ಮಂಡ್ಯ: ಬೈಕ್ನಿಂದ ಅಯಾತಪ್ಪಿ ಬಿದ್ದು ಶಿಕ್ಷಕ(Teacher) ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರೆಗೋಡು ಗ್ರಾಮದ ಬಳಿ ನಡೆದಿದೆ. ರವಿ(45) ಮೃತ ಶಿಕ್ಷಕ. ಮಂಡ್ಯ(Mandya) ತಾಲೂಕಿನ ಹಲ್ಲೇಗೆರೆ ಗ್ರಾಮದ ಪರಿಣಿತ ವಿದ್ಯಾಸಂಸ್ಥೆಯ ಶಿಕ್ಷಕನಾಗಿದ್ದ ಅವರು ನಿನ್ನೆ(ಜು.7) ಬೆಳಗ್ಗೆ ಶಾಲೆಗೆ ತೆರಳುವ ವೇಳೆ ಕೆರೆಗೋಡು ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಇನ್ನು ಅಪಘಾತದ ನಂತರ ಕೆಲ ಕಾಲ ಶಿಕ್ಷಕ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಯಾರಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಬೇಡಿಕೊಳ್ಳುತ್ತಿದ್ದ. ಅದನ್ನ ನೋಡಿದರೂ ಯಾರೊಬ್ಬರು ಕೂಡ ಆತನನ್ನ ಆಸ್ಪತ್ರೆಗೆ ಸಾಗಿಸಲು ಮುಂದೆ ಬರದೇ ಅಮಾನವೀಯತೆ ತೋರಿದ್ದಾರೆ.
ಇನ್ನು ಅಪಘಾತದಲ್ಲಿ ಶಿಕ್ಷಕ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ. ದಯವಿಟ್ಟು ಯಾರಾದರೂ ಆಸ್ಪತ್ರೆಗೆ ಸೇರಿಸಿ ಎಂದು ಅಂಗಲಾಚಿದರೂ ಸ್ಥಳದಲ್ಲಿ ನೆರೆದಿದ್ದ ಜನರು ಮಾತ್ರ ಕರಗಲಿಲ್ಲ. ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡ ಕಾರಣ, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆ ಕೆರೆಗೋಡು ಪೊಲೀಸ್ ಠಾಣೆ ಸಮೀಪವೇ ನಡೆದಿದ್ದರೂ, ಸ್ಥಳಕ್ಕೆ ಪೊಲೀಸರು ಬರುವುದು ಕೂಡ ತಡವಾಗಿತ್ತು. ಆಸ್ಪತ್ರೆಗೆ ಸಾಗಿಸಿದ್ರೆ, ಜೀವ ಉಳಿಯುವ ಸಾಧ್ಯತೆಯಿದ್ದು, ಜನರ ಅಮಾನವೀಯತೆಯಿಂದ ಓರ್ವ ಶಿಕ್ಷಕ ಮೃತನಾಗಿದ್ದಾನೆ.
ಇದನ್ನೂ ಓದಿ:ಕಣ್ಣೆದುರೇ ಅಪಘಾತವಾದರೂ ಹೊಯ್ಸಳ ನಿಲ್ಲಿಸಿದೆ ಹೋದ ಪೊಲೀಸ್ರು, ಒದ್ದಾಡಿ ಪ್ರಾಣ ಬಿಟ್ಟ ಆಟೋ ಚಾಲಕ
ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು, ಕಾಡಾನೆ ದಾಳಿಗೆ ಮನೆಯ ಕಾಂಪೌಂಡ್ ಪುಡಿ ಪುಡಿಯಾಗಿದೆ. ಜೊತೆಗೆ ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದಲ್ಲಿ ಕಾಡಾನೆಗಳ ಓಡಾಟದಿಂದ ಐದಾರು ವರ್ಷಗಳಿಂದ ಬೆಳೆದಿರುವ ಅಪಾರ ಪ್ರಮಾಣದ ಕಾಫಿ, ಬಾಳೆ ಬೆಳೆ ನಾಶವಾದ ಘಟನೆ ನಡೆದಿದೆ. ಮರಿಗಳೊಂದಿಗೆ ಗ್ರಾಮದ ಲಕ್ಷ್ಮಮ್ಮ ಎಂಬುವವರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬಿಡುಬಿಟ್ಟಿದೆ. ಕಾಡಾನೆಗಳ ಹಿಂಡು ಕಂಡು ಭಯಭೀತರಾಗಿರುವ ಗ್ರಾಮಸ್ಥರು, ಕಾಡಾನೆಗಳ ಹಿಂಡಿನ ದಾಳಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಜನರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ