ಮೈಸೂರು ಜೋಡಿ ಕೊಲೆ: ಆರೋಪಿ ಬಂಧನ, ಮತ್ತೋರ್ವನಿಗಾಗಿ ಶೋಧ
Mysore Double Murder Case | ನಿವೇಶನ ವಿಚಾರ ಹಾಗೂ ಹಳೇ ದ್ವೇಷ ಹಿನ್ನೆಲೆ ಫೆಬ್ರವರಿ7ರಂದು ಕಿಶನ್ ಮತ್ತು ಕಿರಣ್ ಎಂಬುವವರನ್ನು ಸ್ವಾಮಿ, ದಿಲೀಪ್, ಮಧು, ರಘು ಸೇರಿ ಬರ್ಬರವಾಗಿ ಹತ್ಯೆಗೈದಿದ್ದರು. ಘಟನೆ ಬಳಿಕ ದಿಲೀಪ್, ಮಧು ಪೊಲೀಸರಿಗೆ ಶರಣಾಗಿದ್ದರು. ಸದ್ಯ ಈಗ ಆರೋಪಿ ಮೀಸೆ ಸ್ವಾಮಿಯನ್ನ ಪೊಲೀಸರು ಬಂಧಿಸಿದ್ದಾರೆ.
ಮೈಸೂರು: ನಗರದ ಎಲೆತೋಟ ರಸ್ತೆಯಲ್ಲಿ ಜೋಡಿ ಕೊಲೆ ಕೇಸ್ಗೆ ಸಂಬಂಧಿಸಿ ಆರೋಪಿ ಸ್ವಾಮಿ ಅಲಿಯಾಸ್ ಮೀಸೆ ಸ್ವಾಮಿ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿ ರಘುಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.
ನಿವೇಶನ ವಿಚಾರ ಹಾಗೂ ಹಳೇ ದ್ವೇಷ ಹಿನ್ನೆಲೆ ಫೆಬ್ರವರಿ 7ರಂದು ಕಿಶನ್ ಮತ್ತು ಕಿರಣ್ ಎಂಬುವವರನ್ನು ಸ್ವಾಮಿ, ದಿಲೀಪ್, ಮಧು, ರಘು ಸೇರಿ ಬರ್ಬರವಾಗಿ ಹತ್ಯೆಗೈದಿದ್ದರು. ಘಟನೆ ಬಳಿಕ ದಿಲೀಪ್, ಮಧು ಪೊಲೀಸರಿಗೆ ಶರಣಾಗಿದ್ದರು. ಸದ್ಯ ಈಗ ಆರೋಪಿ ಮೀಸೆ ಸ್ವಾಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಣ್(29) ಮತ್ತು ಕಿಶನ್(29) ಈ ಕೃತ್ಯದಲ್ಲಿ ಮೃತಪಟ್ಟಿದ್ದು, ಮೃತರಿಬ್ಬರೂ ಗೌರಿಶಂಕರ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಮಧು ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತ್ಯ ನಡೆಸಿದ ನಾಲ್ವರ ಪೈಕಿ ಮೂವರು ಬಂಧನದಲ್ಲಿದ್ದು ಮತ್ತೋರ್ವ ಆರೋಪಿ ರಘುಗಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.