AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಮಂಗಲದಲ್ಲಿ ಹೊಯ್ಸಳರ ಕಾಲದ ಅಪರೂಪದ ಕಲ್ಲು ಪತ್ತೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾಚಲಘಟ್ಟ ಕುಗ್ರಾಮದ ಮಲ್ಲೇಶ್ವರ ದೇವಸ್ಥಾನದ ಬಳಿ ಹೊಯ್ಸಳರ ಕಾಲದ ಶಾಸನಗಳು ಮತ್ತು ರೇಖಾಚಿತ್ರಗಳು ಇರುವ ಅಪರೂಪದ ಕಲ್ಲು ಪತ್ತೆಯಾಗಿದೆ. ತಜ್ಞರ ಪ್ರಕಾರ, 16 ನೇ ಶತಮಾನದ ಶಿಲಾ ಶಾಸನವಾಗಿದ್ದು, ದುಷ್ಟಶಕ್ತಿಗಳನ್ನು ಗ್ರಾಮದಿಂದ ದೂರವಿಡಲು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ.

ನಾಗಮಂಗಲದಲ್ಲಿ ಹೊಯ್ಸಳರ ಕಾಲದ ಅಪರೂಪದ ಕಲ್ಲು ಪತ್ತೆ
ಅಪರೂಪದ ಕಲ್ಲು
ವಿವೇಕ ಬಿರಾದಾರ
|

Updated on: Jan 22, 2024 | 9:06 AM

Share

ಮಂಡ್ಯ, ಜನವರಿ 22: ನಾಗಮಂಗಲ (Nagamangala) ತಾಲೂಕಿನ ಮಾಚಲಘಟ್ಟ ಕುಗ್ರಾಮದ ಮಲ್ಲೇಶ್ವರ ದೇವಸ್ಥಾನದ ಬಳಿ ಹೊಯ್ಸಳರ (Hoysala) ಕಾಲದ ಶಾಸನಗಳು ಮತ್ತು ರೇಖಾಚಿತ್ರಗಳು ಇರುವ ಅಪರೂಪದ ಕಲ್ಲು ಪತ್ತೆಯಾಗಿದೆ. ಪ್ರೀಮಿಯರ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್​​ (CIIL) ನ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕರು ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಶಿಲೆ ಪತ್ತೆಯಾಗಿದೆ. ತಜ್ಞರ ಪ್ರಕಾರ, 16 ನೇ ಶತಮಾನದ ಶಿಲಾ ಶಾಸನವಾಗಿದ್ದು, ದುಷ್ಟಶಕ್ತಿಗಳನ್ನು ಗ್ರಾಮದಿಂದ ದೂರವಿಡಲು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ.

ಚಪ್ಪಡಿ ಕಲ್ಲಿನಲ್ಲಿ ರೇಖೆಗಳನ್ನು ಕೆತ್ತಲಾಗಿದ್ದು, ಬರಹಗಳು ಮೋದಿ ಲಿಪಿಯಲ್ಲಿವೆ. ಅರ್ಧ ಶಿಲೆ (ಮೇಲಿನ ಭಾಗ) ಮಾತ್ರ ಪತ್ತೆಯಾಗಿದ್ದು, ಇನ್ನೂ ಅರ್ಧ ಕಲ್ಲು ಭೂಮಿಯೊಳಗೆ ಹುದುಗಿ ಹೋಗಿದೆ. ಹಿರಿಯ ಸಂಶೋಧನಾ ಸಹೋದ್ಯೋಗಿ ಶಶಿಧರ ಸಿಎ ಅವರು ಈ ಸಂಶೋಧನೆಯನ್ನು ನಡೆಸಿದರು. ಸಿಐಐಎಲ್ ನಿರ್ದೇಶಕ ಶೈಲೇಂದ್ರ ಮೋಹನ್ ಅವರ ಮಾರ್ಗದರ್ಶಕರಾಗಿದ್ದರು.

ಈ ಕಲ್ಲಿನ ಮೇಲ್ಭಾಗದಲ್ಲಿ ದೇವತೆಯ ರೇಖಾಚಿತ್ರವಿದೆ. ಕೆಳಭಾಗದಲ್ಲಿ ವಾಸ್ತುಮಂಡಲಗಳ ರೇಖಾಚಿತ್ರಗಳಿವೆ. ಕೆಳಗಿನ ಚೌಕದಲ್ಲಿ ಒಟ್ಟು 20 ಮನೆಗಳ ಚಿತ್ರಗಳಿವೆ. “ಓಂ” ಮತ್ತು “ಹ್ರೀಂ” ನಂತಹ “ಬೀಜ ಮಂತ್ರಗಳು” ಇವೆ. ರಜೋಗುಣ, ತಮೋಗುಣ ಮತ್ತು ಸತ್ವಗುಣವನ್ನು ಸಂಕೇತಿಸುವ ತ್ರಿಶೂಲಗಳನ್ನು ಅದರ ಸುತ್ತಲೂ ಕೆತ್ತಲಾಗಿದೆ. ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರನ ರೇಖಾಚಿತ್ರಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಅಪರೂಪದ ಕನ್ನಡ ಶಾಸನ ಪತ್ತೆ

ಕಲ್ಲಿನಲ್ಲಿ ತಮಿಳು ಲಿಪಿ ಇದೆ. ಸಿಡುಬು, ಪ್ಲೇಗ್, ಕಾಲರಾದಂತಹ ರೋಗಗಳನ್ನು ಈ ಪ್ರದೇಶದಿಂದ ದೂರವಿಡಲು ಗ್ರಾಮದ ಪ್ರವೇಶ ದ್ವಾರದಲ್ಲಿ ಈ ಕಲ್ಲನ್ನು ಸ್ಥಾಪಿಸಲಾಗಿದೆ. ನಮ್ಮ ರಾಜ್ಯದಲ್ಲಿ ಸಿಕ್ಕಿರುವ ಅಪರೂಪದ ಶಾಸನ ಇದಾಗಿದೆ. ಕಲ್ಲು ಪತ್ತೆಯಾದ ಸ್ಥಳದಿಂದ ಗ್ರಾಮವು ಸುಮಾರು 1.5 ಕಿಲೋಮೀಟರ್ ದೂರದಲ್ಲಿದೆ ಎಂದು ಶಶಿಧರ ಹೇಳಿದರು.

ಹಿರಿಯ ಪುರಾತತ್ವಶಾಸ್ತ್ರಜ್ಞ ಎನ್.ಎಸ್.ರಂಗರಾಜು ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ ಮೋದಿ ಲಿಪಿಯನ್ನು ಓದಬಲ್ಲ ಕೆಲವು ವಿದ್ವಾಂಸರು ಇದ್ದಾರೆ. ಹಿಂದೆ ಮೋದಿ ಲಿಪಿಯಲ್ಲಿ ಬರೆಯುವ ಪದ್ಧತಿ ಇತ್ತು. ಆದರೆ, ಸಾಮಾನ್ಯ ಮಂತ್ರದ ಕಲ್ಲುಗಳಲ್ಲಿ ಇಂತಹ ಲಿಪಿ ಕಂಡುಬರದಿರುವುದು ವಿಶೇಷವಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ