ಅಪ್ಪನ ಅಗಲಿಕೆ, ಅಂಗಡಿಯಲ್ಲಿ ಕೆಲಸ: ಹೇಗಿತ್ತು ಗೊತ್ತಾ ಮಹಾಂತೇಶ್ ಬೀಳಗಿ ಬಾಲ್ಯ?
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ದುರಂತ ಸಾವಿನ ಬೆನ್ನಲ್ಲೇ ಅವರ ಬಾಲ್ಯದ ಜೀವನದ ಬಗ್ಗೆ ನೆರೆ ಹೊರೆಯವರು ನೆನೆದು ಭಾವುಕರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ತಾಯಿಯ ಕಷ್ಟದ ದುಡಿಮೆಯ ನಡುವೆಯೂ ಸ್ವಂತ ಪರಿಶ್ರಮದಿಂದ ಮಹಾಂತೇಶ್ ಉನ್ನತ ಹುದ್ದೆಗೇರಿದ್ದರು. ದೊಡ್ಡ ಅಧಿಕಾರಿಯಾದರೂ ತಮ್ಮ ಬಾಲ್ಯದ ಸ್ನೇಹಿತರೊಂದಿಗೂ ಸರಳವಾಗಿ, ಆತ್ಮೀಯವಾಗಿ ಬೆರೆಯುತ್ತಿದ್ದರು ಎನ್ನಲಾಗಿದೆ.
ಬೆಳಗಾವಿ, ನವೆಂಬರ್ 26: ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ದುರಂತ ಸಾವಿನ ಬೆನ್ನಲ್ಲೇ ಅವರ ಬಾಲ್ಯದ ಜೀವನ ನೆನೆದು ನೆರೆ ಹೊರೆಯವರು ಭಾವುಕರಾಗಿದ್ದಾರೆ. ಮಹಾಂತೇಶ್ ಅವರ ಜೀವನವು ಕಷ್ಟಗಳಿಂದ ಕೂಡಿದ ಒಂದು ಅದ್ಭುತ ಸಾಧನೆಯ ಕಥೆಯಾಗಿದೆ. ಅವರು ಐದು-ಆರು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿ ಬಹಳ ಕಷ್ಟಪಟ್ಟು ನೂಲು ಮತ್ತು ಸೀರೆಗಳನ್ನು ಮಾರಾಟ ಮಾಡಿ ನಾಲ್ಕು ಮಕ್ಕಳನ್ನು ಬೆಳೆಸಿದರು. ಈ ಕಷ್ಟದ ಪರಿಸ್ಥಿತಿಯಲ್ಲೂ ಮಹಾಂತೇಶ್ ಅವರು ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಸ್ಥಳೀಯವಾಗಿ ಪ್ರೈಮರಿ ಹಾಗೂ ಕಾಲೇಜು ಶಿಕ್ಷಣ ಪೂರೈಸಿದ ಅವರು, ಬಿ.ಎ. ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದರು. ಶಿಕ್ಷಣದ ಜೊತೆಗೆ ಅವರು ತಮ್ಮ ಜೀವನೋಪಾಯಕ್ಕಾಗಿ ಹಲವು ಕೆಲಸಗಳನ್ನು ಮಾಡಿದ್ದರು. ಅಂಗಡಿಗಳಲ್ಲಿ ಕೆಲಸ ಮಾಡುವ ಜೊತೆಗೆ ಜಾತ್ರೆಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಐಎಎಸ್ ಅಧಿಕಾರಿಯಾಗಿ, ಡಿಸಿ ಆದ ನಂತರವೂ ಅವರಲ್ಲಿ ಎಂದಿಗೂ ಯಾವುದೇ ಬದಲಾವಣೆಯನ್ನು ಕಾಣಲಿಲ್ಲ ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
