ಕಾಡಾನೆ ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಸಾವು: ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ ಪರಿಹಾರ ತಿರಸ್ಕಾರ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 10, 2024 | 4:25 PM

ಕರ್ನಾಟಕದ ಕಾಡಾನೆ ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಕೇರಳದ ಸಂತ್ರಸ್ತ ಕುಟುಂಬ ಪರಿಹಾರ ತಿರಸ್ಕರಿಸಿದೆ ಎಂದು ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಬಿಜೆಪಿ ವಿರೋಧ ಮಾಡಿದ್ದಕ್ಕೆ ನಮಗೆ ಪರಿಹಾರ ಬೇಕಿಲ್ಲ ಅಂತಾ ಕೇರಳದ ಸಂತ್ರಸ್ತನ ಕುಟುಂಬ ತಿರಸ್ಕರಿಸಿದೆ ಎಂದಿದ್ದಾರೆ. 

ಕಾಡಾನೆ ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಸಾವು: ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ ಪರಿಹಾರ ತಿರಸ್ಕಾರ
ಸಚಿವ ಈಶ್ವರ್ ಖಂಡ್ರೆ
Follow us on

ಚಾಮರಾಜನಗರ, ಮಾರ್ಚ್​​ 10: ಕರ್ನಾಟಕದ ಕಾಡಾನೆ (elephant) ದಾಳಿಯಿಂದ ಕೇರಳದಲ್ಲಿ ವ್ಯಕ್ತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಘೋಷಿಸಿದ್ದ 15 ಲಕ್ಷ ರೂ. ಪರಿಹಾರವನ್ನು ಕೇರಳದ ಸಂತ್ರಸ್ತ ಕುಟುಂಬ ಪರಿಹಾರ ತಿರಸ್ಕರಿಸಿದೆ ಎಂದು ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಮಾನವೀಯತೆ ದೃಷ್ಟಿಯಿಂದ ಪರಿಹಾರ ಘೋಷಣೆ ಮಾಡಿದ್ದೆವು. ಆದರೆ ಪರಿಹಾರ ನೀಡಲು ಬಿಜೆಪಿ ವಿರೋಧ ಮಾಡಿತ್ತು. ಬಿಜೆಪಿ ವಿರೋಧ ಮಾಡಿದ್ದಕ್ಕೆ ನಮಗೆ ಪರಿಹಾರ ಬೇಕಿಲ್ಲ ಅಂತಾ ಕೇರಳದ ಸಂತ್ರಸ್ತನ ಕುಟುಂಬ ತಿರಸ್ಕರಿಸಿದೆ ಎಂದಿದ್ದಾರೆ.

ಕಾಡಾನೆ ದಾಳಿ ಇಬ್ಬರು ಮಹಿಳೆಯರು ಸೇರಿದಂತೆ ಮೂರು ಹಸುಗಳ ದಾರುಣ ಸಾವು

ಆನೇಕಲ್​​: ಗ್ರಾಮಕ್ಕೆ ಲಗ್ಗೆಯಿಟ್ಟ ಕಾಡಾನೆಯೊಂದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನ ಬಲಿ ಪಡೆದ ದಾರುಣ ಘಟನೆ ಇತ್ತೀಚೆಗೆ ರಾಜ್ಯ ಗಡಿಭಾಗ ಆನೇಕಲ್​​ಗೆ ಹೊಂದಿಕೊಂಡಿರುವ ತಮಿಳುನಾಡಿನ ಅಣ್ಣಿಯಾಳ ಗ್ರಾಮದಲ್ಲಿ ನಡೆದಿತ್ತು. ಅಣ್ಣಿಯಾಳ ಗ್ರಾಮದ ಆಶಾ ಕಾರ್ಯಕರ್ತೆ ವಸಂತ(37), ದಾಸರಪಲ್ಲಿ ವಾಸಿ ಅಶ್ವಥಮ್ಮ(40) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿಗಳಾಗಿದ್ದಾರೆ.

ಇದನ್ನೂ ಓದಿ: ಆನೆ ಬಂತೊಂದ್ ಆನೆ; ರಸ್ತೆ ಮಧ್ಯೆ ಓಡಾಡುತ್ತ ವಾಹನಗಳ ತಪಾಸಣೆ ನಡೆಸಿದ ಒಂಟಿ ಸಲಗ, ಉಸಿರು ಬಿಗಿ ಹಿಡಿಯುವ ದೃಶ್ಯ

ಕಳೆದ ಎರಡು ಮೂರು ದಿನಗಳಿಂದ ಗುಮ್ಮಳಾಪುರ, ಅಣ್ಣಿಯಾಳು, ತಳಿ ಸುತ್ತ ಮುತ್ತ ಬೀಡು ಬಿಟ್ಟಿದ್ದ ಕಾಡಾನೆಯು ಬೆಳಿಗ್ಗೆ ಅಣ್ಣಿಯಾಳು ಗ್ರಾಮಕ್ಕೆ ನುಗ್ಗಿತ್ತು. ಗ್ರಾಮಕ್ಕೆ ಬಂದ ಆನೆಯನ್ನು ಓಡಿಸಲು ಗ್ರಾಮಸ್ಥರು ಮುಂದಾಗಿದ್ದ ವೇಳೆ, ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿದಂತೆ ಮೂರು ಹಸುಗಳ ಮೇಲೆ ಕಾಡಾನೆ ದಾಳಿ ಮಾಡಿತ್ತು.

ಪದೇ ಪದೇ ಹಳ್ಳಿಗಳ ಸಮೀಪದ ರೈತರ ಹೊಲ ಗದ್ದೆಗಳಿಗೆ ಕಾಡಾನೆಗಳು ನುಗ್ಗಿ ದಾಂದಲೆ ನಡೆಸುತ್ತಿದೆ. ಕಾಡಾನೆಗಳಿಂದ ಬೆಳೆ ಹಾನಿ ಜೊತೆಗೆ ಪ್ರಾಣ ಹಾನಿಯಾಗುತ್ತಿದ್ದು, ಇಬ್ಬರು ಮಹಿಳೆಯರು ಮತ್ತು ಮೂರು ಹಸುಗಳು ಕಾಡಾನೆ ಹಾವಳಿಗೆ ಬಲಿಯಾಗಿದ್ದವು. ಕಾಡಾನೆ ದಾಳಿಗೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಹಿನ್ನೆಲೆ ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: ಚಾಮರಾಜನಗರ: ಕಾರ್ಯಾಚರಣೆಯಲ್ಲಿ ಸೆರೆ ಹಿಡಿಯಲಾಗಿದ್ದ ಆನೆ ಬಂಡೀಪುರದ ರಾಮಾಪುರ ಬಿಡಾರದಲ್ಲಿ ಸಾವು

ತಳಿ ಶಾಸಕ ರಾಮಚಂದ್ರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಕಾಡಾನೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಮಹಿಳೆಯರ ಸಾವಿಗೆ ತಲಾ 20 ಲಕ್ಷ ಪರಿಹಾರದ ಜೊತೆಗೆ ಮೃತರ ಕುಟುಂಬದವರಿಗೆ ಸರ್ಕಾರಿ ಉದ್ಯೋಗಕ್ಕೆ ಒತ್ತಾಯಿಸಿದರು. ರಸ್ತೆ ತಡೆ ಹಿನ್ನೆಲೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರ ಮನವೊಲಿಕೆ ಬಳಿಕೆ ಪ್ರತಿಭಟನೆ ವಾಪಸ್ ಪಡೆಯಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.