ದೇವಸ್ಥಾನ ತೆರೆಯುತ್ತಿದ್ದಂತೆ ಶುಭ ಕಾರ್ಯ.. 10 ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಮಿಗಳು ದೇಗುಲದಲ್ಲಿ ಮದುವೆ
ಅನ್ಲಾಕ್ ಆಗುತ್ತಿದ್ದಂತೆ ಬೆಂಗಳೂರಿನ ಮೆಜೆಸ್ಟಿಕ್ನ ಅಣ್ಣಮ್ಮ ದೇಗುಲದಲ್ಲಿ ಪ್ರೇಮಿಗಳು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈ ಮೂಲದ ಸುಧಾಕರ್ ಮತ್ತು ಲೈಲಾ ಎಂಬ ಪ್ರೇಮಿಗಳು ಬೆಂಗಳೂರಿನಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ಡೌನ್ ಘೋಷಿಸಿತ್ತು. ಸದ್ಯ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದಂತೆ ಎರಡು ತಿಂಗಳ ಬಳಿಕ ಇಂದಿನಿಂದ ರಾಜ್ಯದ ಬಹುತೇಕ ದೇವಸ್ಥಾನಗಳು ಓಪನ್ ಆಗಿವೆ. ಇದರ ನಡುವೆ ದೇವಸ್ಥಾನ ತೆರೆಯುತ್ತಿದ್ದಂತೆ ಇಂದು ಬೆಳ್ಳಂ ಬೆಳಗ್ಗೆ ದೇವರ ಸನ್ನಿಧಾನದಲ್ಲಿ ಶುಭ ಕಾರ್ಯ ಜರುಗಿದೆ.
ಅನ್ಲಾಕ್ ಆಗುತ್ತಿದ್ದಂತೆ ಬೆಂಗಳೂರಿನ ಮೆಜೆಸ್ಟಿಕ್ನ ಅಣ್ಣಮ್ಮ ದೇಗುಲದಲ್ಲಿ ಪ್ರೇಮಿಗಳು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈ ಮೂಲದ ಸುಧಾಕರ್ ಮತ್ತು ಲೈಲಾ ಎಂಬ ಪ್ರೇಮಿಗಳು ಬೆಂಗಳೂರಿನಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಹತ್ತು ವರ್ಷದಿಂದ ಪ್ರೀತಿಸುತ್ತಿದ್ದ ಸುಧಾಕರ್, ಲೈಲಾ ಎರಡು ತಿಂಗಳ ಹಿಂದೆ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಇವರಿಬ್ಬರ ಪ್ರೀತಿಗೆ ಕುಟುಂಬಸ್ಥರಿಂದ ವಿರೋಧವಿತ್ತು. ಅಲ್ಲದೆ ಬೇರೆ ಯುವಕನ ಜೊತೆ ಲೈಲಾಳ ಮದುವೆ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಹೀಗಾಗಿ ಈ ಜೋಡಿ ಚೆನ್ನೈನಿಂದ ಬೆಂಗಳೂರಿಗೆ ಬಂದಿತ್ತು. ಆದ್ರೆ ಕೊರೊನಾ ಲಾಕ್ಡೌನ್ ಕಟ್ಟುನಿಟ್ಟಿನ ಮಾರ್ಗಸೂಚಿ ಇದ್ದ ಕಾರಣ ಮದುವೆಯಾಗಲು ಆಗಿರಲಿಲ್ಲ.
ಸದ್ಯ ಲಾಕ್ಡೌನ್ ಓಪನ್ ಆಗುತ್ತಿದ್ದಂತೆ 10 ವರ್ಷದ ಪ್ರೀತಿಗೆ ಮೂರು ಗಂಟು ಬಿದ್ದಿದೆ. ಕೆಲ ಸಂಬಂಧಿಕರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಪ್ರೇಮಿಗಳು ಸರಳವಾಗಿ ವಿವಾಹವಾಗಿದ್ದಾರೆ. ದೇವಸ್ಥಾನ ತೆರೆದ ಮೊದಲ ದಿನವೇ ಶುಭ ಕಾರ್ಯ ಜರುಗಿದೆ. ಪ್ರೇಮಿಗಳು ಒಂದಾಗಲು ದೇವಿಯ ಆಶೀರ್ವಾದ ಸಿಕ್ಕಿದೆ.
ಇದನ್ನೂ ಓದಿ: Karnataka Unlock 3.0: ದರ್ಶನಕ್ಕೆ ಸಿದ್ಧವಾದ ದೇವಾಲಯಗಳು.. ದೇವರ ಕಾಣಲು ಇಂದಿನಿಂದ ಭಕ್ತರಿಗೆ ಅವಕಾಶ