Mandya News: ಮಳೆಗಾಗಿ ಪರಸ್ಪರ ಮದುವೆಯಾದ ಹುಡುಗರು

|

Updated on: Jun 25, 2023 | 3:24 PM

ಮಳೆಗಾಗಿ ಜನರು ವಿಶಿಷ್ಟ ಆಚರಣೆಗಳನ್ನು ಮಾಡುತ್ತಿದ್ದಾರೆ. ಮಳೆರಾಯ ಧರೆಗೆ ಇಳಿಯಪ್ಪ ಎಂದು ಕತ್ತೆಗಳ ಮದುವೆ, ಕಪ್ಪೆ ಮದುವೆ, ಮಣ್ಣಿನ ಗೊಂಬೆ ಮಾಡಿ ಅದನ್ನ ಮೆರವಣಿಗೆ ಮಾಡುವುದು ಹೀಗೆ ನಾನಾ ವಿದಧ ಆಚರಣೆಗಳನ್ನು ಮಾಡುತ್ತಿದ್ದಾರೆ. ಅದೇರೀತಿಯಾಗಿ ಶುಕ್ರವಾರ (ಜೂ.24) ರಂದು ಕೆಆರ್ ಪೇಟೆ ತಾಲೂಕಿನ ಗಂಗನಹಳ್ಳಿಯಲ್ಲಿ ಗ್ರಾಮದ ಹುಡುಗರು ವಿಶಿಷ್ಟ ಆಚರಣೆ ಮಾಡಿದ್ದಾರೆ

Mandya News: ಮಳೆಗಾಗಿ ಪರಸ್ಪರ ಮದುವೆಯಾದ ಹುಡುಗರು
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಮುಂಗಾರು (Monsoon) ವಿಳಂಬದಿಂದ ಕರ್ನಾಟಕದ (Karanataka) ಜನತೆ ಕಂಗಾಲ ಆಗಿದ್ದಾರೆ. ಈ ಋತುವಿನಲ್ಲಿ ಮುಂಗಾರು ಮಳೆಯ ಕೊರತೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಗಿ (Rain) ಜನರು ವಿಶಿಷ್ಟ ಆಚರಣೆಗಳನ್ನು ಮಾಡುತ್ತಿದ್ದಾರೆ. ಮಳೆರಾಯ ಧರೆಗೆ ಇಳಿಯಪ್ಪ ಎಂದು ಕತ್ತೆಗಳ ಮದುವೆ, ಕಪ್ಪೆ ಮದುವೆ, ಮಣ್ಣಿನ ಗೊಂಬೆ ಮಾಡಿ ಅದನ್ನ ಮೆರವಣಿಗೆ ಮಾಡುವುದು ಹೀಗೆ ನಾನಾ ವಿದಧ ಆಚರಣೆಗಳನ್ನು ಮಾಡುತ್ತಿದ್ದಾರೆ. ಅದೇರೀತಿಯಾಗಿ ಶುಕ್ರವಾರ (ಜೂ.24) ರಂದು ಕೆಆರ್ ಪೇಟೆ (KR Pete) ತಾಲೂಕಿನ ಗಂಗನಹಳ್ಳಿಯಲ್ಲಿ ಗ್ರಾಮಸ್ಥರು ಇಬ್ಬರು ಗಂಡುಮಕ್ಕಳಿಗೆ ಮದುವೆ ಮಾಡಿಸಿದ್ದಾರೆ.

ಇದರಲ್ಲಿ ವಿಶೇಷ ಅಂದರೇ ಇದರಲ್ಲಿ ಒಬ್ಬ ಹುಡುಗ ವಧು ವೇಷ ಧರಿಸಿದ್ದು, ಇನ್ನೊಬ್ಬ ವರನ ವೇಷ ಧರಿಸಿ ಪರಸ್ಪರ ಮದುವೆಯಾಗಿದ್ದಾರೆ. ಮದುವೆ ಸಮಾರಂಭವನ್ನು ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಮಾಡಲಾಯಿತು. ಈ ಮದುವೆಗೆ ಜನರನ್ನು ಆಹ್ವಾನಿಸಿ ರುಚಿಕರವಾದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮುಂಗಾರು ಮಳೆಯ ಕೊರತೆ ಮತ್ತು ಈಗ ಮುಂಗಾರು ತಡವಾಗಿ ಆರಂಭವಾಗಿರುವುದರಿಂದ ರಾಜ್ಯದ ಎಲ್ಲ ಜಲಾಶಯಗಳಲ್ಲಿ ನೀರಿನ ಮಟ್ಟವು ಕಡಿಮೆಯಾಗಿದೆ.

ಇದನ್ನೂ ಓದಿ: Karnataka Rains: ಮುಂಗಾರು ಚುರುಕು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್​

ಮಳೆಯಾಗಲೆಂದು ಹೂತಿದ್ದ ಶವಕ್ಕೆ ನೀರು ಹಾಕಿದ ಗ್ರಾಮಸ್ಥರು

ಇನ್ನು ವಿಜಯಪುರದಲ್ಲಿ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಸ್ಥರು ಮಳೆಗಾಗಿ ಹೂತಿದ್ದ ಶವಕ್ಕೆ ನೀರು ಹಾಕಿದ್ದಾರೆ. ಗ್ರಾಮದ ವಾಗೀಶ ಹಿರೇಮಠ ಅವರ ನೇತೃತ್ವದಲ್ಲಿ ಹೂತಿದ್ದ ಶವದ ಮೇಲೆ‌ ಗ್ರಾಮಸ್ಥರು ನೀರು ಹಾಕಿದ್ದಾರೆ.

ಕಳೆದ ವರ್ಷವೂ ಇದೇ ರೀತಿ ಗ್ರಾಮದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿದ್ದರು. ಕಾಕತಾಳೀಯವೆಂಬಂತೆ ಆಗ ಸ್ವಲ್ಪ ಮಳೆಯಾಗಿತ್ತು. ಈ ಬಾರಿಯೂ ಶವದ ಮೇಲೆ ನೀರು ಹಾಕಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ