Mandya News: ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಕಾರು; ಚಾಲಕನಿಗಾಗಿ ಹುಡುಕಾಟ
ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಘಟನೆ ನಡೆದಿದ್ದು, ಚಾಲಕನಿಗಾಗಿ ಶೋಧಕಾರ್ಯ ನಡೆದಿದೆ.

ಮಂಡ್ಯ, ಜು.27: ತಾಲೂಕಿನ ತಿಬ್ಬನಹಳ್ಳಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದ ಘಟನೆ ನಡೆದಿದೆ. ಮಂಡ್ಯ (Mandya) ದ ಶಿವಳ್ಳಿ ಗ್ರಾಮದ ಲೋಕೇಶ್ ಎಂಬಾತ ನಿನ್ನೆ ಮೈಸೂರಿಗೆ ಹೋಗಬೇಕು ಎಂದು ಸ್ನೇಹಿತ ಮೋಹನ್ ಬಳಿ ಕಾರು ತೆಗೆದುಕೊಂಡು ಹೋಗಿದ್ದ. ಇದೀಗ ಕಾರು ವಾಪಾಸ್ ಕೊಡಲು ಶಿವಳ್ಳಿಯಿಂದ ತಿಬ್ಬನಹಳ್ಳಿಗೆ ಹೋಗುವಾಗ ಈ ಘಟನೆ ನಡೆದಿದೆ. ಸುಮಾರು 18 ಅಡಿ ಆಳ ಇರುವ ಈ ವಿಸಿ ನಾಲೆಗೆ ಬಿದ್ದ ನಂತರ ಲೋಕೇಶ್ ಕಾರಿನ ಮೇಲೆ ಹತ್ತು ಕುಳಿತಿದ್ದನಂತೆ. ಆನಂತರ ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ
ಇನ್ನು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ಕಾರನ್ನ ಮೇಲಕ್ಕೆ ಎತ್ತುವ ಕಾರ್ಯದಲ್ಲಿ ತೊಡಗಿದ್ದು, ಕಾರಿನಲ್ಲಿ ಮತ್ತೆ ಯಾರಾದರೂ ಇದ್ದರಾ? ಎಂಬ ಅನುಮಾನ ಮೂಡಿದೆ. ಇನ್ನು ಲೊಕೇಶ್ ಈಜು ಬಾರದೇ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿಸಿ ನಾಲೆಗೆ ನೀರು ಬಿಟ್ಟಿದ್ದರು. ಈ ಕುರಿತು ಶಿವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲದಲ್ಲಿ ಸರಣಿ ಕಳ್ಳತನ
ಬೆಂಗಳೂರು ಗ್ರಾಮಾಂತರ: ನೆಲಮಂಗಲದಲ್ಲಿ ಸರಣಿ ಕಳ್ಳತನ ನಡೆದಿದೆ. ಭೂಮಿಕಾ ಮಿಲ್ಟ್ರಿ ಹೋಟೆಲ್ನಲ್ಲಿ 10 ಸಾವಿರ, ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಕಳ್ಳತನಕ್ಕೆ ಯತ್ನ ಸೇರಿದಂತೆ ಮೂರು ಕಡೆಗಳಲ್ಲಿ ಕಳ್ಳತನ ನಡೆದಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ