ಬಿಬಿಎಂಪಿ ಅಧಿಕಾರಿ ಬಸವರಾಜ್ ಮಾಗಿ ನಿವಾಸದಲ್ಲಿ 2 ಹುಲಿ ಉಗುರು, 5 ತಲವಾರ್ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 11, 2024 | 7:19 PM

ಬೆಂಗಳೂರಿನಲ್ಲಿ 5 ಕಡೆ, ಕಲಬುರಗಿಯಲ್ಲಿ 4 ಕಡೆ ಹೀಗೆ ಬಿಬಿಎಂಪಿ ಕಂದಾಯ ಅಧಿಕಾರಿ ಬಸವರಾಜ ಮಾಗಿಗೆ ಸಂಬಂಧಿಸಿದಂತೆ ಒಟ್ಟು 9 ಕಡೆ ಲೋಕಾಯುಕ್ತ ದಾಳಿ ಮಾಡಿದೆ. ಈ ವೇಳೆ ಬೆಂಗಳೂರಿನ ನಿವಾಸದಲ್ಲಿ ಚಿನ್ನಾಭರಣಗಳು ಸೇರಿದಂತೆ 5 ತಲವಾರ್, 3 ಚಾಕು ಮತ್ತು 2 ಹುಲಿ ಉಗುರು ಪತ್ತೆ ಆಗಿದ್ದು, ಅಧಿಕಾರಿಗಳೇ ಶಾಕ್​ ಆಗಿದ್ದಾರೆ.

ಬಿಬಿಎಂಪಿ ಅಧಿಕಾರಿ ಬಸವರಾಜ್ ಮಾಗಿ ನಿವಾಸದಲ್ಲಿ 2 ಹುಲಿ ಉಗುರು, 5 ತಲವಾರ್ ಪತ್ತೆ
ಬಿಬಿಎಂಪಿ ಅಧಿಕಾರಿ ಬಸವರಾಜ್ ಮಾಗೆ ನಿವಾಸದಲ್ಲಿ 5 ತಲವಾರ್, 3 ಚಾಕು, 2 ಹುಲಿ ಉಗುರು ಪತ್ತೆ
Follow us on

ಬೆಂಗಳೂರು, ಜುಲೈ 11: ಇಂದು ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ಮಾಡಿದ್ದರು. ಇನ್ನು ಕೆಲ ಅಧಿಕಾರಿಗಳ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಮಧ್ಯೆ ಬಿಬಿಎಂಪಿ (BBMP) ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಾಗಿ ನಿವಾಸದ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಒಂದು ಕ್ಷಣ ಶಾಕ್​ ಆಗಿದೆ. ನಗರದ ಕುಮಾರಪಾರ್ಕ್‌ನಲ್ಲಿರುವ ಮೋತಿ ಅಪಾರ್ಟ್‌ಮೆಂಟ್​ನ ಫ್ಲ್ಯಾಟ್‌ನಲ್ಲಿ ಚಿನ್ನ ಆಭರಣಗಳ ಜೊತೆಗೆ 5 ತಲವಾರ್, 3 ಚಾಕು ಮತ್ತು 2 ಹುಲಿ ಉಗುರು ಪತ್ತೆ ಆಗಿವೆ.

ದುಬಾರಿ ಮೌಲ್ಯದ 7 ಲೈಟರ್​ಗಳು ಕೂಡ ಪತ್ತೆಯಾಗಿದ್ದು, ಬಸವರಾಜ ಮಾಗಿ ವಿಲಾಸಿ ಜೀವನ ನಡೆಸುತ್ತಿದ್ದರು. ಸದ್ಯ ಚಿನ್ನ, 2 ಹುಲಿ ಉಗುರು ಜಪ್ತಿ ಮಾಡಿರುವ ಅರಣ್ಯಾಧಿಕಾರಿಗಳು ಕೊಂಡೊಯ್ದಿದ್ದಾರೆ. ಎರಡು ಹುಲಿ ಉಗುರು ಪತ್ತೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾದೆ. ವಲಯ ಅರಣ್ಯಾಧಿಕಾರಿ ತ್ಯಾಗರಾಜ್‌ ಮತ್ತು ಅಧಿಕಾರಿಗಳ ತಂಡ ಫ್ಲ್ಯಾಟ್‌ಗೆ ಬಂದು ಎರಡು ಹುಲಿ ಉಗುರು ಸೀಜ್‌ ಮಾಡಿದ್ದಾರೆ.

ಇದನ್ನೂ ಓದಿ: Lokayukta Raid: ಕರ್ನಾಟಕದಾದ್ಯಂತ ಬೆಳ್ಳಂಬೆಳಗ್ಗೆಯೇ 56 ಕಡೆ ಲೋಕಾಯುಕ್ತ ದಾಳಿ

ಹುಲಿ ಉಗುರಿನ ನೈಜತೆ ಪರೀಕ್ಷೆಗೆ ಮಲ್ಲೇಶ್ವರಂನ ಅರಣ್ಯ ಭವನಕ್ಕೆ ತೆಗೆದುಕೊಂಡು ಹೋದಿದ್ದಾರೆ. ಪರಿಕ್ಷೆ ವೇಳೆ ಅಸಲಿ ಹುಲಿ ಉಗುರು ಎಂಬುದು ಸಾಬೀತಾದರೆ ಬಸವರಾಜ್ ಮಾಗಿಗೆ ಮತ್ತಷ್ಟು ಸಂಕಷ್ಟ ಸಾಧ್ಯತೆ ಇದೆ.

ಜೈಲುಪಾಲಾಗಿದ್ದ ಬಿಬಿಎಂಪಿ ಅಧಿಕಾರಿ

ಬಸವರಾಜ್ ಮಾಗಿ ಒಂದೂವರೆ ತಿಂಗಳ ಹಿಂದೆ ಜೈಲಿಂದ ಹೊರಗಡೆ ಆಗಿ ಬಂದಿದ್ದರು. ನಕಲಿ ದಾಖಲಾತಿ ಸೃಷ್ಟಿಸಿದ ಕೇಸ್​ನಲ್ಲಿ ಜೈಲುಪಾಲಾಗಿದ್ದು, ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ.

ಕಲಬುರಗಿಯಲ್ಲಿ ಕೋಟಿ ಮೌಲ್ಯದ ಮನೆ

ಬೆಂಗಳೂರಿನಲ್ಲಿ 5 ಕಡೆ, ಕಲಬುರಗಿಯಲ್ಲಿ 4 ಕಡೆ ಹೀಗೆ ಬಸವರಾಜ ಮಾಗಿಗೆ ಸಂಬಂಧಿಸಿದಂತೆ ಒಟ್ಟು 9 ಕಡೆ ಲೋಕಾ ದಾಳಿ ಮಾಡಿದೆ. ಕಲಬುರಗಿಯ ಬಡೇಪುರ, ಪಿ&ಟಿ ಕಾಲೋನಿ, ಪಾಳಾ ಗ್ರಾಮದ ಮನೆ ಹೊಂದಿದ್ದಾರೆ. ಹೀಗಾಗಿ ಅವರಿಗೆ ಸೇರಿದ ಹಲವು ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಲಾಗಿದೆ.

ಇದನ್ನೂ ಓದಿ: ವಿಜಯಪುರ, ಕಲಬುರಗಿಯಲ್ಲಿ ಲೋಕಾಯುಕ್ತ ದಾಳಿ: ಇಬ್ಬರು ಅಧಿಕಾರಿಗಳ ಬಂಧನ

ಸರ್ಕಾರಿ ಸೇವೆಗೆ ಸೇರಿದ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ಆಸ್ತಿ ಸಂಗ್ರಹ ಮಾಡಿದ್ದಾರೆ. ನಕಲಿ ದಾಖಲಾತಿ ಸೃಷ್ಟಿ ಆರೋಪದಲ್ಲಿ ಹಿಂದೆ ಬಿಬಿಎಂಪಿಯಿಂದ ಅಮಾನತು ಮಾಡಲಾಗಿತ್ತು. ತಾಯಿ ಹೆಸರಲ್ಲಿ ಸುಮಾರು 50 ಎಕರೆಯ ಕೋಟಿ ಕೋಟಿ ಬೆಲೆ ಬಾಳುವ ಜಮೀನು ಖರೀದಿ ಮಾಡಿದ್ದರು. ಕಲಬುರಗಿಯಲ್ಲಿ ಕೋಟಿ ಮೌಲ್ಯದ 4 ಅಂತಸ್ತಿನ ಮನೆ ಅಲ್ಲದೇ ಇನ್ನೂ ಹಲವು ಕಡೆ ಆಸ್ತಿ ಹೊಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.