ಮಂಡ್ಯ: ಕಾರು- ಬಸ್ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು

| Updated By: ganapathi bhat

Updated on: Jan 02, 2022 | 10:49 PM

ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ಮೂಲದ ಸುದೀಪ್ (35), ಶ್ರೀಜಾ (30) ಹಾಗೂ ಸಂಗಮ್ಮ (55) ಮೃತ ದುರ್ದೈವಿಗಳು.

ಮಂಡ್ಯ: ಕಾರು- ಬಸ್ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು
Follow us on

ಮಂಡ್ಯ: ಖಾಸಗಿ ಬಸ್​ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಅಪಘಾತ ಕೆಂಪನಕೊಪ್ಪಲು ಗೇಟ್ ಬಳಿ ಸಂಭವಿಸಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕೆಂಪನಕೊಪ್ಪಲು ಎಂಬಲ್ಲಿ ಅಪಘಾತ ನಡೆದಿದೆ. ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ಮೂಲದ ಸುದೀಪ್ (35), ಶ್ರೀಜಾ (30) ಹಾಗೂ ಸಂಗಮ್ಮ (55) ಮೃತ ದುರ್ದೈವಿಗಳು.

ಕಾರಲ್ಲಿದ್ದ ಯುವತಿ ಸ್ಥಿತಿ ಗಂಭೀರವಾಗಿದೆ. ಅವರನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾಸಗಿ ಬಸ್​ ಚಾಲಕ ಸೇರಿದಂತೆ ನಾಲ್ವರಿಗೆ ಗಾಯವಾಗಿದೆ. ಗಾಯಾಳುಗಳು ನಾಗಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರು: ಕುಡಿದ ಅಮಲು, ಗಾಂಜಾ ಮತ್ತಿನಲ್ಲಿ ಮಹಿಳೆ ಮೇಲೆ ಹಲ್ಲೆ
ಕುಡಿದ ಅಮಲು, ಗಾಂಜಾ ಮತ್ತಿನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಮರ್ಫಿಟೌನ್​​ನ ಕಾಲೋನಿಯಲ್ಲಿ ನಡೆದಿದೆ. ಎಲ್ಸಿ, ತಮ್ಮ ನವೀನ್​ ಮೇಲೆ ಗಾಂಜಾ ಗ್ಯಾಂಗ್​ನಿಂದ​​​ ಹಲ್ಲೆ ಮಾಡಲಾಗಿದೆ. ಮಹಿಳೆ ಮನೆ ಬಳಿ ಗಾಂಜಾ ಸೇವಿಸಿ ಪುಂಡರಿಂದ ಗಲಾಟೆ ನಡೆದಿದೆ. ಇಲ್ಲಿ ಗಲಾಟೆ ಮಾಡಬೇಡಿ ಅಂದಿದ್ದಕ್ಕೆ ಅಕ್ಕ, ತಮ್ಮನಿಗೆ ಪುಂಡರು ಥಳಿಸಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಮೀನಗಡದಲ್ಲಿ 2 ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮೀನಗಡದಲ್ಲಿ 2 ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಚಲಿಸುತ್ತಿದ್ದ ಟ್ರ್ಯಾಕ್ಟರ್​​ನಿಂದ ಬಿದ್ದು ಚಕ್ರಕ್ಕೆ ಸಿಲುಕಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಶಂಕರ ಗುಡೂರ(35) ದುರ್ಮರಣವನ್ನಪ್ಪಿದ್ದಾರೆ. ಮತ್ತೊಂದು ಅಪಘಾತದಲ್ಲಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಡಿಕ್ಕಿಯಾಗಿ ಉದ್ಯಮಿ ಆನಂದ ಜಾಲಗಾರ(29) ಮೃತಪಟ್ಟಿದ್ದಾರೆ. ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ನಡೆದಿವೆ.

ಟಾಟಾಏಸ್ ಡಿಕ್ಕಿಯಾಗಿ ರಸ್ತೆಬದಿ ನಿಂತಿದ್ದ ವ್ಯಕ್ತಿ ಸಾವು
ಟಾಟಾಏಸ್ ಡಿಕ್ಕಿಯಾಗಿ ರಸ್ತೆಬದಿ ನಿಂತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಹೆಸರಘಟ್ಟ ರಸ್ತೆ ಬೋನ್​​ಮಿಲ್ ಬಳಿ ನಡೆದಿದೆ. ದಾಸರಹಳ್ಳಿಯ ಬಾಬು(55) ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ. ಘಟನೆ ಬಳಿಕ ವಾಹನ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿ ಆಗಿದ್ದಾರೆ. ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತುಮಕೂರು: ಕರಿಬಸವೇಶ್ವರ ಮಠದ ಆನೆ ಅಪಹರಣಕ್ಕೆ ಯತ್ನ
ಇಲ್ಲಿನ ಕರಿಬಸವೇಶ್ವರ ಮಠದ ಆನೆಯನ್ನು ಅಪಹರಣ ಮಾಡಲು ಯತ್ನಿಸಿದ ಕುತೂಹಲಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಲಕ್ಷ್ಮೀ ಎಂಬ ಹೆಣ್ಣಾನೆ ಅಪಹರಿಸಿ ಗುಜರಾತ್​​ಗೆ ಸಾಗಿಸಲು ಯತ್ನಿಸಲಾಗಿದೆ. ಆನೆಗೆ ಚಿಕಿತ್ಸೆ ಕೊಡಿಸಬೇಕು ಎಂದು ಪ್ಲ್ಯಾನ್​ ಮಾಡಿ ಅಪಹರಣ ಮಾಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಅಪಹರಣಕ್ಕೆ ಸಂಚು ಹೂಡಲಾಗಿತ್ತು ಎಂಬುದು ತಿಳಿದುಬಂದಿದೆ.

ಆನೆ ಅಪಹರಣ ಮಾಡಲು ಅರಣ್ಯ ಇಲಾಖೆ ಅಧಿಕಾರಿ ಪ್ರಕಾಶ್, ವಕೀಲ ಎಂದು ಹೇಳಿಕೊಂಡಿದ್ದ ದೇವರಾಜುನಿಂದ ಸಹಕಾರ ಎಂಬ ಬಗ್ಗೆ ಅನುಮಾನ ಮೂಡಿದೆ. ಆನೆಯನ್ನು ಬನ್ನೇರುಘಟ್ಟದಲ್ಲಿ ಚಿಕಿತ್ಸೆ ಕೊಡಿಸ್ತೇವೆ ಎಂದು ಕರೆದೊಯ್ದಿದ್ರು, ಖದೀಮರು ಮಾವುತನೊಂದಿಗೆ ಆನೆ ಕರೆದುಕೊಂಡು ಹೋಗಿದ್ದರು. ಬಳಿಕ, ದಾಬಸ್​ಪೇಟೆಯಲ್ಲಿ ಮಾವುತನ ಮೇಲೆ ಹಲ್ಲೆ ನಡೆಸಿದ್ದ ಗ್ಯಾಂಗ್ ಲಾರಿಯಿಂದ ಮಾವುತನನ್ನು ಕೆಳಗಿಸಿ ಆನೆ ಸಾಗಿಸಿತ್ತು. ಆರೋಪಿಗಳು ಕುಣಿಗಲ್‌ ತಾಲೂಕಿನ ಹಳ್ಳಿಗೆ ಆನೆ ಸಾಗಿಸಿದ್ದರು. ಗುಜರಾತ್‌ ಮೂಲದ ಸರ್ಕಸ್ ಕಂಪನಿಗೆ ಮಾರಲು ಯತ್ನಿಸಿದ್ದರು. ಈ ಬಗ್ಗೆ ತುಮಕೂರು ನಗರ ಠಾಣೆಗೆ ಮಠದ ಆಡಳಿತ ಮಂಡಳಿ ದೂರು ನೀಡಿದೆ.

ಇದನ್ನೂ ಓದಿ: Crime News: ಹಿಟಾಚಿ ಹರಿದು ಮಗು ಮೃತ್ಯು, ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವು, ಮೂವರು ದರೋಡೆಕೋರರ ಬಂಧನ

ಇದನ್ನೂ ಓದಿ: ‘ಕಲ್ಪನಾ ಮತ್ತು ಮಂಜುಳಾಗೆ ಇಂಥ ಸಾವು ಬೇಕಿತ್ತಾ?’; ಮಿಂಚಿ ಮರೆಯಾದ ನಟಿಯರ ಬಗ್ಗೆ ರಾಜೇಶ್​ ವಿಷಾದದ ಮಾತು

Published On - 6:58 pm, Sun, 2 January 22