ಮಹದಾಯಿ ಕುರಿತಾದ ಹೇಳಿಕೆ; ಗೋವಾ ಮುಖ್ಯಮಂತ್ರಿಯನ್ನು ಕರೆದು ಮಾತನಾಡುತ್ತೇವೆ: ಡಿವಿ ಸದಾನಂದ ಗೌಡ

| Updated By: ಸಾಧು ಶ್ರೀನಾಥ್​

Updated on: Jan 30, 2021 | 3:52 PM

ಎಲ್ಲರೂ ಅವರವರ ರಾಜ್ಯದಲ್ಲಿ ರಾಜಕೀಯ ಕಾರಣಕ್ಕಾಗಿ ಮಾತನಾಡುತ್ತಾರೆ. ಆದರೆ, ಮಹದಾಯಿ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ನಾವು ಸಹ ಕುಡಿಯೋದಕ್ಕೆ ನೀರು ಕೇಳಿದ್ದೇವೆ.

ಮಹದಾಯಿ ಕುರಿತಾದ ಹೇಳಿಕೆ; ಗೋವಾ ಮುಖ್ಯಮಂತ್ರಿಯನ್ನು ಕರೆದು ಮಾತನಾಡುತ್ತೇವೆ: ಡಿವಿ ಸದಾನಂದ ಗೌಡ
ಡಿ.ವಿ.ಸದಾನಂದ ಗೌಡ
Follow us on

ಬೆಂಗಳೂರು: ಮಹದಾಯಿ ನಮ್ಮ ತಾಯಿ ಇದ್ದಂತೆ ಎನ್ನುವ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಹೇಳಿಕೆಯ ಕುರಿತಾಗಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಪ್ರತಿಕ್ರಿಯಿಸಿದ್ದು, ಗೋವಾ ಮುಖ್ಯಮಂತ್ರಿಯನ್ನು ಕರೆದು ಮಾತನಾಡಿಸುವುದಾಗಿ ತಿಳಿಸಿದ್ದಾರೆ.

ಎಲ್ಲರೂ ಅವರವರ ರಾಜ್ಯದಲ್ಲಿ ರಾಜಕೀಯ ಕಾರಣಕ್ಕಾಗಿ ಮಾತನಾಡುತ್ತಾರೆ. ಆದರೆ, ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ನಾವು ಸಹ ಕುಡಿಯೋದಕ್ಕೆ ನೀರು ಕೇಳಿದ್ದೇವೆ. ಈ ಕುರಿತು, ಸುಪ್ರೀಂ ಕೋರ್ಟ್​ ಮತ್ತು ವಾಟರ್​ ಟ್ರಿಬ್ಯುನಲ್​ ಜಡ್ಜ್​ಮೆಂಟ್​ ಇದೆ. ಕುಡಿಯುವ ನೀರಿಗೆ ಯಾರೂ ತೊಂದರೆ ಮಾಡುವಂತಿಲ್ಲ ಎಂದು ಸದಾನಂದ ಗೌಡ ದೇವನಹಳ್ಳಿಯ ಸಾದಹಳ್ಳಿ ಬಳಿ ಹೇಳಿದ್ದಾರೆ.

ಕರ್ನಾಟಕ ಮತ್ತು ಗೋವಾ ಎರಡೂ ಕಡೆಗಳಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ. ಇದರ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಗೋವಾ ಮುಖ್ಯಮಂತ್ರಿಯನ್ನೂ ಕರೆದು ಮಾತನಾಡಲಿದ್ದೇವೆ ಎಂದು ಸದಾನಂದಗೌಡ ಹೇಳಿದ್ದಾರೆ.

ಕಿತ್ತುಹೋದ ಬ್ಯಾರೇಜ್​ನಿಂದ ತೆಲಂಗಾಣಕ್ಕೆ ನೀರು! ಕರ್ನಾಟಕದ ಜನತೆಗೆ ಕುಡಿಯುವ ನೀರೂ ಇಲ್ಲ; ನೀರಾವರಿಗೂ ಇಲ್ಲ