ಮಂಡ್ಯ ವಿಸಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದವರ ಪೈಕಿ ಮತ್ತಿಬ್ಬರ ಮೃತದೇಹ ಪತ್ತೆ
ನಿನ್ನೆ(ಏ.25) ತಾಲೂಕಿನ ಕೊತ್ತಗೆರೆ ಗ್ರಾಮದ ಬಳಿ ವಿಸಿ ನಾಲೆಯಲ್ಲಿ(VC Channel)ಐವರು ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಹೊರತೆಗೆಯಲಾಗಿತ್ತು. ಅದರಂತೆ ಇನ್ನುಳಿದಿದ್ದ ಅಶ್ರಕ್(28), ಅತೀಕ್(22) ಎಂಬಿಬ್ಬರ ಮೃತದೇಹವನ್ನ ಇಂದು ಹೊರ ತೆಗೆಯಲಾಗಿದೆ.
ಮಂಡ್ಯ: ನಿನ್ನೆ(ಏ.25) ತಾಲೂಕಿನ ಕೊತ್ತಗೆರೆ ಗ್ರಾಮದ ಬಳಿ ವಿಸಿ ನಾಲೆಯಲ್ಲಿ(VC Channel)ಐವರು ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ರಕ್(28), ಅತೀಕ್(22) ಎಂಬಿಬ್ಬರ ಮೃತದೇಹ ಇಂದು ಪತ್ತೆಯಾಗಿದೆ. ಪತ್ತೆಯಾದ ಶವಗಳ ಮರಣೋತ್ತರ ಪರೀಕ್ಷೆಗೆ ಮಿಮ್ಸ್ಗೆ ರವಾನೆ ಮಾಡಲಾಗಿದೆ. ನಿನ್ನೆ ಈಜಲು ಹೋಗಿದ್ದ ವೇಳೆ ಕೊಚ್ಚಿ ಹೋಗಿದ್ದ ಐವರಲ್ಲಿ ಮೂವರ ಶವಗಳು ಪತ್ತೆಯಾಗಿದ್ದವು. ನಿನ್ನೆಯಿಂದ ಇನ್ನಿಬ್ಬರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಇದೀಗ ಇಬ್ಬರ ಶವಗಳು ಸಿಕ್ಕಿದೆ. ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಬೆಂಗಳೂರಿನ ನೀಲಸಂದ್ರ ಮೂಲದ ನಿವಾಸಿಗಳಾದ ಮೃತರು. ರಂಜಾನ್ ಬಳಿಕ ರಜೆಗೆಂದು ಹಲ್ಲಗೆರೆಯ ಅಜ್ಜಿ ಮನೆಗೆ ಬಂದಿದ್ದರು. ಈ ವೇಳೆ ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ವಿಸಿ ನಾಲೆಯಲ್ಲಿ ಈಜಲು ತೆರಳಿ, ನೀರುಪಾಲಾಗಿದ್ದರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಸಾವನ್ನಪ್ಪಿದ್ದ ಮೆಹತಾ (10), ಅನಿಷಾ ಬೇಗಂ (34), ತಸ್ಮಿಯಾ (22) ಅವರ ಮೃತ ದೇಹಗಳನ್ನ ಹೊರತೆಗೆಯಲಾಗಿತ್ತು. ಇಂದು ಇನ್ನಿಬ್ಬರಾದ ಅಶ್ರಕ್ (28), ಅತೀಕ್ (22) ಮೃತದೇಹಗಳನ್ನ ಪತ್ತೆ ಮಾಡಲಾಗಿದೆ.
ಇದನ್ನೂ ಓದಿ:ತಂಗಿಯನ್ನ ಮೈದನನಿಗೆ ಕೊಡಲಿಲ್ಲವೆಂದು ಅತ್ತೆ ಮನೆಯವರಿಂದ ಕಿರುಕುಳ: ಅನುಮಾನ ಹುಟ್ಟಿಸಿದ ಗೃಹಿಣಿ ಸಾವು
ಇದೇ ಏ.17 ರಂದು ಮಲಪ್ರಭಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬಳಿಯ ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಬಾಗಲಕೋಟೆ ನಿವಾಸಿ ಅಕ್ಷಯ್ ಕಂಠಿಮಠ(24), ಕಮತಗಿ ನಿವಾಸಿ ವಿಜಯ್ ಅರುಟಗಿಮಠ(25)ಮೃತ ಯುವಕರು. ಏ.17 ರಂದು ನದಿಯಲ್ಲಿ ಈಜಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುನಗುಂದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿದ್ದರು. ರಾತ್ರಿ ಶವ ಪತ್ತೆಯಾಗಿವೆ. ಅಮೀನಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು ರೈತ ಸಾವು
ರಾಯಚೂರು: ತಾಲೂಕಿನ ಸಿಂಗನೋಡಿಯಲ್ಲಿ ಸಿಡಿಲು ಬಡಿದು, ನರಸಿಂಹಲು(45) ಎಂಬಾತ ಸಾವನ್ನಪ್ಪಿದ್ದಾನೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾತ್ರಿ ಹೊಲದಲ್ಲಿ ದೇವರ ಪೂಜೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದ್ದು ಸಾವನ್ನಪ್ಪಿದ್ದ. ಈ ವೇಳೆ ಅದೃಷ್ಟವಶಾತ್ ಆತನ ಜೊತೆಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Wed, 26 April 23