ಮಂಡ್ಯ ಗಣಿಗಾರಿಕೆ ಪ್ರದೇಶಕ್ಕೆ ವಿಸಿಟ್ ಹಾಕಿದ್ದ ಸಂಸದೆ ಸುಮಲತಾಗೆ ಕಾಲು ಉಳುಕಿ ಊತ
ಸಂಸದೆ ಸುಮಲತಾ ನಿನ್ನೆ ಮಂಡ್ಯದ ಕಲ್ಲು ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಕಾಲು ಉಳುಕಿ ಊತ ಕಾಣಿಸಿಕೊಂಡಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.
ಬೆಂಗಳೂರು: ಕಾಲು ನೋವಿನಿಂದ ಬಳಲ್ತಿರುವ ಮಂಡ್ಯ ಸಂಸದೆ ಸುಮಲತಾ ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಸದೆ ಸುಮಲತಾ ನಿನ್ನೆ ಮಂಡ್ಯದ ಕಲ್ಲು ಗಣಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಕಾಲು ಉಳುಕಿ ಊತ ಕಾಣಿಸಿಕೊಂಡಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಾಗೂ ಜೆಡಿಎಸ್ ಶಾಸಕರ ಟೀಕೆಗಳಿಗೆ ಉತ್ತರಿಸದಿರಲು ತೀರ್ಮಾನ ಮಾಡಿದ್ದಾರೆ.
ಕೆಆರ್ಎಸ್ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಬೇಬಿ ಬೆಟ್ಟದಲ್ಲಿ ನಡೀತಿರೋ ಗಣಿಗಾರಿಕೆಯೇ ಕಾರಣ. ಮಂಡ್ಯ ಜಿಲ್ಲೆಯಲ್ಲಿ ಗಣಿಗಳು ಹೆಚ್ಚಿವೆ. ಜೊತೆಗೆ ಕ್ರಷರ್ಗಳು ಸಹ ಹೆಚ್ಚಾಗಿವೆ. ಇದೇ ಕಾರಣಕ್ಕೆ ಕೆಆರ್ಎಸ್ ಡ್ಯಾಂ ಮೇಲೆ ಒತ್ತಡ ಹೆಚ್ಚಾಗಿ ಬಿರುಕು ಕಾಣಿಸಿಕೊಂಡಿದೆ ಅಂತಾ ಸಂಸದೆ ಸುಮಲತಾ ಆರೋಪಿಸಿದ್ರು. ಯಾವಾಗ ಸುಮಲತಾ ಹೀಗೆ ಆರೋಪಿಸಿದ್ರೋ.. ಅದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರ್ಜರಿ ತಿರುಗೇಟು ನೀಡಿದ್ರು. ಅಲ್ದೆ, ಸಂಸದೆಯನ್ನ ಟೀಕಿಸೋ ಭರದಲ್ಲಿ ಅವರು ನೀಡಿದ್ದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ.. ಅದ್ರಲ್ಲೂ ಮಂಡ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದಾದ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ಕೊಡ್ತೀನಿ ಅಂತಾ ಸಂಸದೆ ಸುಮಲತಾ ಹೇಳಿದ್ರು. ಇದರಂತೆ ನಿನ್ನೆ ಮಂಡ್ಯದಲ್ಲಿ ಗಣಿಗಾರಿಕೆ ನಡೀತಿದ್ದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ರು. ಆದ್ರೆ, ಕೆಆರ್ಎಸ್ ಡ್ಯಾಂಗೆ ಮಾರಕವಾಗಿರೋ ಬೇಬಿ ಬೆಟ್ಟಕ್ಕೆ ಮಾತ್ರ ಸುಮಲತಾ ಹೋಗಲೇ ಇಲ್ಲ.
ಮಂಡ್ಯ ಜಿಲ್ಲೆಯ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂಸದೆ ಸುಮಲತಾ ಮೊದಲಿಗೆ ಚೆನ್ನನಕೆರೆಗೆ ಭೇಟಿ ನೀಡಿದ್ರು. ಸುಮಾರು 4 ಗಂಟೆ ವೇಳೆಗೆ ಚೆನ್ನನಕೆರೆ ಗ್ರಾಮದ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ್ರು. ಸಂಸದೆ ಸುಮಲತಾ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡ್ತಾರೆ ಅಂತಾ ಗೊತ್ತಾದ ತಕ್ಷಣ. ಗಣಿ ಮಾಲೀಕರು ತಮ್ಮ ಗಣಿಗಳಿಗೆ ಪ್ರವೇಶಿಸದಂತೆ ತಡೆಯಲು ಗಣಿಗಳಿಗೆ ಹೋಗೋ ರಸ್ತೆಗಳಲ್ಲಿ ತಡೆಯೊಡ್ಡಿದ್ರು. ದಾರಿಗಳಿಗೆ ಮಣ್ಣು ಸುರಿದು ತಮ್ಮ ಗಣಿ ಪ್ರದೇಶಗಳಿಗೆ ಸುಮಲತಾ ರೇಡ್ ಮಾಡದಂತೆ ತಡೆಯೊಡ್ಡಿದ್ರು. ಇದಕ್ಕೂ ಮೊದಲು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಸುಮಲತಾರನ್ನ ತಡೆದ ಚೆನ್ನನಕೆರೆ ಗ್ರಾಮಸ್ಥರು ತಮ್ಮ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ರು.
ಇದನ್ನೂ ಓದಿ: ಜಿಲ್ಲೆಯಲ್ಲಿ 105 ಗಣಿಗಳಿವೆ.. ಸುಮಲತಾಗೆ ಅಧಿಕಾರಿ ಪದ್ಮಜಾರಿಂದ ಮಾಹಿತಿ