ಹಸುವಿನ ಕೆಚ್ಚಲು ಕೊಯ್ದಿದ್ದು ಒಬ್ಬನ ಕೃತ್ಯವಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ: ಕರ್ಣ, ಹಸುವಿನ ಮಾಲೀಕ
ಹಸುಗಳ ಕೆಚ್ಚಲು ಕೊಯ್ಯುವ ಹಿಂದೆ ಷಡ್ಯಂತ್ರ ಅಡಗಿದೆ, ಇದು ಒಬ್ಬನ ಕೃತ್ಯ ಅಲ್ಲ, ನಸ್ರು ಜೊತೆ ಬೇರೆಯವರೂ ಶಾಮೀಲಾಗಿದ್ದಾರೆ, ಅವರೆಲ್ಲ ಯಾರು ಅವರ ಉದ್ದೇಶ ಏನಾಗಿತ್ತು ಅನ್ನೋದನ್ನು ಕಾಟನ್ ಪೇಟೆ ಪೊಲೀಸರು ಪತ್ತೆ ಹಚ್ಚಬೇಕು, ಬಂಧಿತ ವ್ಯಕ್ತಿಯ ಬಾಯಿ ಬಿಡಿಸಬೇಕು ಎಂದು ಕರ್ಣ ಹೇಳುತ್ತಾರೆ. ಸ್ಥಳೀಯ ಶಾಸಕ ಬಿಜೆಡ್ ಜಮೀರ್ ಅಹ್ಮದ್ ಖಾನ್ ಕರ್ಣ ಅವರಿಗೆ ಹೊಸ ಹಸು ಕೊಡಿಸುವ ಭರವಸೆ ನೀಡಿದ್ದಾರೆ.
ಬೆಂಗಳೂರು: ಚಾಮರಾಜಪೇಟೆಯ ಪೆನ್ಷನ್ ಮೊಹಲ್ಲಾದಲ್ಲಿ ಶನಿವಾರ ತಡರಾತ್ರಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮತ್ತು ಅಮಾನವೀಯತೆ ಮೆರೆದಿರುವ ಶೇಖ್ ನಸ್ರು ಹೆಸರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರೂ ಹಸುಗಳ ಮಾಲೀಕ ಕರ್ಣ ಅವರ ವೇದನೆ ಕೋಪ ತಾಪ ಕಡಿಮೆಯಾಗಿಲ್ಲ. ನಸ್ರುನನ್ನು ಪೊಲೀಸರು ಮಾನಸಿಕವಾಗಿ ಅಸ್ವಸ್ಥ ಎನ್ನತ್ತಿರುವುದು ಕರ್ಣ ಅವರ ಕೋಪಕ್ಕೆ ಕಾರಣವಾಗಿದೆ. ಅವನು ಮೆಂಟಲ್ ಅಲ್ಲ, ಅವರು ಹೇಳೋದೇ ನಿಜವಾಗಿದ್ದರೆ ಅದು ಹೇಗೆ ಅವನಿಗೆ ಜಾಸ್ತಿ ಹಾಲು ನೀಡುವ ಹಸುವಿನ ಕೆಚ್ಚಲು ಗುರುತಿಸಿ ಕೊಯ್ಯಲು ಸಾಧ್ಯವಾಗುತಿತ್ತು ಎಂದು ಅವರು ಕೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ, ಓರ್ವನ ಬಂಧನ
Latest Videos