ಬೆಂಗಳೂರು: ಮತ್ತುಬರಿಸುವ ಜ್ಯೂಸ್ ಕುಡಿಸಿ ಮಾಡೆಲ್ ಮೇಲೆ ಪ್ರಿಯತಮನೇ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಪ್ರಿಯತಮೆಯ ಖಾಸಗಿ ವಿಡಿಯೋಗಳನ್ನ ವೈರಲ್ ಮಾಡುತ್ತೀನಿ ಅಂತ ಬೆದರಿಸಿ 18 ಬಾರಿ ಆಕೆಗೆ ಲೈಂಗಿಕ ಕಿರುಕುಳ ನೀಡಿ ಖಾಸಗಿ ಫೋಟೋ, ವಿಡಿಯೋಗಳನ್ನ ತಂದೆ-ತಾಯಿಗೆ ತೋರಿಸ್ತೀನಿ ಎಂದು ಆರೋಪಿ ಬೆದರಿಕೆ ಹಾಕುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
ಆರೋಪಿ ಪ್ರಮೋದ್ ಎಂಬಾತ ಖಾಸಗಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೀನಿ ಅಂತಾ ಬೆದರಿಕೆ ಹಾಕಿ ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ನೊಂದ ಯುವತಿ ಯಶವಂತಪುರ ಠಾಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಆರೋಪಿ ಪ್ರಮೋದ್ ಕಳೆದ ವರ್ಷ ಯುವತಿಯ ಹಿಂದೆ ಬಿದ್ದು, ಪ್ರೀತಿಸುತ್ತಿದ್ದ. ಫೇಸ್ಬುಕ್ ಮೂಲಕ ಮಾಡೆಲ್ ಯುವತಿಯನ್ನು ಸಂಪರ್ಕಿಸಿ ಮೊಬೈಲ್ ನಂಬರ್ ಪಡೆದಿದ್ದನಂತೆ. ಮಾತಾಡಬೇಕು ಬಾ ಅಂತಾ ಯಶವಂತಪುರ ಬಳಿಯ ಲಾಡ್ಜ್ಗೆ ಕರೆಸಿ ಯುವತಿಗೆ ಮತ್ತುಬರುವ ಜ್ಯೂಸ್ ನೀಡಿದ್ದಾನೆ. ನಂತರ ಯುವತಿ ಜೊತೆಗಿನ ಖಾಸಗಿ ಫೋಟೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಅಲ್ಲದೇ ಸಂತ್ರಸ್ತ ಮಾಡೆಲ್ ಯುವತಿಯನ್ನು ಬ್ಲ್ಯಾಕ್ಮೇಲ್ ಮಾಡಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕರೆದಾಗಲೆಲ್ಲ ಬರಬೇಕು, ಇಲ್ಲದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಸಂತ್ರಸ್ತ ಮಾಡೆಲ್ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆ ಮೇಲೆ ಮಾನಸಿಕ ಅಸ್ವಸ್ಥ ಅತ್ಯಾಚಾರ?
ಹಾವೇರಿ: ಜಾನುವಾರು ಮಾರ್ಕೆಟ್ ಬಳಿ ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಮಾನಸಿಕ ಅಸ್ವಸ್ಥನನ್ನ ಕಟ್ಟಿಹಾಕಿ ಸ್ಥಳೀಯ ಥಳಿಸಿದ್ದಾರೆ. ಮಾರ್ಕೆಟ್ ಪಕ್ಕದ ಹೊಟೇಲ್ಗೆ ಬಂದಿದ್ದ ಮಹಿಳೆ ಮೇಲೆ ಮಾನಸಿಕ ಅಸ್ವಸ್ಥ ಅತ್ಯಾಚಾರ ಎಸಗಿದ್ದ ಎಂದು ತಿಳಿದುಬಂದಿದೆ. ಸ್ಥಳಕ್ಕೆ 112 ವಾಹನದ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ
‘ಕೊರೊನಾ’ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರ: ಕರ್ನಾಟಕ ಕಾಂಗ್ರೆಸ್ ಟ್ವೀಟಾಸ್ತ್ರ!