School Fees: ನಾಳೆ ಖಾಸಗಿ ಶಾಲೆಗಳ ಫೀಸ್ ವಿಚಾರಣೆ; ಹೈಕೋರ್ಟ್​ನಿಂದ ದಿನಾಂಕ ನಿಗದಿ

ಕೊರೊನಾದಿಂದಾಗಿ ಪೂರ್ಣ ಶುಲ್ಕ ಭರಿಸಲು ಪೋಷಕರಿಗೆ ತೊಂದರೆಯಾಗುತ್ತದೆ. ಲಾಕ್​ಡೌನ್​ನಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಶುಲ್ಕ ನಿಗದಿ ಬಗ್ಗೆ ಸಮಿತಿ ರಚನೆ ಮಾಡುವಂತೆ ಸರ್ಕಾರ ಪ್ರಸ್ತಾಪ ಮಾಡಿದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚನೆ ಮಾಡಬೇಕು.

School Fees: ನಾಳೆ ಖಾಸಗಿ ಶಾಲೆಗಳ ಫೀಸ್ ವಿಚಾರಣೆ; ಹೈಕೋರ್ಟ್​ನಿಂದ ದಿನಾಂಕ ನಿಗದಿ
ಕರ್ನಾಟಕ ಹೈಕೋರ್ಟ್
Follow us
| Updated By: sandhya thejappa

Updated on:Jun 20, 2021 | 10:59 AM

ಬೆಂಗಳೂರು: ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವಿನ ಫೀಸ್ ಸಮರ ಕೋರ್ಟ್ ಅಂಗಳಕ್ಕೆ ತಲುಪಿದ್ದು, ವಿಚಾರಣೆಗೆ ಹೈಕೋರ್ಟ್​ನಿಂದ ನಾಳೆ (ಜೂನ್ 21) ದಿನಾಂಕ ನಿಗದಿಯಾಗಿದೆ. ಖಾಸಗಿ ಶಾಲೆಗಳಲ್ಲಿನ ಬೋಧನಾ ಶುಲ್ಕ ವಿಚಾರವಾಗಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಶೇ.70ರಷ್ಟು ಶುಲ್ಕ ಪಡೆಯುವಂತೆ ಸರ್ಕಾರ ಆದೇಶಿಸಿತ್ತು. ಶೇ.30ರಷ್ಟು ಶುಲ್ಕ ರಿಯಾಯಿತಿ ನೀಡುವಂತೆ ಸೂಚಿಸಿದೆ. ಇದರ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ರಿಟ್ ಅರ್ಜಿ ಸಲ್ಲಿಸಿದೆ.

ಕೊರೊನಾದಿಂದಾಗಿ ಪೂರ್ಣ ಶುಲ್ಕ ಭರಿಸಲು ಪೋಷಕರಿಗೆ ತೊಂದರೆಯಾಗುತ್ತದೆ. ಲಾಕ್​ಡೌನ್​ನಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಶುಲ್ಕ ನಿಗದಿ ಬಗ್ಗೆ ಸಮಿತಿ ರಚನೆ ಮಾಡುವಂತೆ ಸರ್ಕಾರ ಪ್ರಸ್ತಾಪ ಮಾಡಿದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚನೆ ಮಾಡಬೇಕು. ಸಮಿತಿ ಸೂಚನೆಯಂತೆ ಶುಲ್ಕ ನಿಗದಿ ಮಾಡಲು ಪರಿಶೀಲನೆ ನಡೆಸಬೇಕು ಎಂದು ಸರ್ಕಾರ ಪ್ರಸ್ತಾಪಿಸಿದೆ. ಈ ಬಗ್ಗೆ ವಿಚಾರಣೆ ನಡೆಸಲು ಹೈಕೋರ್ಟ್ ಜೂನ್ 21 ಅಂದರೆ ನಾಳೆಗೆ ದಿನ ನಿಗದಿ ಮಾಡಿದೆ.

ಶೈಕ್ಷಣಿಕ ವರ್ಷ ಆರಂಭವಾದರೂ ಫೀಜ್ ಗೊಂದಲು ಕಡಿಮೆಯಾಗಿಲ್ಲ. ಶೈಕ್ಷಣಿಕ ವರ್ಷದ ದಾಖಲಾತಿಗೆ ಶಿಕ್ಷಣ ಇಲಾಖೆಗೆ ಆದೇಶ ನೀಡಿದೆ. ಆದರೆ ಪೋಷಕರು ಪ್ರಸಕ್ತ ವರ್ಷದಲ್ಲಿ ಎಷ್ಟು ಫೀಸ್ ಕಟ್ಟಬೇಕು? ಖಾಸಗಿ ಶಾಲೆಗಳು ಎಷ್ಟು ಫೀಸ್ ಪಡಿಯಬೇಕು? ಎಂಬ ಗೊಂದಲವಿದೆ. ಸರ್ಕಾರದಿಂದ ಇದುವರೆಗೂ ಖಾಸಗಿ ಶುಲ್ಕ ನಿಗಧಿಯಾಗಿಲ್ಲ. ಫೀಸ್ ನಿಗಧಿಯಾಗದೆ ಪೋಷಕರು ಗೊಂದಲದಲ್ಲಿದ್ದ್ದಾರೆ. ನಾಳೆಯಾದರೂ ಫೀಸ್ ಸಮರಕ್ಕೆ ತಾರ್ಕಿಕ ಅಂತ್ಯ ಕಾಣುತ್ತಾ ಎಂದು ಕಾದು ನೋಡಬೇಕು.

ಇದನ್ನೂ ಓದಿ

ಖಾಸಗಿ ಶಾಲೆಗಳ ಬೋಧನಾ ಶುಲ್ಕ ನಿಗದಿಗೆ ಸಮಿತಿ ರಚನೆ ಪ್ರಸ್ತಾಪ; ರಾಜ್ಯ ಸರ್ಕಾರದಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಕೆ

ಶಾಲಾ ಶುಲ್ಕ ವಿಚಾರ: ಸಂಘರ್ಷ ನಿವಾರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆದ ಸಿದ್ದರಾಮಯ್ಯ

(High Court will hear tomorrow about the fees of private schools)

Published On - 10:57 am, Sun, 20 June 21