ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಊಟಕ್ಕೆ ಹುಡುಕಾಟ, ಹಾಸನದಲ್ಲಿ ಮನಕಲಕುವ ಘಟನೆ

ಈ ಕೂಲಿ ಕಾರ್ಮಿಕ ಶುಂಠಿ ಕೃಷಿಗಾಗಿ ಅರಸೀಕೆರೆ ತಾಲ್ಲೂಕಿನಿಂದ ಆಲೂರಿಗೆ ಬಂದಿದ್ದನಂತೆ. ಲಾಕ್ಡೌನ್ ಕಾರಣದಿಂದಾಗಿ ಕೆಲಸ ಇಲ್ಲದೆ ಊಟಕ್ಕೆ ಪರದಾಡಿದ್ದಾನೆ. ಹಸಿವು ತಾಳಲಾರದೆ ಕಸದ ರಾಶಿ ತಡಕಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆತನಿಗೆ ಊಟ ನೀಡಿ ಆಸರೆಯಾಗಿದ್ದಾರೆ.

ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಊಟಕ್ಕೆ ಹುಡುಕಾಟ, ಹಾಸನದಲ್ಲಿ ಮನಕಲಕುವ ಘಟನೆ
ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಊಟಕ್ಕೆ ಹುಡುಕಾಡಿದ ಕಾರ್ಮಿಕ
Follow us
|

Updated on: May 02, 2021 | 8:45 AM

ಹಾಸನ: ಮಹಾಮಾರಿ ಕೊರೊನಾ 2ನೇ ಅಲೆ ಇಡೀ ದೇಶವನ್ನು ಆತಂಕಕ್ಕೆ ತಳ್ಳಿದೆ. ಕೊರೊನಾ ಕರ್ಫ್ಯೂನಿಂದಾಗಿ ಕರ್ನಾಟಕ ಲಾಕ್ ಆಗಿದ್ದು ತುತ್ತು ಅನ್ನಕ್ಕೂ ಜನ ಪರಿತಪಿಸುವಂತಾಗಿದೆ. ಕೆಲಸವಿಲ್ಲದೆ, ಹಣವಿಲ್ಲದೆ ಜನ ಪರದಾಡಿತ್ತಿದ್ದಾರೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೋನಪೇಟೆ ಗ್ರಾಮದಲ್ಲಿ ಊಟಕ್ಕಾಗಿ ಕಾರ್ಮಿಕ ರಾಜು ಪರದಾಡಿದ ಘಟನೆ ನಡೆದಿದೆ. ಹಸಿವು ತಾಳಲಾರದೆ ಕಸದ ರಾಶಿಯಲ್ಲಿ ಊಟಕ್ಕಾಗಿ ಕಾರ್ಮಿಕ ತಡಕಾಡಿದ್ದಾನೆ. ಹಸಿವಿಗಾಗಿ ಕಣ್ಣೀರು ಹಾಕಿದಂತಹ ಮನಕಲಕುವ ಘಟನೆ ನಡೆದಿದೆ. ಸದ್ಯ ಕೂಲಿ ಕಾರ್ಮಿಕನಿಗೆ ಸ್ಥಳೀಯ ನಿವಾಸಿಗಳು ನೆರವಾಗಿದ್ದು ಆತನ ಹಸಿವು ನೀಗಿಸಿದ್ದಾರೆ.

ಈ ಕೂಲಿ ಕಾರ್ಮಿಕ ಶುಂಠಿ ಕೃಷಿಗಾಗಿ ಅರಸೀಕೆರೆ ತಾಲ್ಲೂಕಿನಿಂದ ಆಲೂರಿಗೆ ಬಂದಿದ್ದನಂತೆ. ಲಾಕ್ಡೌನ್ ಕಾರಣದಿಂದಾಗಿ ಕೆಲಸ ಇಲ್ಲದೆ ಊಟಕ್ಕೆ ಪರದಾಡಿದ್ದಾನೆ. ಹಸಿವು ತಾಳಲಾರದೆ ಕಸದ ರಾಶಿ ತಡಕಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಆತನಿಗೆ ಊಟ ನೀಡಿ ಆಸರೆಯಾಗಿದ್ದಾರೆ. ಬಳಿಕ ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಕೊರೊನಾ ಕರ್ಫ್ಯೂನಿಂದಾಗಿ ಜನ ಹಣವಿಲ್ಲದೆ ಊಟಕ್ಕಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕೊರೊನಾದ ಮೊದಲ ಅಲೆಯಲ್ಲಿ ಅನುಭವಿಸಿದ ಕಷ್ಟಗಳು ಮತ್ತೆ ಬರುತ್ತಿವೆ. ಎಷ್ಟೋ ಮಂದಿ ಊಟವಿಲ್ಲದೆ ಬೀದಿ ಬೀದಿಗಳಲ್ಲಿ ನರಳುತ್ತಿದ್ದಾರೆ. ಅವರ ಈ ಕಷ್ಟಕ್ಕೆ ಅನೇಕ ಸ್ವಯಂ ಸೇವಾ ಸಂಘಗಳು ಮುಂದೆ ಬಂದು ಹಸಿವು ನೀಗಿಸುವ ಕೆಲಸಗಳನ್ನು ಮಾಡುತ್ತಿವೆ.

man search food in garbage

ಕೂಲಿ ಕಾರ್ಮಿಕನಿಗೆ ಸ್ಥಳೀಯ ನಿವಾಸಿಗಳು ಊಟ ನೀಡಿ ನೆರವಾದ್ರು.

man search food in garbage

ಕಾರ್ಮಿಕನಿಗೆ ಕೊರೊನಾ ಟೆಸ್ಟ್ ಮಾಡಿದ ಸಿಬ್ಬಂದಿ

ಇದನ್ನೂ ಓದಿ: ಕೊರವ ಕುಟುಂಬಗಳಿಗೆ ಕೊರೊನಾ ಕಂಟಕ, ಪರದಾಡುತ್ತಿವೆ ಪುಟಾಣಿ ಮಕ್ಕಳು

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ