ಬೆಂಗಳೂರು, ಮೇ 13: ಪ್ರೀತಿ ವಿಚಾರಕ್ಕೆ ಆತ್ಮಹತ್ಯೆಗೆ (suicide) ಯತ್ನಿಸಿದ್ದ ಯುವತಿಯನ್ನು (27) ಪೊಲೀಸರು (police) ರಕ್ಷಣೆ ಮಾಡಿರುವಂತಹ ಘಟನೆ ನಗದರ ಹಲಸೂರಿನ ಜೋಗುಪಾಳ್ಯದಲ್ಲಿ ನಡೆದಿದೆ. ಬೆಳಗ್ಗೆ 8.30ರ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯುವತಿ ಆತ್ಮಹತ್ಯೆಗೆ ಯತ್ನದ ಬಗ್ಗೆ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಸ್ಥಳಕ್ಕೆ ತೆರಳಿ ಯುವತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಯುವತಿಯ ಜೀವ ರಕ್ಷಣೆ ಮಾಡಲಾಗಿದೆ.
ಕೋಲಾರ: ಕಾಡುಹಂದಿಗೆ ಹಾಕಿದ್ದ ಉರುಳಿಗೆ ಕರಡಿ ಸಿಲುಕಿ ನರಳಾಡುತ್ತಿದ್ದ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಿಟಗಾನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಕಳೆದ ರಾತ್ರಿ ಕಾಡು ಹಂದಿ ಹಿಡಿಯಲು ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿದ್ದ ಕರಡಿ ಇಡೀ ರಾತ್ರಿ ನರಳಾಡಿತ್ತು. ಈ ವೇಳೆ ಬೆಳಿಗ್ಗೆ ಕರಡಿಯನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು: ದೂರಸಂಪರ್ಕ ಇಲಾಖೆಯ ಅಧಿಕಾರಿಗಳೆಂದು ಹೇಳಿಕೊಂಡು ಮಹಿಳೆಗೆ 30 ಲಕ್ಷ ವಂಚನೆ
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿ, ಕರಡಿಯನ್ನು ರಕ್ಷಣೆ ಮಾಡಿದ್ದರು. ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ನಂತರ ಉರುಳಿಗೆ ಸಿಲುಕಿದ್ದ ಕರಡಿಗೆ ಚಿಕಿತ್ಸೆ ಕೊಡಿಸಿ ನಂತರ ಅದನ್ನು ಕಾಡಿನ ಸುರಕ್ಷಿತ ಪ್ರದೇಶದಕ್ಕೆ ಬಿಡಲಾಗಿತ್ತು.
ಇದನ್ನೂ ಓದಿ: ಒಂಟೆಗಳನ್ನು ಹುಡುಕಿಕೊಂಡು ಹೋದ ಮೂವರು ಮಕ್ಕಳು ನಾಪತ್ತೆ: ಶವವಾಗಿ ಪತ್ತೆ
ಇನ್ನು ಇಡೀ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಡಿಎಫ್ಓ ಏಡುಕೊಂಡಲ ಅವರು ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರು ಹಾಗೂ ವೈದ್ಯರ ಕರೆಸಿ ನಂತರ ಸುರಕ್ಷಿತವಾಗಿ ಕರಡಿಯನ್ನ ರಕ್ಷಿಸಿ ನಂತರ ಅದಕ್ಕೆ ಅಗತ್ಯ ಚಿಕಿತ್ಸೆ ನೀಡಿ ನಂತರ ಅದನ್ನು ಅರಣ್ಯಕ್ಕೆ ಬಿಡಲಾಗಿತ್ತು.
ನೆಲಮಂಗಲ: ಆ ದಂಪತಿಯ ಮೊದಲ ಮಗು ಆರು ವರ್ಷದ ಹಿಂದೆ ನೀರಿನ ಸಂಪ್‌ಗೆ ಬಿದ್ದು ಸಾವನ್ನಪ್ಪಿತ್ತು. ಈಗ ಮತ್ತೊಂದು ಮಗು ಸಾವನ್ನಪ್ಪಿ ಆ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ರಾಯಚೂರು ಜಿಲ್ಲೆ ದೇವದುರ್ಗದ ಮುಕ್ಕಣ್ಣ ಮತ್ತು ಬಾಲಮ್ಮ ದಂಪತಿಗಳ ಪುತ್ರಿ ಯಲ್ಲಮ್ಮ. ಊರಿನಲ್ಲಿ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ಯಲ್ಲಮ್ಮ ಒಂದನೆ ತರಗತಿ ಮುಗಿಸಿ ಎರಡನೇ ತರಗತಿಗೆ ಹೋಗಬೇಕಿದ್ದ ಯಲ್ಲಮ್ಮ. ಅಪ್ಪ ಅಮ್ಮನ ಜೊತೆ ಬೇಸಿಗೆ ರಜೆ ಕಳೆಯಲು ಬಂದಿದ್ದು, ಅಮ್ಮ ಮನೆಗೆಲಸ ಮಾಡುತ್ತಿದ್ದ ಮಾಲಿಕರ ಮನೆಯ ಗೇಟ್ ನಲ್ಲಿ ಆಟ ಆಡಲು ಹೋಗಿ ಕೊನೆಗೆ ಗೇಟ್ ಮುರಿದು ಬಿದ್ದು ಸಾವಿಗೆ ಶರಣಾಗಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.