ರೌಡಿಶೀಟರ್, MLC ಶ್ರೀಕಂಠೇಗೌಡ ಆದ ಸ್ಟೋರಿ: ಕಂಪ್ಲೀಟ್​ ಡೀಟೇಲ್ಸ್ ಇಲ್ಲಿದೆ!

ರೌಡಿಶೀಟರ್, MLC ಶ್ರೀಕಂಠೇಗೌಡ ಆದ ಸ್ಟೋರಿ: ಕಂಪ್ಲೀಟ್​ ಡೀಟೇಲ್ಸ್ ಇಲ್ಲಿದೆ!

ಮಂಡ್ಯ: ನಗರದಲ್ಲಿ ಕೊವಿಡ್ ಪರೀಕ್ಷೆ ವೇಳೆ ನಡೆದಿರುವ ಅಹಿತಕರ ಘಟನೆಯಲ್ಲಿ ಜೆಡಿಎಸ್ ವಿಧಾನಪರಿಷತ್​ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿರುದ್ಧ ಗೂಂಡಾಗಿರಿ ಪ್ರಕರಣ ದಾಖಲಾಗಿದೆ. ಒಬ್ಬ ರೌಡಿಶೀಟರ್​ ವಿಧಾನಪರಿಷತ್​ ಸದಸ್ಯರಾದ ಬಗ್ಗೆ ಕಂಪ್ಲೀಟ್​ ಡೀಟೇಲ್ಸ್ ಇಲ್ಲಿದೆ!

1986, 87ರಲ್ಲಿ ರೌಡಿಶೀಟರ್ ಆಗಿದ್ದ ಕೆ.ಟಿ.ಶ್ರೀಕಂಠೇಗೌಡ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ಕೆಟಿಎಸ್ ಹೆಸರಿತ್ತು. ಅಕ್ರಮವಾಗಿ ಜಮೀನು ಖಾತೆ ಮಾಡಿಸಿಕೊಂಡಿದ್ದ ಆರೋಪ ಅವರ ಮೇಲಿತ್ತು. ಅಕ್ರಮ ಸಕ್ರಮ ವೇಳೆ ಮುಸ್ಲಿಮರ ಜಮೀನು ಖಾತೆ ವ್ಯತ್ಯಯ ಆರೋಪವೂ ಇವರ ಮೇಲೆ ಕೇಳಿಬಂದಿತ್ತು. ಅಕ್ರಮವನ್ನು ಪ್ರಶ್ನಿಸಲು ಹೋದವರ ಮೇಲೆ ಹಲ್ಲೆ ಯತ್ನಿಸಿದ್ದರು.

ಇನ್ನು, ಅಕ್ರಮವಾಗಿ 4 ಸರ್ಕಾರಿ ನಿವೇಶನ ಪಡೆದಿರುವ ಆರೋಪ ಹಾಲಿ MLC ಶ್ರೀಕಂಠೇಗೌಡ ಮೇಲಿದೆ. ಮಂಡ್ಯದಲ್ಲಿ 2, ಮೈಸೂರು, ಬೆಂಗಳೂರಿನಲ್ಲಿ ತಲಾ 1 ಸೈಟ್ ಕಬಳಿಸಿದ್ದಾರೆ ಎನ್ನಲಾಗಿದೆ. ಸರ್ಕಾರಕ್ಕೆ ವಂಚಿಸಿ 4 ಸೈಟ್ ಪಡೆದಿರುವ ಅರೋಪವೂ ಶ್ರೀಕಂಠೇಗೌಡ ಮೇಲಿದೆ.

Published On - 3:32 pm, Sat, 25 April 20

Click on your DTH Provider to Add TV9 Kannada