ಬಿಸಿ ಮುಟ್ಟಿಸೋಕೆ ಸಜ್ಜಾಗ್ತಿದೆ. ಗ್ಯಾರಂಟಿಗಳನ್ನ ನೀಡಿರೋ ಸರ್ಕಾರ ಇದೀಗ ಖಜಾನೆ ಭರ್ತಿಗೆ ಗಮನಹರಿಸಿದ್ದು, ಆಸ್ತಿ ತೆರಿಗೆ ಬಾಕಿದಾರರಿಗೆ ಇದರ ಬಿಸಿ ತಟ್ಟಲಿದೆ.

ಆಸ್ತಿ ತೆರಿಗೆ ಬಾಕಿದಾರರಿಗೆ ಮತ್ತೆ ಬಿಸಿ ಮುಟ್ಟಿಸಲು ಪ್ಲಾನ್; ಜೂನ್ 7ರ ಬಳಿಕ ಬಾಕಿ ವಸೂಲಿಗೆ BBMP ಸಜ್ಜು
ಬಿಬಿಎಂಪಿ
Follow us
| Updated By: ಆಯೇಷಾ ಬಾನು

Updated on: May 31, 2024 | 9:08 AM

ಬೆಂಗಳೂರು, ಮೇ.31: ಅದೆಷ್ಟೇ ನೋಟಿಸ್ ಕೊಟ್ಟರೂ, ಆಸ್ತಿ ಜಪ್ತಿ ಮಾಡಿದ್ರೂ ಇನ್ನೂ ತೆರಿಗೆ ಕಟ್ಟದ ಸಿಟಿ ಮಂದಿಗೆ ಮತ್ತೆ ಶಾಕ್ ಕೊಡಲು ಬಿಬಿಎಂಪಿ (BBMP) ಸಜ್ಜಾಗಿದೆ. ಸದ್ಯ ಎಲೆಕ್ಷನ್, ರಿಸಲ್ಟ್ ಅಂತಾ ತಲೆಕೆಡಿಸಿಕೊಂಡಿರೋ ಪಾಲಿಕೆ, ಸರ್ಕಾರದ ನಿರ್ದೇಶನದಂತೆ ಜೂನ್ 7 ರ ಬಳಿಕ ಮತ್ತೆ ತೆರಿಗೆ ವಸೂಲಿ ತೀವ್ರಗೊಳಿಸೋಕೆ ಸದ್ದಿಲದೇ ತಯಾರಿ ನಡೆಸಿದೆ. ಸದ್ಯ ಪಾಲಿಕೆ ಚುನಾವಣೆ ಮುನ್ಸೂಚನೆ ಕೂಡ ಸಿಗ್ತಿರೋ ಬೆನ್ನಲ್ಲೆ, ಚುನಾವಣೆ ಘೋಷಣೆಗೂ ಮೊದಲೇ ಬಾಕಿ ತೆರಿಗೆ ವಸೂಲಿಗೆ ಪಾಲಿಕೆ ಪ್ಲಾನ್ ಮಾಡಿದೆ.

ಇನ್ನು ಲೋಕಸಭಾ ಚುನಾವಣೆ ಶುರುವಾದಾಗಿನಿಂದ ಪಾಲಿಕೆ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ಬ್ಯುಸಿಯಾಗಿದ್ರು. ಇದರಿಂದ ತೆರಿಗೆ ಬಾಕಿದಾರರು ಇನ್ನೂ ಟ್ಯಾಕ್ಸ್ ವಿಚಾರ ಚರ್ಚೆಗೆ ಬರಲ್ಲ ಅಂತಾ ಬಿಂದಾಸ್ ಆಗಿದ್ರು, ಆದ್ರೆ ಇದೀಗ ಬಾಕಿ ತೆರಿಗೆ ವಸೂಲಿಗೆ ತೆರೆಮರೆಯಲ್ಲೇ ಪ್ಲಾನ್ ರೆಡಿಮಾಡಿರೋ ಪಾಲಿಕೆ, ಜೂನ್ 7 ರ ನಂತರ ನೋಟಿಸ್ ನೀಡಿದ್ರೂ ಟ್ಯಾಕ್ಸ್ ಕಟ್ಟದವರಿಗೆ ಬಿಸಿ ಮುಟ್ಟಿಸೋಕೆ ತಯಾರಿ ನಡೆಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿನ ಫ್ಲೈಓವರ್, ಅಂಡರ್ ಪಾಸ್​ಗಳಲ್ಲಿ ಉರಿಯುತ್ತಿಲ್ಲ ಬೀದಿ ದೀಪಗಳು

ಸದ್ಯ ಈ ಹಿಂದೆ ಪ್ರತಿ ವಲಯದಲ್ಲಿ ಅತಿಹೆಚ್ಚು ತೆರಿಗೆ ಬಾಕಿದಾರರ ಪಟ್ಟಿ ರಿಲೀಸ್ ಮಾಡಿದ್ದ ಪಾಲಿಕೆ, ಇದೀಗ ಆ ಪಟ್ಟಿಯಲ್ಲಿರೋ ಬಾಕಿದಾರರು ತೆರಿಗೆ ಪಾವತಿಸಿದ್ದಾರಾ, ಇಲ್ವಾ ಅನ್ನೋದನ್ನ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಪದೇ ಪದೇ ತೆರಿಗೆ ಬಾಕಿ ಉಳಿಸಿಕೊಂಡು ಲಾಕ್ ಆಗಿದ್ದ ಮಂತ್ರಿ ಮಾಲ್ ಸೇರಿದಂತೆ ಇತರೆ ಮಾಲ್, ಅಂಗಡಿ-ಮುಂಗಟ್ಟುಗಳ ತೆರಿಗೆ ಪಾವತಿಯನ್ನೂ ಪರಿಶೀಲಿಸಲಿದ್ದು, ತೆರಿಗೆ ಬಾಕಿದಾರರ ವಿರುದ್ಧ ಸಮರಕ್ಕೆ ವೇದಿಕೆ ರೆಡಿಯಾಗ್ತಿದೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಫಲಿತಾಂಶಕ್ಕಾಗಿ ಕಾದು ಕುಳಿತ ಸರ್ಕಾರ, ಸದ್ದಿಲ್ಲದೇ ಪಾಲಿಕೆ ಬೊಕ್ಕಸ ಏರಿಕೆಗೂ ಸೂಚನೆ ನೀಡಿದೆ. ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗೋ ಮೊದಲೇ ಬಾಕಿ ವಸೂಲಿಗೆ ತಯಾರಿ ನಡೆದಿದ್ದು, ಚುನಾವಣಾ ಫಲಿತಾಂಶದ ಬಳಿಕ ಯಾವ ಮಾಲ್, ಅಂಗಡಿ-ಮುಂಗಟ್ಟು ಮಾಲೀಕರಿಗೆ ಪಾಲಿಕೆ ಶಾಕ್ ಕೊಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ