Crime News: ಹಿಟಾಚಿ ಹರಿದು ಮಗು ಮೃತ್ಯು, ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವು, ಮೂವರು ದರೋಡೆಕೋರರ ಬಂಧನ

ಹೊಸ ವರ್ಷಾಚರಣೆಯ ವೇಳೆ ಪೊಲೀಸರ ಮೇಲೆ ಪ್ರತಿಷ್ಠಿತರ ಮಕ್ಕಳಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 8 ಆರೋಪಿಗಳಿಗೆ ಕೋರ್ಟ್​​ನಿಂದ ಜಾಮೀನು ಲಭಿಸಿದೆ. 8 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

Crime News: ಹಿಟಾಚಿ ಹರಿದು ಮಗು ಮೃತ್ಯು, ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವು, ಮೂವರು ದರೋಡೆಕೋರರ ಬಂಧನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Jan 01, 2022 | 9:09 PM

ಬೆಂಗಳೂರು: ನಗರದಲ್ಲಿ ಹಿಟಾಚಿ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಉಪ್ಪಾರಪೇಟೆ ಬಳಿಯ ಧನ್ವಂತರಿ ರಸ್ತೆಯಲ್ಲಿ ಅಪಘಾತ ನಡೆದಿದೆ. ಹಿಟಾಚಿ ಹರಿದು ಮೂರು ವರ್ಷದ ಸಿಮಿಯಾನ್ ಎಂಬ ಮಗು ಸಾವನ್ನಪ್ಪಿದೆ. ಮುಂಜಾನೆ 5ರ ಸುಮಾರಿಗೆ ತಂದೆ ಡೇವಿಡ್ ಜತೆ ಬಂದಿದ್ದ ಮಗು, ಹಿಟಾಚಿ ರಿವರ್ಸ್ ತೆಗೆಯುವಾಗ ಮೃತಪಟ್ಟಿದೆ. ಜೆಸಿಬಿ ಚಾಲಕ ಶಂಕರ್ ನಾಯಕ್ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಳ್ಳಿ ಬಳಿ ಮೂವರು ದರೋಡೆಕೋರರ ಬಂಧನ ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಳ್ಳಿ ಬಳಿ ಮೂವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ರಾಜು, ಸತ್ಯವೇಲು, ಜಾನ್ಸನ್ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಆಟೋ, ಮಾರಕಾಸ್ತ್ರಗಳು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡ ಅಜಿತ್, ರವಿಕುಮಾರ್​ಗೆ ಶೋಧಕಾರ್ಯ ನಡೆಸಲಾಗುತ್ತಿದೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೀನು ಮಾರುತ್ತಿದ್ದ ಮಹಿಳೆ ಸೇರಿದಂತೆ ಮೂವರ ಮೇಲೆ ಹಲ್ಲೆ ಮೀನು ಮಾರುತ್ತಿದ್ದ ಮಹಿಳೆ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. ಮೀನು ಮಾರುತ್ತಿದ್ದ ಸುರೇಶ್, ಶರವಣ, ಮಂಜುಳಾ ಮೇಲೆ ಹಲ್ಲೆ ಮಾಡಲಾಗಿದೆ. ಶ್ರೀನಿವಾಸ, ಆನಂದ ಸೇರಿದಂತೆ ಐವರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಂಗಳೂರಲ್ಲಿ ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವು ಬೆಂಗಳೂರಲ್ಲಿ ಮನೆಗೆಲಸದ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆ ಬೆಳ್ಳಂದೂರಿನ ಟೆಕ್ಕಿ ವಿವೇಕ್ ಎಂಬವರ ಫ್ಲ್ಯಾಟ್​ನಲ್ಲಿ ನಡೆದಿದೆ. ಟೆಕ್ಕಿಯೊಬ್ಬರ ಫ್ಲ್ಯಾಟ್​ನಲ್ಲಿ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ್ದಾರೆ. ಬೆಳ್ಳಂದೂರಿನ ಟೆಕ್ಕಿ ವಿವೇಕ್ ಫ್ಲ್ಯಾಟ್​ನಲ್ಲಿ ಯುವತಿ ಶವ ಪತ್ತೆ ಆಗಿದೆ. ಫ್ಲ್ಯಾಟ್​ನ ಸ್ನಾನದ ಕೋಣೆಯಲ್ಲಿ ಕವಿತಾ (19) ಶವ ಪತ್ತೆ ಆಗಿದೆ. ಕವಿತಾ ನೇಣಿಗೆ ಶರಣಾಗಿದ್ದಾಳೆಂದು ಪೋಷಕರಿಗೆ ಮಾಹಿತಿ ನೀಡಲಾಗಿದೆ. ಕವಿತಾ ಪೋಷಕರಿಗೆ ಫ್ಲ್ಯಾಟ್​ ಮಾಲೀಕ ವಿವೇಕ್ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹೊಸ ವರ್ಷಾಚರಣೆಯ ವೇಳೆ ಪೊಲೀಸರ ಮೇಲೆ ಪ್ರತಿಷ್ಠಿತರ ಮಕ್ಕಳಿಂದ ಹಲ್ಲೆ; ಆರೋಪಿಗಳಿಗೆ ಜಾಮೀನು ಹೊಸ ವರ್ಷಾಚರಣೆಯ ವೇಳೆ ಪೊಲೀಸರ ಮೇಲೆ ಪ್ರತಿಷ್ಠಿತರ ಮಕ್ಕಳಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 8 ಆರೋಪಿಗಳಿಗೆ ಕೋರ್ಟ್​​ನಿಂದ ಜಾಮೀನು ಲಭಿಸಿದೆ. 8 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ದೊರಕಿದೆ. ಬೆಂಗಳೂರು ಮೂಲದ ರಘು ವಂಶ ಸಗ್ ಖನೂಜ್, ಅಕ್ಷಯ್ ಬಜಾಜ್, ತೇಜಸ್, ಆಕಾಶ್, ಆದಿತ್ಯ, ಚಿರಾಗ್, ಸೂರಜ್, ಅರ್ಜುನ್​ಗೆ ಬೇಲ್​ ಮಂಜೂರಾಗಿದೆ.

ನೈಟ್ ಕರ್ಫ್ಯೂ ಉಲ್ಲಂಘಿಸಿ ನಿನ್ನೆ ಮಧ್ಯರಾತ್ರಿ ಪಾರ್ಟಿ ಮಾಡಿದ್ದರು. ವೈಟ್ ನಿರ್ವಾಣ್ ಬೈ ಜಡೆ ಹೋಂ ಸ್ಟೇನಲ್ಲಿ ಪಾರ್ಟಿ ಮಾಡಿದ್ದರು. ಚಿಕ್ಕಬಳ್ಳಾಪುರ ತಾಲೂಕು ಅಗಲಗುರ್ಕಿ ಬಳಿ ಹೋಂಸ್ಟೇಯಲ್ಲಿ ಘಟನೆ ನಡೆದಿತ್ತು. ರಾತ್ರಿ ಹೋಂ ಸ್ಟೇ ಮೇಲೆ ಪೊಲೀಸರು ದಾಳಿ ಮಾಡಿದ್ದರು. ದಾಳಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರು. ಹಲ್ಲೆ ಹಿನ್ನೆಲೆ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು.

ಮಂಗಳೂರು: ಬೈಕ್ ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಆದ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ನಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಕಿನ್ನಿಗೋಳಿಯ ಪೆಟ್ರೋಲ್ ಪಂಪ್ ಬಳಿ ಘಟನೆ ಸಂಭವಿಸಿದೆ. ಬೈಕ್ ಸವಾರ ಪೆಟ್ರೋಲ್ ಪಂಪ್​ನಿಂದ ಹೊರಬರುತ್ತಿದ್ದ. ಆ ವೇಳೆ, ಮುಂಭಾಗದಿಂದ ಬಂದ ಆಟೋ ರಿಕ್ಷಾಗೆ ಡಿಕ್ಕಿ ಆಗಿತ್ತು. ಘಟನೆಯಲ್ಲಿ ಬೈಕ್ ಸವಾರ ಪ್ರೇಮ್​ಗೆ ಗಂಭೀರ ಗಾಯವಾಗಿದೆ. ಆಟೋ ಚಾಲಕ ಅಸೀಂಗೂ ಗಾಯ ಆಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಪೆಟ್ರೋಲ್ ಬಂಕ್ ನ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಕರ್ನಾಟಕ ವಿವಿಯಲ್ಲಿ ಎಸಿಬಿ ಅಧಿಕಾರಿಗಳ ವಿಚಾರಣೆ ಕರ್ನಾಟಕ ವಿವಿಯಲ್ಲಿ ಎಸಿಬಿ ಅಧಿಕಾರಿಗಳ ವಿಚಾರಣೆ ನಡೆಸಲಾಗಿದೆ. ಸೋಲಾರ್ ಫಲಕ ಅಳವಡಿಕೆಯಲ್ಲಿ ಅವ್ಯವಹಾರ ಹಿನ್ನೆಲೆ ರಾಜ್ಯಪಾಲರ ಅನುಮತಿ ಮೇರೆಗೆ ಅಧಿಕಾರಿಗಳ ತನಿಖೆ ನಡೆದಿದೆ. ಬಿಜೆಪಿ ಮುಖಂಡ ಈರೇಶ ಅಂಚಟಗೇರಿ ಎಸಿಬಿಗೆ ಮೊರೆ ಹೋಗಿದ್ದರು. DySP ಮಹಾಂತೇಶ್ ಜಿದ್ದಿ ನೇತೃತ್ವದ ತಂಡದಿಂದ ತನಿಖೆ ನಡೆಸಲಾಗಿದೆ. ಡಾ. ಹೆಚ್.ಬಿ. ವಾಲೀಕಾರ್ ಕುಲಪತಿಯಾಗಿದ್ದಾಗಿನ ಯೋಜನೆ ಸಂಬಂಧ 1 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಅವ್ಯವಹಾರ ಬಗ್ಗೆ ಅನುಮಾನ ಉಂಟಾಗಿದೆ. ಯೋಜನೆಯಲ್ಲಿ ಅಕ್ರಮವಾಗಿದೆ ಎಂದು ಆರೋಪ ಕೇಳಿಬಂದಿದೆ.

ನೀರಮಾನ್ವಿ ಬೆಟ್ಟದಲ್ಲಿ 2 ಚಿರತೆ ಕಾಣಿಸಿದ್ದಾಗಿ ಗ್ರಾಮಸ್ಥರ ಮಾಹಿತಿ ನೀರಮಾನ್ವಿ ಬೆಟ್ಟದಲ್ಲಿ 2 ಚಿರತೆ ಕಾಣಿಸಿದ್ದಾಗಿ ಗ್ರಾಮಸ್ಥರ ಮಾಹಿತಿ ಕೇಳಿಬಂದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ಚಿರತೆ ಕಾಣಿಸಿದ್ದಾಗಿ ಮಾಹಿತಿ ಲಭಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಮಾಹಿತಿ ಲಭಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಗೆ ನಾಳೆ ಬೋನ್ ಇರಿಸುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Crime News: ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಹಲ್ಲೆ, ಸಾಲಬಾಧೆ ತಾಳಲಾರದೆ ವಿಷಸೇವಿಸಿ ರೈತ ಆತ್ಮಹತ್ಯೆ

ಇದನ್ನೂ ಓದಿ: 20 ಲಕ್ಷ ಲಂಚ ಸ್ವೀಕಾರ ಆರೋಪ, ಸಿಬಿಐ ದಾಳಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿನ ಅಧಿಕಾರಿ ಸಹಿತ ನಾಲ್ವರ ಬಂಧನ