ಮುಜರಾಯಿ ದೇವಸ್ಥಾನಗಳಲ್ಲಿ ಇನ್ನು ಮುಂದೆ ಸರ್ಕಾರಿ ಶಾದಿ ಭಾಗ್ಯ

ಬೆಂಗಳೂರು: ಹಿಂದೆ ಹಿರಿಯರು ಹೇಳ್ತಿದ್ರು ಮದುವೆ ಮಾಡುವುದು ಮತ್ತು ಮನೆ ಕಟ್ಟುವುದು ಸಾಧ್ಯದ ಕೆಲಸವಲ್ಲ. ಅದಕ್ಕೆಲ್ಲ ಬಹಳ ಖರ್ಚು, ಕಷ್ಟಗಳಿರ್ತಾವೇ ಅಂತ ಆದ್ರೆ ಈಗ ರಾಜ್ಯ ಸರ್ಕಾರ ಶಾದಿ ಭಾಗ್ಯ ಕಲ್ಪಿಸಿದೆ. ಮದ್ವೆಯಾಗೋ ನವ ಜೋಡಿಗಳಿಗೆ ಭಾರಿ ಗಿಫ್ಟ್​ಗಳನ್ನು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇಂದು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಧಾರ್ಮಿಕ ದತ್ತಿ ವ್ಯಾಪ್ತಿಯ ಎ ದರ್ಜೆಯ ಆಯ್ದ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನ ನೆರವೇರಿಸಲು 90-100 ದೇವಸ್ಥಾನಗಳನ್ನ ಆಯ್ಕೆ ಮಾಡಿಲಾಗಿದೆ. ಏಪ್ರಿಲ್ 26, ಮೇ 24 ಸಾಮೂಹಿಕ […]

ಮುಜರಾಯಿ ದೇವಸ್ಥಾನಗಳಲ್ಲಿ ಇನ್ನು ಮುಂದೆ ಸರ್ಕಾರಿ ಶಾದಿ ಭಾಗ್ಯ
Follow us
ಸಾಧು ಶ್ರೀನಾಥ್​
|

Updated on:Oct 31, 2019 | 6:48 PM

ಬೆಂಗಳೂರು: ಹಿಂದೆ ಹಿರಿಯರು ಹೇಳ್ತಿದ್ರು ಮದುವೆ ಮಾಡುವುದು ಮತ್ತು ಮನೆ ಕಟ್ಟುವುದು ಸಾಧ್ಯದ ಕೆಲಸವಲ್ಲ. ಅದಕ್ಕೆಲ್ಲ ಬಹಳ ಖರ್ಚು, ಕಷ್ಟಗಳಿರ್ತಾವೇ ಅಂತ ಆದ್ರೆ ಈಗ ರಾಜ್ಯ ಸರ್ಕಾರ ಶಾದಿ ಭಾಗ್ಯ ಕಲ್ಪಿಸಿದೆ. ಮದ್ವೆಯಾಗೋ ನವ ಜೋಡಿಗಳಿಗೆ ಭಾರಿ ಗಿಫ್ಟ್​ಗಳನ್ನು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇಂದು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಧಾರ್ಮಿಕ ದತ್ತಿ ವ್ಯಾಪ್ತಿಯ ಎ ದರ್ಜೆಯ ಆಯ್ದ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನ ನೆರವೇರಿಸಲು 90-100 ದೇವಸ್ಥಾನಗಳನ್ನ ಆಯ್ಕೆ ಮಾಡಿಲಾಗಿದೆ. ಏಪ್ರಿಲ್ 26, ಮೇ 24 ಸಾಮೂಹಿಕ ವಿವಾಹಗಳು ನಡೆಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಈಗಾಗಲೇ ಸುತ್ತೋಲೆಗಳನ್ನ ಹೊರಡಿಸಲಾಗಿದೆ. 30ದಿನಕ್ಕೂ ಮೊದಲು ನೋಂದಣಿ ಮಾಡಿಕೊಳ್ಳಬೇಕು. ದೇವಸ್ಥಾನಗಳಲ್ಲಿ ಎರಡನೇ ಮದುವೆಗಳಿಗೆ ಯಾವುದೇ ರೀತಿಯ ಅವಕಾಶವಿರುವುದಿಲ್ಲ. ವಧು, ವರರ ವಯಸ್ಸು ಖಚಿತಪಡಿಸಿಕೊಂಡು ವಿವಾಹವನ್ನು ಮಾಡಲಾಗುವುದು. ಸ್ಥಳದಲ್ಲೇ ವಿವಾಹ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿಧಾನಸೌಧದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಈ ಶಾದಿ ಭಾಗ್ಯಕ್ಕೆ ಶಿಶು ಕಲ್ಯಾಣ ಉಲಾಖೆಯಿಂದ ಪ್ರೋತ್ಸಾಗ ಧನ ನೀಡಲಾಗುತ್ತದೆ. ಮದುವೆಗೆ 40 ಸಾವಿರ ರೂ ವೆಚ್ಚದ 8 ಗ್ರಾಂ ಚಿನ್ನದ ತಾಳಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪಾರದರ್ಶಕವಾಗಿ ಖರೀದಿ ಮಾಡಿ ಕೊಡಲಾಗುತ್ತೆ. ಅಲ್ಲದೆ ವರನಿಗೆ ಬಟ್ಟೆ, ಸಣ್ಣ ಪುಟ್ಟ ಖರ್ಚುಗಳಿಗಾಗಿ 5 ಸಾವಿರ, ವಧುವಿಗೆ ಧಾರೆ ಸೀರೆಗೆ 10 ಸಾವಿರ ವಿವಾಹ ಆದ್ಮೇಲೆ ಅವ್ರ ಖಾತೆಗೆ ಹಣ ಜಮೆ ಮಾಡಲಾಗುತ್ತೆ. ಒಟ್ಟಾರೆಯಾಗಿ ಪ್ರತಿ ಜೋಡಿಗೆ 65 ಸಾವಿರ ರೂ. ಖರ್ಚು ಮಾಡಲಾಗುವುದು ಮತ್ತು ವರನಿಗೆ $10,000, ವಧುವಿನ ಸೀರೆಗೆ ₹15,000 ಅನುದಾನ ನೀಡಲಾಗುವುದು.

ಮದುವೆಗೆ ರಾಜ್ಯ ಸರ್ಕಾರದ ಷರತ್ತುಗಳು: -ವರನಿಗೆ 21, ವಧುವಿಗೆ 18 ವರ್ಷ ವಯಸ್ಸಾಗಿರಬೇಕು -ಯಾವುದೇ ಕಾರಣಕ್ಕೂ 2ನೇ ಮದುವೆಗೆ ಅವಕಾಶ ಇರಲ್ಲ -ವಧು, ವರರು ಪೋಷಕರ ಜತೆಯಲ್ಲಿಯೇ ಪಾಲ್ಗೊಳ್ಳಬೇಕು -ಕುಟುಂಬದವರೊಂದಿಗೆ ಇರುವ ಸಂಬಂಧದ ಬಗ್ಗೆ ದಾಖಲೆ -ಪರೋಕ್ಷವಾಗಿ ಪ್ರೀತಿಸಿ ಮದುವೆಯಾದವರಿಗೆ ಅವಕಾಶ ಇಲ್ಲ -ತಂದೆ, ತಾಯಿ ಒಪ್ಪಿದರೆ ಅಂತರ್ಜಾತಿ ವಿವಾಹ ಆಗಬಹುದು -ವಿವಾಹಕ್ಕೆ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ದಾಖಲೆ ನೀಡಬೇಕು -ವಿವಾಹಕ್ಕೆ ಸಾಕ್ಷಿಗಳನ್ನು ಕರೆತರಬೇಕು

ಎಲ್ಲೆಲ್ಲಿ ಸರ್ಕಾರಿ ಮದುವೆ ನಡೆಯುತ್ತೆ? ಬೆಂಗಳೂರಿನ ಬನಶಂಕರಿ ದೇವಸ್ಥಾನ, ಕೊಲ್ಲೂರು ದೇವಸ್ಥಾನ. ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಸುಬ್ರಹ್ಮಣ್ಯ ದೇವಾಲಯ ಸೇರಿ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹಕ್ಕೆ ಸರ್ಕಾರ ನಿರ್ಧರಿಸಿದೆ.

Published On - 3:48 pm, Thu, 31 October 19

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?