ಕರಾವಳಿ ಜಿಲ್ಲೆಗಳಿಗೆ ‘ಕ್ಯಾರ್’ ಚಂಡಮಾರುತ ಅಪ್ಪಳಿಸಿದ ಬೆನ್ನಲ್ಲೇ ‘ಮಹಾ’ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ರಕ್ಕಸ ಅಲೆಗಳು ಕಡಲಲ್ಲಿ ಆರ್ಭಟಿಸುತ್ತಿವೆ. ಇದರಿಂದ ಕರಾವಳಿ ಭಾಗದ ಜನರು ಹಾಗೂ ಪ್ರವಾಸಿಗರಲ್ಲಿ ‘ಮಹಾ’ ಭಯ ಶುರುಲಾಗಿದೆ.
ಕರಾವಳಿಗೆ ‘ಮಹಾ’ ಅನ್ನೋ ಚಂಡಮಾರುತ ಅಪ್ಪಳಿಸಿದೆ ಅಂತ ಹವಾಮಾನ ಇಲಾಖೆ ವರದಿ ನೀಡಿದೆ. ಆದ್ರಿಂದ ಕಡಲ ನಿವಾಸಿಗಳು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚಿಸಿದೆ. ಅಷ್ಟೇ ಅಲ್ಲ ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ. ಯಾಕಂದ್ರೆ ಇದು ಕ್ಯಾರ್ ಚಂಡಮಾರುತಕ್ಕಿಂತ ಭಯಂಕರವಾಗಿ ಸುಮಾರು 20 ಕಿ.ಮೀ ವೇಗದಲ್ಲಿ ಗಾಳಿ ಬೀಸೋ ಸೈಕ್ಲೋನ್ ಆಗಿದೆ. ಹೀಗಾಗಿ ಮೀನುಗಾರರು ನವೆಂಬರ್ 4ರ ವರೆಗೆ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ‘ಮಹಾ’ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ.
Published On - 10:53 am, Fri, 1 November 19