AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ಯಾಂಡಲ್​ವುಡ್​ ಸ್ಮಗ್ಲರ್’​ ಟ್ಯಾಗ್​ ಕೊಟ್ಟು ನನ್ನ ಮತ್ತು ಆದಿಚುಂಚನಗಿರಿ ಮಠಾಧೀಶರ ದೂರವಾಣಿ ಕದ್ದಾಲಿಸಲಾಗಿದೆ: ಸಂಸದೆ ಸುಮಲತಾ ಗಂಭೀರ ಆರೋಪ

ನನ್ನ ದೂರವಾಣಿ ಸೇರಿದಂತೆ ಹಲವರ ದೂರವಾಣಿ ಟ್ಯಾಪ್ ಮಾಡಲಾಗಿದೆ. ​ಸಿಬಿಐ ಅಧಿಕಾರಿಗಳು ತೋರಿಸಿದ ದಾಖಲೆ ಬಿಡುಗಡೆಯಾದರೆ ಇಡೀ ರಾಜ್ಯವೇ ಸಂಪೂರ್ಣ ತಲ್ಲಣವಾಗುತ್ತದೆ ಎಂದು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.

‘ಸ್ಯಾಂಡಲ್​ವುಡ್​ ಸ್ಮಗ್ಲರ್’​ ಟ್ಯಾಗ್​ ಕೊಟ್ಟು ನನ್ನ ಮತ್ತು ಆದಿಚುಂಚನಗಿರಿ ಮಠಾಧೀಶರ ದೂರವಾಣಿ ಕದ್ದಾಲಿಸಲಾಗಿದೆ: ಸಂಸದೆ ಸುಮಲತಾ ಗಂಭೀರ ಆರೋಪ
ಸುಮಲತಾ ಅಂಬರೀಷ್
TV9 Web
| Edited By: |

Updated on:Jul 08, 2021 | 2:59 PM

Share

ಬೆಂಗಳೂರು: ‘‘ಸ್ಯಾಂಡಲ್​ವುಡ್​ ಸ್ಮಗ್ಲರ್’​ ಟ್ಯಾಗ್​ ಕೊಟ್ಟು ನನ್ನ ದೂರವಾಣಿಯನ್ನು ಕದ್ದಾಲಿಸಲಾಗಿದೆ. ಜತೆಗೆ ನಮ್ಮ ಸಮುದಾಯದ ಪೂಜ್ಯ ಗುರುಗಳಾದ ಆದಿಚುಂಚನಗಿರಿ ಮಠಾಧೀಶರ ದೂರವಾಣಿಯನ್ನು​ ಕದ್ದಾಲಿಸಲಾಗಿದೆ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಸಿಬಿಐ ಅಧಿಕಾರಿಗಳು ತೋರಿಸಿದ ದಾಖಲೆ ನೋಡಿ ಶಾಕ್​ ಆಗಿದೆ. ನನಗೆ ಯಾರು ಕರೆಮಾಡಿದ್ದರು, ನಾನು ಯಾರಿಗೆ ಕರೆ ಮಾಡಿದ್ದೆ, ಎಷ್ಟು ಜನರ ಜತೆ ಮಾತಾಡಿದ್ದೆ ಎಂದು ದಾಖಲೆ ತೋರಿಸಿದಾಗ ಶಾಕ್ ಆಯಿತು. ‘ಸ್ಯಾಂಡಲ್​ವುಡ್​ ಸ್ಮಗ್ಲರ್’​ ಟ್ಯಾಗ್​ ಕೊಟ್ಟು ಫೋನ್​ ಟ್ಯಾಪ್ ಮಾಡಲಾಗಿದೆ. ​ಯಾರ ಜತೆ ಮಾತನಾಡುವಾಗ ಟ್ಯಾಪ್​ ಆಗಿದೆ ಎಂದು ದಾಖಲೆಯಿದೆ. ನನ್ನ ದೂರವಾಣಿ ಸೇರಿದಂತೆ ಹಲವರ ದೂರವಾಣಿ ಟ್ಯಾಪ್ ಮಾಡಲಾಗಿದೆ. ​ಸಿಬಿಐ ಅಧಿಕಾರಿಗಳು ತೋರಿಸಿದ ದಾಖಲೆ ಬಿಡುಗಡೆಯಾದರೆ ಇಡೀ ರಾಜ್ಯವೇ ಸಂಪೂರ್ಣ ತಲ್ಲಣವಾಗುತ್ತದೆ ಎಂದು ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.

ರವೀಂದ್ರ ಶ್ರೀಕಂಠಯ್ಯ ಬಾಯಿಬಿಟ್ಟರೆ ಬರೀ ಸುಳ್ಳು ಹೇಳ್ತಾರೆ. ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಂಬರೀಶ್ ಸೋತಿದ್ದರು. 2 ಬಾರಿ ಅಲ್ಲ, ಕುತಂತ್ರದಿಂದ ಒಂದು ಬಾರಿ ಸೋತಿದ್ದರು. ನನ್ನ ವಿರುದ್ಧ 2 ಬಾರಿ ಸೋತಿದ್ದರು ಎಂದು ಸುಳ್ಳು ಹೇಳ್ತಿದ್ದಾರೆ. ಕುತಂತ್ರ ಮಾಡಿ ಅಂಬರೀಶ್​ರನ್ನು ಒಮ್ಮೆ ಸೋಲಿಸಿದ್ದರು. ‘ರವೀಂದ್ರ ಶ್ರೀಕಂಠಯ್ಯ ಕ್ರಿಮಿನಲ್ ಮೈಂಡ್​ ವ್ಯಕ್ತಿಯಿದ್ದಾರೆ’. ಮಂಡ್ಯದಲ್ಲಿ ಭ್ರಷ್ಟಾಚಾರದ ಕಾಂಟ್ರ್ಯಾಕ್ಟ್​ ತೆಗೆದುಕೊಂಡಿದ್ದಾರೆ. ಒಂದು ಅಪರಾಧ ಮುಚ್ಚಿಕೊಳ್ಳಲು ಮತ್ತೊಂದು ಅಪರಾಧ ನಡೆಸಿ ಅಪರಾಧಗಳ ಸರಮಾಲೆಯನ್ನೇ ಮುಂದುವರಿಸುತ್ತಿದ್ದಾರೆನಿಮ್ಮ ನಾಯಕರೇ ಭ್ರಷ್ಟಾಚಾರದ ಬಹುದೊಡ್ಡ ನಾಯಕರಿದ್ದಾರೆ. ಅಂಬರೀಶ್​ ವ್ಯಕ್ತಿತ್ವವೇನು, ಇವರ ವ್ಯಕ್ತಿತ್ವವೇನು ಎಂದು ಗೊತ್ತಿದೆ. ಅಂಬರೀಶ್​ ಜತೆ ಹೋಲಿಸಿಕೊಳ್ಳಬೇಡಿ ಎಂದು ಸಂಸದೆ ಸುಮಲತಾ ಅಂಬರೀಶ್ ನೇರ ತಾಕೀತು ಮಾಡಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದಾಗಲೇ ರೈತರಿಗೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುವುದಾಗಿ ಭರವಸೆ ಮತ್ತು ಗಣಿಗಾರಿಕೆ ನಿಲ್ಲಿಸಿ ರಕ್ಷಣೆ ಕೊಡಿಸುವುದಾಗಿ ಆಶ್ವಾಸನೆ ನೀಡಿದ್ದೆ. ಮತ್ತೊಬ್ಬ ಸಂಸದರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಅವರೇನು ಬೆಂಗಳೂರು-ಮೈಸೂರು ನಡುವೆ ಬುಲೆಟ್​ ಟ್ರೇನ್ ಬಿಡಿಸಿದ್ದಾರಾ? ಅವರ ಕ್ಷೇತ್ರದಲ್ಲಿ 2 ರೋಡ್​ ರೆಡಿ ಮಾಡಿಸಿಲ್ಲ ಎಂದು ಅವರು ಸಂಸದ ಪ್ರತಾಪ್ ಸಿಂಹರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: 

ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಕುಮಾರಸ್ವಾಮಿಯನ್ನು ಅಪಹಾಸ್ಯ ಮಾಡಿದ ಸುಮಲತಾ ಬೆಂಬಲಿಗರು

ಮಂಡ್ಯ ಗಣಿಗಾರಿಕೆ ಪ್ರದೇಶಕ್ಕೆ ವಿಸಿಟ್ ಹಾಕಿದ್ದ ಸಂಸದೆ ಸುಮಲತಾಗೆ ಕಾಲು ಉಳುಕಿ ಊತ

( Mandya MP Sumalatha Ambarishs alleged her and Adichunchanagiri Shris Phone is tapped)

Published On - 2:48 pm, Thu, 8 July 21