AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಿಂದ ಸಂಜೆ ವೇಳೆಯೂ ವಿಮಾನ ಹಾರಾಟ ಆರಂಭ: ಬಿವೈ ರಾಘವೇಂದ್ರ

ನವೆಂಬರ್‌ 17 ರಿಂದ ಸ್ಟಾರ್‌ ಏರ್‌ ತನ್ನ ಸೇವೆ ಆರಂಭಿಸಲಿದ್ದು, ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್‌ಗೆ ತನ್ನ ಸೇವೆ ಆರಂಭಿಸಲಿದೆ. ಈಗಾಗಲೇ ಸ್ಟಾರ್‌ ಏರ್‌ಲೈನ್ಸ್‌ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ತನ್ನ ಕಾರ್ಯಾಚರಣೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇನ್ನು ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಆರಂಭವಾಗಿದೆ.

ಶಿವಮೊಗ್ಗದಿಂದ ಸಂಜೆ ವೇಳೆಯೂ ವಿಮಾನ ಹಾರಾಟ ಆರಂಭ: ಬಿವೈ ರಾಘವೇಂದ್ರ
ಶಿವಮೊಗ್ಗ ವಿಮಾನ ನಿಲ್ದಾಣ
Basavaraj Yaraganavi
| Updated By: ವಿವೇಕ ಬಿರಾದಾರ|

Updated on:Oct 28, 2023 | 12:48 PM

Share

ಶಿವಮೊಗ್ಗ ಅ.28: ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga Airport) ಇಂಡಿಗೋ ವಿಮಾನ ಹಾರಾಟ ನಡೆಸಲಿವೆ. ಮುಂದಿನ ತಿಂಗಳಿಂದ ಸಂಜೆ ವೇಳೆಯೂ ವಿಮಾನ ಹಾರಾಟ ನಡೆಸಲಿವೆ. ಚೆನ್ನೈ, ಹೈದ್ರಾಬಾದ್​ಗೆ ಸ್ಟಾರ್​​ಏರ್​​ಲೈನ್ಸ್​​ ವಿಮಾನ ಹಾರಾಟ ನಡೆಸಲಿವೆ. ಏರ್​​ಪೋರ್ಟ್​​ ನಿರ್ವಹಣೆಗೆ ತುಂಬಾ ಖರ್ಚು ಬರುತ್ತಿದೆ. ಖರ್ಚು ಸರಿದೂಗಿಸಲು ಸ್ಥಳೀಯವಾಗಿ ಬಂಡವಾಳ ಯೋಜನೆಗೆ ಚಿಂತನೆ ನಡೆದಿದೆ ಎಂದು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ (BY Raghavendra) ಹೇಳಿದರು.

ಹೈದರಾಬಾದ್‌, ತಿರುಪತಿ, ಗೋವಾಕ್ಕೂ ವಿಮಾನ ಹಾರಾಟ

ನವೆಂಬರ್‌ 17 ರಿಂದ ಸ್ಟಾರ್‌ ಏರ್‌ ತನ್ನ ಸೇವೆ ಆರಂಭಿಸಲಿದ್ದು, ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್‌ಗೆ ತನ್ನ ಸೇವೆ ಆರಂಭಿಸಲಿದೆ. ಈಗಾಗಲೇ ಸ್ಟಾರ್‌ ಏರ್‌ಲೈನ್ಸ್‌ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ತನ್ನ ಕಾರ್ಯಾಚರಣೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇನ್ನು ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಆರಂಭವಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಲು ಪರದಾಡಿದ ಯಡಿಯೂರಪ್ಪ ಇದ್ದ ವಿಮಾನ

ಸ್ಟಾರ್‌ ಏರ್‌ ವಿಮಾನದ ವೇಳಾಪಟ್ಟಿ

ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ ಆರು ದಿನ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಸ್ಟಾರ್‌ ಏರ್‌ ವಿಮಾನವು ಬೆಳಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಟು ಅಂದು ಬೆಳಗ್ಗೆ 10.35ಕ್ಕೆ ಶಿವಮೊಗ್ಗ ವಿಮಾನ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಬಳಿಕ ಅದೇ ದಿನ ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12.35ಕ್ಕೆ ಹೊರಟು ಮಧ್ಯಾಹ್ನ 1.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.ಇನ್ನು ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಗೋವಾ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3.15ಕ್ಕೆ ಹೊರಟು ಸಂಜೆ 4.05ಕ್ಕೆ ಶಿವಮೊಗ್ಗ ತಲುಪಲಿದೆ. ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್‌ ತಲುಪಲಿದೆ.

ಟಿಕೆಟ್ ಬುಕಿಂಗ್‌ ಆರಂಭ

ಸ್ಟಾರ್‌ ಏರ್‌ಲೈನ್ಸ್‌ ಸಂಸ್ಥೆ ವಿಮಾನಯಾನ ಸೇವೆ ಆರಂಭಕ್ಕೆ ದಿನಾಂಕ ಪ್ರಕಟಿಸುತ್ತಿದ್ದಂತೆ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ಕೂಡ ಆರಂಭವಾಗಿದೆ. ಶುಭಂ ಹೊಟೇಲ್‌ ಸಮೀಪ ಇರುವ ಬ್ಲೂಬೆಲ್‌ ಹಾಲಿಡೇಸ್‌ನಲ್ಲಿ ಸ್ಟಾರ್‌ ಏರ್‌ ಟಿಕೆಟ್‌ ಬುಕಿಂಗ್‌ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ 8123002917, 9449502917 ಸಂಪರ್ಕಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:40 pm, Sat, 28 October 23