ರಾಜ್ಯ ಸರ್ಕಾರ ನಿಗದಿ ಮಾಡಿದಷ್ಟು ಶುಲ್ಕ ಪಡೆಯಲು ಸಿದ್ಧ: ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ

| Updated By: sandhya thejappa

Updated on: Jun 20, 2021 | 3:29 PM

ಕಳೆದ ವರ್ಷದಂತೆ ಶೇ.70ರಷ್ಟು ಶುಲ್ಕವನ್ನು ಪೋಷಕರು ಕಟ್ಟಬಹುದು. ಆ ಶುಲ್ಕವನ್ನು ಸ್ವೀಕರಿಸುವುದಕ್ಕೆ ನಾವು ಸಿದ್ಧವಿದ್ದೇವೆ. ಶುಲ್ಕದ ವಿಚಾರವಾಗಿ ನಾವು ಪೋಷಕರಿಗೆ ಒತ್ತಡ ಹಾಕುತ್ತಿಲ್ಲ. ಕಳೆದ ವರ್ಷದ ಶೇ.70ರಷ್ಟು ಶುಲ್ಕವನ್ನು ಎಷ್ಟೋ ಪೋಷಕರು ಪಾವತಿಸಿಲ್ಲ. ಹಾಗಾಗಿ ಬಾಕಿ ಶುಲ್ಕವನ್ನು ಪೋಷಕರು ಪಾವತಿಸುವಂತೆ ಸರ್ಕಾರ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ನಿಗದಿ ಮಾಡಿದಷ್ಟು ಶುಲ್ಕ ಪಡೆಯಲು ಸಿದ್ಧ: ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ
ಲೋಕೇಶ್ ತಾಳಿಕಟ್ಟೆ
Follow us on

ಬೆಂಗಳೂರು: ರಾಜ್ಯ ಸರ್ಕಾರ ನಿಗದಿ ಮಾಡಿದಷ್ಟು ಶುಲ್ಕವನ್ನು ಪಡೆಯಲು ಸಿದ್ಧರಿದ್ದೇವೆ ಎಂದು ಹೇಳಿಕೆ ನೀಡಿದ ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತೇವೆ. 12 ಪ್ರಮುಖ ಸಂಘಟನೆಗಳಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದೇವೆ. ಶುಲ್ಕದ ವಿಚಾರವಾಗಿ ನಾವು ಪೋಷಕರಿಗೆ ಒತ್ತಡ ಹಾಕುತ್ತಿಲ್ಲ. ಸರ್ಕಾರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷದಂತೆ ಶೇ.70ರಷ್ಟು ಶುಲ್ಕವನ್ನು ಪೋಷಕರು ಕಟ್ಟಬಹುದು. ಆ ಶುಲ್ಕವನ್ನು ಸ್ವೀಕರಿಸುವುದಕ್ಕೆ ನಾವು ಸಿದ್ಧವಿದ್ದೇವೆ. ಶುಲ್ಕದ ವಿಚಾರವಾಗಿ ನಾವು ಪೋಷಕರಿಗೆ ಒತ್ತಡ ಹಾಕುತ್ತಿಲ್ಲ. ಕಳೆದ ವರ್ಷದ ಶೇ.70ರಷ್ಟು ಶುಲ್ಕವನ್ನು ಎಷ್ಟೋ ಪೋಷಕರು ಪಾವತಿಸಿಲ್ಲ. ಹಾಗಾಗಿ ಬಾಕಿ ಶುಲ್ಕವನ್ನು ಪೋಷಕರು ಪಾವತಿಸುವಂತೆ ಸರ್ಕಾರ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸರ್ಕಾರ ನಿರ್ಧಾರ ತಪ್ಪು

ತಜ್ಞರ ಸಲಹೆ ಪಡೆಯದೇ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸಲು ಸರ್ಕಾರದ ಈ ನಿರ್ಧಾರ ದೊಡ್ಡ ತಪ್ಪು ಎಂದು ಮಾತನಾಡಿದ ಲೋಕೇಶ್ ತಾಳಿಕಟ್ಟೆ, ಪಿಯು ಪರೀಕ್ಷೆ ವಿಚಾರವಾಗಿ ಹೈಕೋರ್ಟ್ ಛೀಮಾರಿ ಹಾಕಿದೆ. ಎಸ್ಎಸ್ಎಲ್ಸಿ ವಿಚಾರದಲ್ಲೂ ಸರ್ಕಾರಕ್ಕೆ ಅದೇ ಪರಿಸ್ಥಿತಿ ಬರುತ್ತದೆ. ಈವರೆಗೂ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟಿಸಿಲ್ಲ. ಇದು ರಾಜ್ಯ ಸರ್ಕಾರದ ಮತ್ತು ಸಚಿವರ ಅವೈಜ್ಞಾನಿಕ ನಿಲುವು. ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದಾಗಿದೆ. ಈ ಮಕ್ಕಳೆಲ್ಲ ಪ್ರಥಮ ಪಿಯು ತರಗತಿಯಲ್ಲಿ ಪಾಠ ಕೇಳುತ್ತಿದ್ದಾರೆ. ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಕೋರ್ಟ್ ನಿರ್ದೇಶನ ಬರುವ ತನಕ ರುಪ್ಸಾ ಹೆಸರು ಬಳಸುತ್ತೇನೆ ಎಂದ ಲೋಕೇಶ್ ತಾಳಿಕಟ್ಟೆ
ರುಪ್ಸಾ ಸಂಘಟನೆ ಹೆಸರು ದುರ್ಬಳಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿನಾಕಾರಣ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಸದ್ಯ ಈ ವಿಚಾರ ನ್ಯಾಯಾಲಯದಲ್ಲಿರುವ ಹಿನ್ನೆಲೆ ಈ ಬಗ್ಗೆ ನಾನು ಹೆಚ್ಚಾಗಿ ಏನೂ ಮಾತನಾಡಲು ಹೋಗಲ್ಲ. ಇನ್ನು 15 ರಿಂದ 20 ದಿನಗಳಲ್ಲಿ ಯಾರು ಈ ಸಂಘಟನೆಯನ್ನ ಯಾರು ಬಳಸಬೇಕು ಅಂತ ತೀರ್ಮಾನವಾಗಲಿದೆ. ವಿನಾಃ ಕಾರಣ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗ್ತಿದೆ. ಕೋರ್ಟ್ ನಿರ್ದೇಶನ ಬರುವ ತನಕ ರುಪ್ಸಾ ಹೆಸರು ಬಳಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

School Fees: ನಾಳೆ ಖಾಸಗಿ ಶಾಲೆಗಳ ಫೀಸ್ ವಿಚಾರಣೆ; ಹೈಕೋರ್ಟ್​ನಿಂದ ದಿನಾಂಕ ನಿಗದಿ

School Fees: ಖಾಸಗಿ ಶಾಲೆಗಳ ಫೀಸ್ ಹಗ್ಗಜಗ್ಗಾಟ ಕೊನೆಗಾಣಿಸಲು 2ರಿಂದ 3 ದಿನಗಳಲ್ಲಿ ಸರ್ಕಾರದಿಂದ ಅಧಿಕೃತ ನಿರ್ಧಾರ ಘೋಷಣೆ ಸಾಧ್ಯತೆ

(Lokesh Talikatte said the children who lost their parents from Corona are being educated in private schools for free)