AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಮಲಪ್ರಭಾ ಡ್ಯಾಂ ಭರ್ತಿಗೆ 2 ಅಡಿ ಬಾಕಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ

ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕರ್ನಾಟಕದ ಬಹುತೇಕ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಯಶಗಳು ಕೂಡ ಭರ್ತಿಯಾಗಿವೆ. ಭದ್ರಾ, ಹಾರಂಗಿ, ಕಬಿನಿ, ಕೆಆರ್​ಎಸ್, ಹೇಮಾವತಿ, ಲಿಂಗನಮಕ್ಕಿ, ಆಲಮಟ್ಟಿ, ಮಲಪ್ರಭಾ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಹಾಗಾದರೆ ಆಗಸ್ಟ್​ 28 ರಂದು ರಾಜ್ಯದ 14 ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ ಇಲ್ಲಿದೆ

Karnataka Dam Water Level: ಮಲಪ್ರಭಾ ಡ್ಯಾಂ ಭರ್ತಿಗೆ 2 ಅಡಿ ಬಾಕಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ
ಮಲಪ್ರಭಾ ಡ್ಯಾಂ
ವಿವೇಕ ಬಿರಾದಾರ
|

Updated on: Aug 28, 2024 | 7:44 AM

Share

ಕಳದೆ ಒಂದು ತಿಂಗಳಿನಿಂದ ಸುರಿದ ಮಳೆಯಿಂದ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ಜಲಾಶಯ ಕಟ್ಟಲಾಗಿದೆ. ಜಲಾಶಯ ತುಂಬಲು ಕೇವಲ ಎರಡು ಅಡಿ ಬಾಕಿ ಉಳಿದೆದೆ. ಮಲಪ್ರಭಾ ಜಲಾಶಯಕ್ಕೆ (Karnataka Dam Water Level) ಇಂದು (ಆಗಸ್ಟ್​.28) ಒಳಹರಿವು, ಹೊರಹರಿವು ಮತ್ತು ಡ್ಯಾಂ ನೀರಿನ ಮಟ್ಟ ವಿವರ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 120.41 122.13 98781 116605
ತುಂಗಭದ್ರಾ ಜಲಾಶಯ (Tungabhadra Dam) 497.71 105.79 87.77 79.70 20956 10495
ಮಲಪ್ರಭಾ ಜಲಾಶಯ (Malaprabha Dam) 633.80 37.73 35.65 23.01 9444 9544
ಕೆ.ಆರ್.ಎಸ್ (KRS Dam) 38.04 49.45 47.98 24.04 4695 4189
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 146.92 71.83 36564 7690
ಕಬಿನಿ ಜಲಾಶಯ (Kabini Dam) 696.13 19.52 18.45 13.89 2684 2300
ಭದ್ರಾ ಜಲಾಶಯ (Bhadra Dam) 657.73 71.54 65.17 47.94 7402 3941
ಘಟಪ್ರಭಾ ಜಲಾಶಯ (Ghataprabha Dam) 662.91 51.00 50.48 41.47 22862 19650
ಹೇಮಾವತಿ ಜಲಾಶಯ (Hemavathi Dam) 890.58 37.10 36.64 26.53 9485 5500
ವರಾಹಿ ಜಲಾಶಯ (Varahi Dam) 594.36 31.10 22.55 10.03 2254 0
ಹಾರಂಗಿ ಜಲಾಶಯ (Harangi Dam)​​ 871.38 8.50 8.31 8.04 1918 750
ಸೂಫಾ (Supa Dam) 564.00 145.33 127.64 78.92 22143 4559
ನಾರಾಯಣಪುರ ಜಲಾಶಯ (Narayanpura Dam) 492.25 33.31 29.70 24.04 121837 134930
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 20.93 24.44 346 135

ಒಟ್ಟು 2079 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2078.00 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಈಗ 9444 ಸಾವಿರ ಕ್ಯೂಸೆಕ್ಸ್​ ನೀರು ಹರಿದು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ