Mandya News: ವಿಸಿ ನಾಲೆಗೆ ಬಿದ್ದ ಕಾರು; ನಾಪತ್ತೆಯಾಗಿದ್ದ ಚಾಲಕನ ಮೃತದೇಹ ಪತ್ತೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 28, 2023 | 8:54 AM

ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದು, ಚಾಲಕ ಲೋಕೇಶ್ ಎಂಬಾತ ನಾಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಸಿ ನಾಲೆಯಲ್ಲಿ ಚಾಲಕ ಲೋಕೇಶ್ ಮೃತದೇಹ ಪತ್ತೆಯಾಗಿದೆ.

Mandya News: ವಿಸಿ ನಾಲೆಗೆ ಬಿದ್ದ ಕಾರು; ನಾಪತ್ತೆಯಾಗಿದ್ದ ಚಾಲಕನ ಮೃತದೇಹ ಪತ್ತೆ
ಮೃತ ಕಾರು ಚಾಲಕ
Follow us on

ಮಂಡ್ಯ, ಜು.28: ತಾಲೂಕಿನ ತಿಬ್ಬನಹಳ್ಳಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದು, ಚಾಲಕ ಲೋಕೇಶ್ ಎಂಬಾತ ನಾಪತ್ತೆಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಸಿ ನಾಲೆಯಲ್ಲಿ ಚಾಲಕ ಲೋಕೇಶ್ ಮೃತದೇಹ ಪತ್ತೆಯಾಗಿದೆ. ನಿನ್ನೆ(ಜು.27) ಮಂಡ್ಯ(Mandya) ತಾಲೂಕಿನ ತಿಬ್ಬನಹಳ್ಳಿ ಗ್ರಾಮದ ಬಳಿ ವಿಸಿ ನಾಲೆಗೆ ಸಿಫ್ಟ್ ಕಾರು ಬಿದ್ದಿತ್ತು. ನಂತರ ನೀರಿನ ರಭಸಕ್ಕೆ ಚಾಲಕ ಲೋಕೇಶ್ ಕೊಚ್ಚಿ ಹೋಗಿದ್ದ. 18 ಅಡಿ ಆಳವಿರುವ ಈ ನಾಲೆಯಲ್ಲಿ ಆತನಿಗಾಗಿ ನಿನ್ನೆಯಿಂದ ಅಗ್ನಿಶಾಮಕ ದಳ ಸಿಬ್ಬಂದಿಯವರು ಹುಡುಕಾಟ ನಡೆಸಿದ್ದರು. ಈ ಕುರಿತು ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಡ್ಯದ ಶಿವಳ್ಳಿ ಗ್ರಾಮದ ಮೃತ ಚಾಲಕ ಲೋಕೇಶ್ ನಿನ್ನೆ ಮೈಸೂರಿಗೆ ಹೋಗಬೇಕು ಎಂದು ಸ್ನೇಹಿತ ಮೋಹನ್ ಬಳಿ ಕಾರು ತೆಗೆದುಕೊಂಡು ಹೋಗಿದ್ದ. ಬಳಿಕ ಕಾರು ವಾಪಾಸ್ ಕೊಡಲು ಶಿವಳ್ಳಿಯಿಂದ ತಿಬ್ಬನಹಳ್ಳಿಗೆ ಹೋಗುವಾಗ ಈ ಘಟನೆ ನಡೆದಿತ್ತು. ಸುಮಾರು 18 ಅಡಿ ಆಳವಿರುವ ಈ ವಿಸಿ ನಾಲೆಗೆ ಬಿದ್ದ ನಂತರ ಲೋಕೇಶ್ ಕಾರಿನ ಮೇಲೆ ಹತ್ತು ಕುಳಿತಿದ್ದನಂತೆ. ಆನಂತರ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ:Mandya News: ಬೈಕ್​ನಿಂದ ಬಿದ್ದು ಶಿಕ್ಷಕ ಸಾವು; ಹತ್ತಿರವಿದ್ದರೂ ಸಹಾಯಕ್ಕೆ ಬಾರದೇ ಮಾನವೀಯತೆ ಮರೆತ ಜನ

ಅಪಘಾತ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಮೃತ ದೇಹ ಪತ್ತೆ

ಇನ್ನು ನಿನ್ನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಕಾರನ್ನ ಮೇಲಕ್ಕೆ ಎತ್ತಿದ್ದರು. ಬಳಿಕ ಕಾರಿನಲ್ಲಿ ಮತ್ತೆ ಯಾರಾದರೂ ಇದ್ದರಾ? ಎಂಬ ಅನುಮಾನ ಮೂಡಿತ್ತು. ಇನ್ನು ಲೊಕೇಶ್​ ಈಜು ಬಾರದೇ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾದ ಹಿನ್ನಲೆ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ಆರಂಭಿಸಿದ್ದರು. ಆದರೆ, ಇಂದು ಬೆಳಿಗ್ಗೆ ಅಪಘಾತ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಮಾತ್ರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿಸಿ ನಾಲೆಗೆ ನೀರು ಬಿಟ್ಟಿದ್ದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:53 am, Fri, 28 July 23