ಅಯೋಧ್ಯೆಯಲ್ಲಿ ಇಂದು ಅದ್ದೂರಿಯಾಗಿ ಬಹು ವಿಜೃಂಭಣೆಯಿಂದ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಇಡೀ ದೇಶದ ಕೋಟಿ ಕೋಟಿ ಜನರ ಕನಸು ಇವತ್ತು ನನಸಾಗಿದೆ. ಈ ಸುದಿನಕ್ಕಾಗಿ ಇಡೀ ದೇಶವೇ ಕಾದು ಕುಳಿತಿತ್ತು. ವಿಶೇಷ ಅಂದರೆ ರಾಮಲಲ್ಲಾ ಮೂರ್ತಿಯ ಕೆತ್ತನೆ ಮಾಡಿರುವುದು ಕರ್ನಾಟಕ ಮೂಲದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್. ಇದೇ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವ ಇನ್ನೂ ಒಂದು ಮೂರ್ತಿ ಸಹ ಇಂದೇ ಪ್ರತಿಷ್ಠಾಪನೆ ಆಗಿದೆ.
ಹೌದು ದೇಶದ ಕೋಟಿ ಕೋಟಿ ಜನರು ಕಾತುರದಿಂದ ಕಾಯುತ್ತಿದ್ದ ಅಯೋಧ್ಯೆ ರಾಮಮಂದಿರ ಇಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ. ಇಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಇದಕ್ಕಾಗಿಯೇ ದೇಶದ ಕೋಟಿ ಕೋಟಿ ಜನರು ಕಾದು ಕುಳಿತಿದ್ದರು. ಕೋಟಿ ಕೋಟಿ ಜನರ ಕನಸು ಕೂಡ ಇದೇ ಆಗಿತ್ತು. ವಿಶೇಷವೆಂದರೆ ರಾಮಲಲ್ಲಾನ ಮೂರ್ತಿಯನ್ನ ನಮ್ಮ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದಾರೆ. ಅದೇ ಮೂರ್ತಿ ಇಂದು ಲೋಕಾಪರ್ಣೆ ಆಗಿದೆ. ಇದು ನಮ್ಮ ಹೆಮ್ಮೆಯ ವಿಚಾರ.
ಇನ್ನು ಸಕ್ಕರೆನಗರಿ ಮಂಡ್ಯದಲ್ಲೂ ಕೂಡ ಜೀರ್ಣೋದ್ದಾರಗೊಂಡಿರುವ ರಾಮಮಂದಿರ ಕೂಡ ಇವತ್ತು ಲೋಕಾರ್ಪಣೆಗೊಂಡಿದೆ. ಇದರ ವಿಶೇಷವೆಂದರೆ ಮಂಡ್ಯದ ಲೇಬರ್ ಕಾಲೋನಿಯಲ್ಲಿರೋ ರಾಮಮಂದಿರಕ್ಕೂ ಕೂಡ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮನ ಮೂರ್ತಿಯನ್ನ ಕೆತ್ತನೆ ಮಾಡಿದ್ದಾರೆ. ವರ್ಷದ ಹಿಂದೆಯೇ ಮೂರ್ತಿಯನ್ನ ಕೆತ್ತನೆ ಮಾಡಿಕೊಟ್ಟಿದ್ದು, ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ತಡವಾದ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆ ಆಗಿರಲಿಲ್ಲ.
ಇಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲೇ ಮಂಡ್ಯದಲ್ಲೂ ಕೂಡ ರಾಮಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನಡೆದವು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ರಾಮನ ದರ್ಶನ ಪಡೆದರು.
ಇನ್ನು ಮಂಡ್ಯದ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಮೂರೂಕಾಲು ಅಡಿ ಎತ್ತರವಿದ್ದು, ಶ್ರೀರಾಮನ ಜೊತೆಗೆ ಲಕ್ಷಣ, ಸೀತೆ, ಹನುಮನ ವಿಗ್ರಹಗಳು ಸಹ ಇವೆ. ಅವುಗಳನ್ನ ಸಹ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿದ್ದಾರೆ. ನೂರಾರು ವರ್ಷಗಳ ಇತಿಹಾಸ ಇರುವ ಈ ರಾಮಮಂದಿರ ಇದೀಗ ಜೀರ್ಣೋದ್ದಾರ ಆಗಿದ್ದು, ಇಂದು ಲೋಕಾಪರ್ಣೆಯಾಗಿದೆ. ಇದರಿಂದ ಮಂಡ್ಯದ ಜನರಲ್ಲಿ ಸಂತಸ ಮನೆ ಮಾಡಿದೆ.
ಇವತ್ತು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಗಲ್ಲಿ ಗಲ್ಲಿಗಳು, ಹಳ್ಳಿ ಹಳ್ಳಿಗಳಲ್ಲೂ ರಾಮನ ಜಪ ಮಾಡಲಾಯಿತು. ರಾಮನ ಮಂದಿರ ಸೇರಿದಂತೆ ಹಲವು ಕಡೆ ರಾಮನ ಫೋಟೋಗಳನ್ನ ಇಟ್ಟು ವಿಶೇಷ ಪೂಜೆ ಮಾಡಲಾಯಿತು. ಅದೇ ರೀತಿ ಮಂಡ್ಯದ ವಿನೋಬಾ ರಸ್ತೆಯ ರಾಮನ ಮಂದಿರದಲ್ಲೂ ಕೂಡ ಅದ್ದೂರಿಯಾಗಿ ಪೂಜೆ ನೆರವೇರಿಸಲಾಯಿತು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:48 pm, Mon, 22 January 24