AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿದೆ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳು; ಈ ಆಶ್ರಮದಲ್ಲಿರುವ ಶಾಸನ ಹೇಳುತ್ತೆ ಸತ್ಯ ಕಥೆ

ದಾವಣಗೆರೆ ಜಿಲ್ಲೆ ಹರಿಹರದ ತುಂಗಭದ್ರ ನದಿಯ ದಡದಲ್ಲಿ ಇರುವ ಶ್ರೀ ಸಮರ್ಥ ನಾರಾಯಣ ಮಹಾರಾಜ ಆಶ್ರಮದಲ್ಲಿ ಮೂಲ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳಿವೆ. ಶತಮಾನಗಳಿಂದ ಸಮರ್ಥ ನಾರಾಯಣ ಮಹಾರಾಜದ ಆಶ್ರಮದಲ್ಲಿ ಪೂಜೆ ಆಗುತ್ತಿರುವ ಮೂರ್ತಿಗಳು ಅಯೋಧ್ಯೆಯ ಮೂಲ ಮೂರ್ತಿಗಳು ಎಂದು ದಾಖಲೆ ಸಮೇತ ಪುರೋಹಿತರು ಹೇಳುತ್ತಿದ್ದಾರೆ.

ದಾವಣಗೆರೆಯಲ್ಲಿದೆ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳು; ಈ ಆಶ್ರಮದಲ್ಲಿರುವ ಶಾಸನ ಹೇಳುತ್ತೆ ಸತ್ಯ ಕಥೆ
ದಾವಣಗೆರೆಯಲ್ಲಿದೆ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Jan 02, 2024 | 10:06 AM

Share

ದಾವಣಗೆರೆ, ಜ.02: ಹಲವು ದಶಕಗಳ ಹೋರಾಟ. ಸಾವಿರಾರು ಜನರ ಬಲಿದಾನದ ನಂತರ ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Ayodhya Ram Mandir) ಉದ್ಘಾಟನೆ ಆಗುತ್ತಿದೆ. ಇನ್ನು ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಣದ ಸಂಬಂಧ ಅಂದ್ರೆ ಅದೊಂದು ಪ್ರಕೃತಿ ಕೊಡುಗೆ ಎಂಬಂತೆ ಅಯೋಧ್ಯೆಗೂ (Ayodhya) ಕರ್ನಾಟಕಕ್ಕೂ (Karnataka) ಬೆಸುಗೆ ಬೆಳೆದುಕೊಂಡಿದೆ. ಅಯೋಧ್ಯೆ ರಾಮ ಮಂದಿರ ವಿಚಾರ ನೋಡಿ, ರಾಮನ ಮೂರ್ತಿ ಕೆತ್ತನೆ ಮಾಡಿದ್ದು ಕನ್ನಡಿಗ, ಮೂರ್ತಿಗೆ ಕಲ್ಲು ಬಳಸಿದ್ದು ಕರ್ನಾಟಕದ್ದು ಜೊತೆಗೆ ಮಂದಿರಕ್ಕೆ ಶೇಖಡ 60ರಷ್ಟು ಬಳಸಿದ ಕೆಂಪು ಕಲ್ಲು ಸಹ ಕರ್ನಾಟಕದ್ದು. ಇದರ ಜೊತೆಗೆ ಈಗ ದಾವಣಗೆರೆಯಲ್ಲಿರುವ ಕೆಲವು ಮೂರ್ತಿಗಳು ಅಯೋಧ್ಯೆಯ ಮೂಲ ಮೂರ್ತಿಗಳು ಎಂದು ಕೆಲ ಪುರೋಹಿಸರು ವಾದಿಸುತ್ತಿದ್ದಾರೆ.

ಮೂಲ‌ ರಾಮ ಮೂರ್ತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿನ ಮೂಲ ಮೂರ್ತಿಗಳಾದ ರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಗಳು ದಾವಣಗೆರೆಯಲ್ಲಿವೆ ಎಂದು ದಾಖಲೆಗಳ ಸಹಿತ ಇಲ್ಲಿನ ಪುರೋಹಿತರು ಹೇಳುತ್ತಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರದ ತುಂಗಭದ್ರ ನದಿಯ ದಡದಲ್ಲಿ ಇರುವ ಶ್ರೀ ಸಮರ್ಥ ನಾರಾಯಣ ಮಹಾರಾಜ ಆಶ್ರಮದಲ್ಲಿ ಮೂಲ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳಿವೆ ಎಂಬ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಮರ್ಥ ನಾರಾಯಣ ಮಹಾರಾಜರ ಆಶ್ರಮಕ್ಕೆ ಇನ್ನೊಂದು ಹೆಸರೇ ಎರಡನೇ ಅಯೋಧ್ಯೆ ಎನ್ನಲಾಗುತ್ತಿದೆ. ಶತಮಾನಗಳಿಂದ ಸಮರ್ಥ ನಾರಾಯಣ ಮಹಾರಾಜದ ಆಶ್ರಮದಲ್ಲಿ ಪೂಜೆ ಆಗುತ್ತಿರುವ ಮೂರ್ತಿಗಳು ಅಯೋಧ್ಯೆಯ ಮೂಲ ಮೂರ್ತಿಗಳು ಎಂದು ಪುರೋಹಿತರು ಹೇಳುತ್ತಿದ್ದಾರೆ.

ಬಾಬರನ ದಾಳಿ ವೇಳೆ ದಾವಣಗೆರೆಗೆ ಬಂದ ಮೂಲ ಮೂರ್ತಿಗಳು

ಸಮರ್ಥ ನಾರಾಯಣ ಮಹಾರಾಜರು 1986ರಲ್ಲಿ ಅಶ್ವಮೇಧಯಾಗ ಮಾಡಿ ದೇಶದ ಗಮನ ಸೆಳೆದಿದ್ದರು. ಒಂದು ವರ್ಷಗಳ ಕಾಲ ಯಾಗ ಮಾಡಿ ಕುದುರೆಯನ್ನ ಆಹುತಿ ಕೊಟ್ಟಿದ್ದರು. ಕಲಿಯುಗದಲ್ಲಿ ಇಂತಹ ಯಾಗ ಯಾರು ಮಾಡಿಲ್ಲ. ಇನ್ನು ಬಾಬರನ ದಾಳಿಯ ವೇಳೆ ಮೂಲ ರಾಮ, ಲಕ್ಷ್ಮಣ ಹಾಗೂ ಸೀತೆಯ ಮೂರ್ತಿಗಳನ್ನ ಅಲ್ಲಿನ ಪುರೋಹಿತರು ಸಮರ್ಥ ನಾರಾಯಣ ಮಹಾರಾಜರ ಪೂರ್ವಿಕರಿಗೆ ಒಪ್ಪಿಸಿದ್ದರು. ಮಂದಿರ ಹಾಳಾದ್ರು ಹಾಳಾಗಲಿ ಆದರೆ ಮೂಲ ವಿಗ್ರಹಗಳಾದ್ರು ಜೋಪಾನವಾಗಿರಲಿ ಎಂದಿದ್ದರಂತೆ. ಇದೇ ಕಾರಣಕ್ಕೆ ನರ್ಮದಾ ನದಿ ತೀರದಿಂದ ತುಂಗಭದ್ರ ತೀರಕ್ಕೆ ತಂದಿದ್ದಾರೆ ಎಂಬುವುದು ಪ್ರತೀತಿ. ಮತ್ತೊಂದೆಡೆ ಇದೇ ಜ.22ಕ್ಕೆ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಅಯೋಧ್ಯೆ ರಾಮಮಂದಿರದ ರಾಮನ ಮೂರ್ತಿ ಮಾಡಿದ್ದು ಕರ್ನಾಟಕದ ಶಿಲ್ಪಿಗಳು. ಕರ್ನಾಟಕದ ಕಲ್ಲು, ದೇವಸ್ಥಾನಕ್ಕೆ ಶೇ 60 ರಷ್ಟು ಬಳಸಿದ ಕೆಂಪು ಕಲ್ಲು ಸಹ ಕರ್ನಾಟಕದ್ದೆ. ಕಾಕತಾಳೀಯ ಎಂಬಂತೆ ಅಯೋಧ್ಯೆಯ ಜೊತೆ ಕರ್ನಾಟಕದ ನಂಟಿದೆ ಎಂದು ಆಶ್ರಮದ ಪುರೋಹಿತರು ತಿಳಿಸಿದರು.

ಇದನ್ನೂ ಓದಿ: ಹರಿಹರದ ‌ಮನೆ ಮನೆಗೆ ತಲುಪಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ, ರಾಮ ವೇಷಧಾರಿ ಮಕ್ಕಳ ಪಾದ ಪೂಜೆ

ಆಶ್ರಮದಲ್ಲಿರುವ ಶಾಸನ ಹೇಳುತ್ತೆ ಮೂರ್ತಿಗಳ ಮೂಲ

The original idols of the Ayodhya Ram temple Found at Davangere

ಸಮರ್ಥ ನಾರಾಯಣ ಮಹಾರಾಜರು

ಇಷ್ಟಕ್ಕೂ ಇಲ್ಲಿಗೆ ಹೇಗೆ ಮೂರ್ತಿಗಳು ಬಂದವು? ಇದಕ್ಕೆ ಆಧಾರ ಎನು ಎಂಬ ಹತ್ತಾರು ಪ್ರಶ್ನೆಗಳು ಹುಟ್ಟುತ್ತವೆ. ಈ ಸಮರ್ಥ ನಾರಾಯಣ ಮಹಾರಾಜರು ಯಾರು? ಇಲ್ಲಿಗೆ ಬಂದಿದ್ದು ಯಾಕೆ? ಅಶ್ವಮೇಧ ಯಾಗ ಯಾಕೆ ಮಾಡಿದ್ರು? ಜೊತೆಗೆ ಕಲಿಯುಗದಲ್ಲಿ ಶತಕೋಟಿ ರಾಮನಾಮ ಜಯ ಯಜ್ಞ ಮಾಡಿದ್ದು ಯಾಕೆ? ಎಂಬ ಎಲ್ಲಾ ಪ್ರಶ್ನೆಗೂ ಆಶ್ರಮದಲ್ಲಿ ಸಿಕ್ಕ ಆ ಒಂದು ಶಾಸನ ಉತ್ತರ ಕೊಟ್ಟಿದೆ. ಈ ಶಾಸನ ಸಂಸ್ಕೃತದಲ್ಲಿದೆ. ಈ ಸಮರ್ಥ ನಾರಾಯಣ ಮಹಾರಾಜರು ಅಂದ್ರೆ ಇವರು ಬಾಲ ಸನ್ಯಾಸಿಗಳಾಗಿದ್ದು. ನಂತರ ಸಂಸಾರಿಗಳಾದ್ರು. ಆ ಕಾಲದಲ್ಲೇ ಇಡೀ ದೇಶ ಸುತ್ತಿ ಬಂದರು. ಅಯೋಧ್ಯೆಗೂ ಹತ್ತಾರು ಸಹ ಸುತ್ತಾಡಿ ಬಂದಿದ್ದರು. ಜುಲೈ 05, 1990ರಂದು ಇವರು ದೇಹ ತ್ಯಾಗ ಮಾಡಿದರು. ಇವರಿಗೆ ಇಬ್ಬರು ಪುತ್ರಿಯರು. ಓರ್ವ ಪುತ್ರಿಯ ಮಗ ಪ್ರಭುದತ್ತ ಮಹಾರಾಜರು ಈಗ ಹರಿಹರದ ಆಶ್ರಮ ಹಾಗೂ ಹೈದ್ರಾಬಾದ್ ನಲ್ಲಿ ಇರುವ ಬೃಹತ್ ಗೋ ಶಾಲೆ ಸಹಿತ ಆಶ್ರಮ ನೋಡಿಕೊಳ್ಳುತ್ತಾರೆ. ವಿಶೇಷ ಅಂದ್ರೆ ಬಾಬ್ರಿ ಮಸೀದಿ ರಾಮ ಮಂದಿರ ಸಂಘರ್ಷದಲ್ಲಿ ಇಲ್ಲಿನ ಸಮರ್ಥ ನಾರಾಯಣ ಮಹಾರಾಜರು ಓರ್ವ ಪ್ರತಿವಾದಿ ಆಗಿದ್ದರು. ಈ ಆಶ್ರಮದಲ್ಲಿ ಇರುವ ಮೂರ್ತಿಗಳಿಗೆ ಚರಪೀಠ ಮಾತ್ರ ಸ್ಥಿರಪೀಠ ಅಯೋಧ್ಯೆಯಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇಲ್ಲಿ ಇರುವುದು ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳು ಎನ್ನುವುದಕ್ಕೆ ಹತ್ತಾರು ಸಾಕ್ಷಿಗಳಿವೆ. ಆದರೆ ಉದ್ದೇಶ ಪೂರ್ವಕವಾಗಿ ಕೆಲ ಜನ ಅಲ್ಲಗಳೆಯುತ್ತಿದ್ದಾರೆ. ಇದರ ಬಗ್ಗೆ ಸಂಶೋಧನೆ ಆಗಬೇಕಾಗಿದೆ. ನರ್ಮದಾ ನದಿಯಿಂದ ತುಂಗಭದ್ರ ಪುಣ್ಯ ಕ್ಷೇತ್ರಕ್ಕೆ ಬಂದಿದ್ದು ಮಾತ್ರ ವಿಚಿತ್ರ, ವಿಶೇಷ ಎನಿಸುತ್ತಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ.

ದಾವಣಗೆರೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:19 am, Tue, 2 January 24

ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್