AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ಪೆನ್​ಡ್ರೈವ್​ ಕೇಸ್​ನಲ್ಲಿ ಭಾರೀ ಸದ್ದು ಮಾಡಿದ್ದ ಬಿಜೆಪಿ ಮುಖಂಡ ಪೊಲೀಸ್ ಕಸ್ಟಡಿಗೆ

ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಟ್ವಿಸ್ಟ್ ಕೊಡುತ್ತಿದ್ದ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡಗೆ ಸಂಕಷ್ಟದ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ದೇವರಾಜೇಗೌಡಗೆ ಇತ್ತೀಚೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ 3 ದಿನ ಪೊಲೀಸ್ ಕಸ್ಟಡಿಗೆ ನೀಡಿ  ಹೊಳೆನರಸೀಪುರ ಜೆಎಂಎಫ್​ಸಿ ಕೋರ್ಟ್ ನ್ಯಾಯಾಧೀಶರಾದ ಪ್ರವೀಣ್​ರಿಂದ ಆದೇಶ ಹೊರಡಿಸಲಾಗಿದೆ.

ಪ್ರಜ್ವಲ್ ಪೆನ್​ಡ್ರೈವ್​ ಕೇಸ್​ನಲ್ಲಿ ಭಾರೀ ಸದ್ದು ಮಾಡಿದ್ದ ಬಿಜೆಪಿ ಮುಖಂಡ ಪೊಲೀಸ್ ಕಸ್ಟಡಿಗೆ
ಪ್ರಜ್ವಲ್ ಪೆನ್​ಡ್ರೈವ್​ ಕೇಸ್​ನಲ್ಲಿ ಭಾರೀ ಸದ್ದು ಮಾಡಿದ್ದ ಬಿಜೆಪಿ ಮುಖಂಡ ಪೊಲೀಸ್ ಕಸ್ಟಡಿಗೆ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: May 13, 2024 | 5:50 PM

ಹಾಸನ, ಮೇ 13: ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡಗೆ (Devarajegowda) 3 ದಿನ ಪೊಲೀಸ್ ಕಸ್ಟಡಿಗೆ ನೀಡಿ  ಹೊಳೆನರಸೀಪುರ ಜೆಎಂಎಫ್​ಸಿ ಕೋರ್ಟ್ ನ್ಯಾಯಾಧೀಶರಾದ ಪ್ರವೀಣ್​ರಿಂದ ಆದೇಶ ಹೊರಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ಪೊಲೀಸರು ಕಸ್ಟಡಿಗೆ ಕೇಳಿದ್ದ ಅರ್ಜಿ ಪರಿಗಣಿಸಿ 3 ದಿನ ಅಂದರೆ ನಾಳೆ ಬೆಳಗ್ಗೆ 9ರಿಂದ ಮೇ 16ರ ರಾತ್ರಿವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮೇ 11ರಂದು ದೇವರಾಜೇಗೌಡರ ಬಂಧಿಸಲಾಗಿತ್ತು.

14 ದಿನಗಳ ಕಾಲ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ದೇವರಾಜೇಗೌಡರನ್ನು ಹಾಸನ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್​ ಮಾಡಲಾಗಿತ್ತು. ಈ ವೇಳೆ ಇನ್ನು ಎಂಟು ದಿನಗಳಲ್ಲಿ ಜೈಲಿನಿಂದ ಹೊರಗೆ ಬರ್ತೀನಿ, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತೆ ಅಂತಾ ಹೇಳಿದ್ದರು.

ಇದನ್ನೂ ಓದಿ: ದೇವರಾಜೇಗೌಡಗೆ ಮತ್ತಷ್ಟು ಸಂಕಷ್ಟ: ಹಳೇ ಕೇಸ್​ಗಳು ರೀ ಓಪನ್​

ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದ್ಯಾ? ಅನ್ನೋ ಅನುಮಾನವೂ ಶುರುವಾಗಿದೆ. ಯಾಕೆಂದ್ರೆ ಪೆನ್​ಡ್ರೈವ್​ ಪ್ರಕರಣದಲ್ಲಿ ಮಹತ್ವದ ದಾಖಲೆಯೇ ಬಿಡುಗಡೆ ಮಾಡಿದ್ರು, ಇಷ್ಟೇ ಅಲ್ಲ, ಆಡಿಯೋ ಬಾಂಬ್​ ಕೂಡ ಹಾಕಿದ್ದರು. ಡಿಸಿಎಂ ಡಿಕೆ.ಶಿವಕುಮಾರ್ ವಿರುದ್ಧ ಆರೋಪ ಕೂಡ ಮಾಡಿದ್ದರು. ಇದೇ ಕಾರಣದಿಂದಲೇ ಜೈಲು ಪಾಲಾದ್ರಾ ಅನ್ನೋ ಗುಮಾನಿಯೂ ಎದ್ದಿದೆ. ಯಾಕೆಂದ್ರೆ ಮೂಲಕ ದೂರಿನಲ್ಲಿ ಅತ್ಯಾಚಾರ ಕೇಸ್​ ದಾಖಲಾಗಿರಲಿಲ್ಲ. ಬಳಿಕ ಹಳೇ ಕೇಸ್​ಗೆ ಮತ್ತೊಂದು ಸೆಕ್ಷನ್ ಸೇರಿಸಿ ಅರೆಸ್ಟ್ ಮಾಡಲಾಗಿದೆ ಅಂತೆ. ದೂರು ನೀಡಿ ತಿಂಗಳ ಬಳಿಕ ಅತ್ಯಾಚಾರ ಸೆಕ್ಷನ್ ಸೇರಿಸಲಾಗಿದೆ. ಏಪ್ರಿಲ್​ 1ರಂದು ದಾಖಲಾಗಿದ್ದ ಮೂಲ ದೂರು ಜಾಮೀನು ಸಿಗುವಂತಾಹ ಕೇಸ್​ ಆಗಿತ್ತು.

ಸಂತ್ರಸ್ತೆ ಮಹಿಳೆಯ ಕಿಡ್ನ್ಯಾಪ್ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಇನ್ನು ಕೆ.ಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಕೇಸ್ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು 42 ನೇ ಎಸಿಎಂಎಂ ನ್ಯಾಯಾಲಯಕ್ಕೆ ಎಸ್​ಐಟಿ ಅಧಿಕಾರಿಗಳು ಕರೆತಂದಿದ್ದರು. ಸಂತ್ರಸ್ತೆ ಕಿಡ್ನಾಪ್​​ಗೆ ಸಹಕರಿಸಿದ್ದ ಆರೋಪ ಹಿನ್ನಲೆ ಬಂಧಿಸಲಾಗಿದೆ. ಮಧು, ಮನು, ಸುಜಯ್ ಮೂವರು ಸತೀಶ್ ಬಾಬುಗೆ ಸಹಾಯ ಮಾಡಿದ ಆರೋಪ ಹಿನ್ನಲೆ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.

ಇದನ್ನೂ ಓದಿ: ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ

ಇದೀಗ ಸತೀಶ್ ಬಾಬು ಹೊರತು ಪಡಿಸಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಾಲ್ಕು ದಿನ ಸತೀಶ್ ಬಾಬು ರನ್ನು ಎಸ್ಐಟಿ ಪೊಲೀಸ್ ಕಸ್ಟಡಿಗೆ ಕೇಳಿದೆ. ಇನ್ನು ವಿಚಾರಣೆ ಬಾಕಿ ಇರುವ ಹಿನ್ನಲೆ ನಾಲ್ಕು ದಿನ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.