ಸೂರ್ಯಗ್ರಹಣ (Solar Eeclipse 2023) ಸಂಭವಿಸಿದ 2 ವಾರಗಳ ಬೆನ್ನಲ್ಲೇ ಚಂದ್ರಗ್ರಹಣ (Lunar Eclipse 2023) ಸಂಭವಿಸುತ್ತಿದೆ. ಈ ವರ್ಷದ 2ನೇ ಮತ್ತು ಕೊನೆಯ ಚಂಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾತ್ರಿ 11.30ಕ್ಕೆ ಆರಂಭವಾಗುವ ಚಂದ್ರಗ್ರಹಣ ನಾಳೆ ಬೆಳಗಿನ ಜಾವ 2.24 ಅಥವಾ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ರಾತ್ರಿ 11.30 ಕ್ಕೆ ಗ್ರಹಣ ಸ್ಪರ್ಶಕಾಲ ಆರಂಭವಾಗುತ್ತದೆ. ಮಧ್ಯರಾತ್ರಿ 1.42ಕ್ಕೆ ಗ್ರಹಣ ಮಧ್ಯಕಾಲ ಹಾಗೂ ಬೆಳಗಿನ ಜಾವ 3.30ಕ್ಕೆ ಗ್ರಹಣ ಮೋಕ್ಷಕಾಲವಿರಲಿದೆ.
ಈ ಚಂದ್ರ ಗ್ರಹಣವು ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರದ ನಾಲ್ಕನೆಯ ಚರಣದಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ಕಟಕ ಮತ್ತು ಸಿಂಹ ಲಗ್ನಗಳು ನಡೆಯುತ್ತದೆ. ಚಂದ್ರ ಗ್ರಹಣದ ಸಮಯದಲ್ಲಿ, ಚಂದ್ರನು ಮೇಷ ರಾಶಿಯಲ್ಲಿರುತ್ತಾನೆ. ಈ ಕಾರಣದಿಂದಾಗಿ, ಮೇಷ ರಾಶಿಯ ಜನರ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಮೇಷ ರಾಶಿಯವರಿಗೆ ಚಂದ್ರ ಗ್ರಹಣದ ಸಮಯವು ಅನುಕೂಲಕರವಾಗಿರುವುದಿಲ್ಲ. ಚಂದ್ರ ಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಪರಿಣಾಮ ಬೀರಲಿದೆ.
ಇದನ್ನೂ ಓದಿ: Lunar Eclipse 2023: ಚಂದ್ರ ಗ್ರಹಣದ ವೇಳೆ ಈ ತಪ್ಪುಗಳನ್ನು ಮಾಡಬೇಡಿ, ಅಧ್ಯಾತ್ಮ ಹೇಳೋದೇನು?
ಶುಭ ಫಲ: ಮಿಥುನ, ಕಟಕ, ವೃಶ್ಚಿಕ, ಕುಂಭ
ಮಿಶ್ರ ಫಲ: ಸಿಂಹ, ತುಲಾ, ಧನಸ್ಸು, ಮೀನ
ಅಶುಭ ಫಲ: ಮೇಷ, ವೃಷಭ, ಕನ್ಯಾ, ಮಕರ
ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಮತ್ತು ಗ್ರಹಣ ಬಿಟ್ಟ ನಂತರ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು. ಗ್ರಹಣ ಸ್ಪರ್ಶ ಸಮಯದಲ್ಲಿ ಮಾಡುವ ಸ್ನಾನವು ಲಕ್ಷ ಸ್ನಾನಗಳ ಫಲವನ್ನು ಮೋಕ್ಷ ನಂತರ ಮಾಡುವ ಸ್ನಾನವು ಅನಂತ ಸ್ನಾನಗಳ ಫಲವನ್ನು ಕೊಡುತ್ತದೆ. ಗ್ರಹಣ ಸಮಯದಲ್ಲಿ ಮಾಡುವ ಜಪ-ತಪಾದಿ, ಹೋಮವು ಕೋಟಿ ಹೋಮಗಳು ಫಲವನ್ನು ಕೊಡುತ್ತದೆ.
ಕಪ್ಪು ಅಥವಾ ಧೂಮ್ರ (ಬೂದು) ವರ್ಣ ಮತ್ತು ಉದ್ದಿನಕಾಳು ಹಾಗೂ ಶ್ವೇತ ವಸ್ತ್ರ ಮತ್ತು ಅಕ್ಕಿ ಇವುಗಳನ್ನು ದಕ್ಷಿಣೆ ಸಮೇತವಾಗಿ ದೇವಾಲಯದಲ್ಲಿ / ಬ್ರಾಹ್ಮಣರಿಗೆ / ಸತ್ಪಾತ್ರರಿಗೆ ದಾನ ಮಾಡಿ. ಗ್ರಹಣ ಸಮಯದಲ್ಲಿ ದುರ್ಗಾದೇವಿ, ಈಶ್ವರ ಸುಬ್ರಹ್ಮಣ್ಯ, ನಾಗ ದೇವತೆ, ಕಾಳಿ ಮಂತ್ರ ಜಪ ಅಥವಾ ಸ್ತೋತ್ರ ಪಾರಾಯಣ, ದುರ್ಗಾ ಕವಚ, ಸಪ್ತಶತೀ ಮತ್ತು ಸಹಸ್ರನಾಮ ಸ್ತೋತ್ರ ಪಠಿಸಿರಿ.
ಮಾಹಿತಿ: ವೇ!!ಶ್ರೀ!!ಕುಮಾರಸ್ವಾಮಿ
ಶ್ರೀ ಜ್ಯೋತಿಷ್ಯ ಸಲಹಾ ಕೇಂದ್ರ