AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಿ ನಟಿಯನ್ನು ತಮ್ಮ ಸಿನಿಮಾದಿಂದ ಹೊರ ಹಾಕಿದ ಬಾಲಿವುಡ್​ ಚಿತ್ರತಂಡ

Pakistani actress Hania: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಿ ನಟ-ನಟಿಯರ ಮೇಲೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಪಾಕಿಸ್ತಾನಿ ನಟ-ನಟಿಯರು ನಟಿಸಿರುವ ಸಿನಿಮಾಗಳನ್ನು ನಿಷೇಧಿಸಲಾಗುತ್ತಿದೆ. ಈಗಾಗಲೇ ಫಹಾದ್ ಖಾನ್ ನಟನೆಯ ‘ಅಬಿರ್ ಗುಲಾಲ್’ ಸಿನಿಮಾಕ್ಕೆ ನಿಷೇಧದ ಭೀತಿ ಎದುರಾಗಿದೆ. ಅದರ ಬೆನ್ನಲ್ಲೆ ಪಾಕಿಸ್ತಾನಿ ನಟಿಯನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಿದ್ದ ಹಿಂದಿ ಸಿನಿಮಾವೊಂದು ನಿರ್ಧಾರದಿಂದ ಹಿಂದೆ ಸರಿದಿದೆ.

ಪಾಕಿಸ್ತಾನಿ ನಟಿಯನ್ನು ತಮ್ಮ ಸಿನಿಮಾದಿಂದ ಹೊರ ಹಾಕಿದ ಬಾಲಿವುಡ್​ ಚಿತ್ರತಂಡ
Hania Aamir
ಮಂಜುನಾಥ ಸಿ.
| Updated By: ಡಾ. ಭಾಸ್ಕರ ಹೆಗಡೆ|

Updated on:Apr 29, 2025 | 3:58 PM

Share

ಪಹಲ್ಗಾಮ್ (Pahalgam) ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ಭಾರತೀಯರಿಂದ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ ಮೇಲೆ ಯುದ್ಧ ಮಾಡಿಯೇ ತೀರಬೇಕೆಂಬ ಒತ್ತಾಯ ಸಾಮಾನ್ಯ ನಾಗರೀಕರಿಂದ ಕೇಳಿ ಬರುತ್ತಿದೆ. ಪಾಕಿಸ್ತಾನದ ವಿರುದ್ಧ ಸಂಘಟಿತ ಆಕ್ರೋಶ ವ್ಯಕ್ತವಾಗುತ್ತಿದೆ, ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ‘ಅಬಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿದೆ. ಅದರ ಬೆನ್ನಲ್ಲೆ ಇದೀಗ ಭಾರತದ ಮತ್ತೊಂದು ಹೊಸ ಸಿನಿಮಾದಿಂದ ಪಾಕಿಸ್ತಾನಿ ನಟಿಯನ್ನು ಹೊರಗಿಡಲಾಗಿದೆ.

ದಿಲ್ಜಿತ್ ದುಸ್ಸಾಂಜ್ ನಟನೆಯ ‘ಸರ್ದಾರ್ ಜಿ 3’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿದ್ದು. ‘ಸರ್ದಾರ್ ಜಿ 3’ ಸಿನಿಮಾನಲ್ಲಿ ಪಾಕಿಸ್ತಾನಿ ಖ್ಯಾತ ನಟಿ, ಗಾಯಕಿ ಹಾನಿಯಾ ಆಮಿರ್ ಅವರು ನಾಯಕಿಯಾಗಿ ನಟಿಸಲಿದ್ದರು. ಕೆಲ ಮೂಲಗಳ ಪ್ರಕಾರ ಈ ಬಗ್ಗೆ ಮಾತುಕತೆಯೂ ಸಹ ಆಗಿತ್ತು. ಆದರೆ ಪಹಲ್ಗಾಮ್ ಗಲಾಟೆಯ ಬಳಿಕ ಹಾನಿಯಾ ಆಮಿರ್ ಅವರನ್ನು ‘ಸರ್ದಾರ್ ಜೀ 3’ ಸಿನಿಮಾದಿಂದ ಹೊರಗಿಡಲಾಗಿದೆ.

‘ಸರ್ದಾರ್ ಜೀ 3’ ಸಿನಿಮಾ ಅನ್ನು ನೀರು ಬಾಜ್ವಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಒಬ್ಬ ನಾಯಕಿಯಾಗಿ ಪಾಕಿಸ್ತಾನಿ ನಟಿ, ಗಾಯಕಿ ಹಾನಿಯಾ ಆಮಿರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಯೋಜನೆ ಚಿತ್ರತಂಡಕ್ಕಿತ್ತು. ಆದರೆ ಪಹಲ್ಗಾಮ್ ದಾಳಿ ಬಳಿಕ ಆಗಿರುವ ಬದಲಾವಣೆಯಿಂದಾಗಿ ನಟಿಯನ್ನು ಸಿನಿಮಾದಿಂದ ಕೈಬಿಡಲಾಗಿದೆ.

ಇದನ್ನೂ ಓದಿ:ಭಾರತದ ಬಳಿಕ ಪಾಕ್​ನಲ್ಲೂ ‘ಅಬಿರ್ ಗುಲಾಲ್’ ಸಿನಿಮಾಕ್ಕೆ ನಿಷೇಧ

ದಿಲ್ಜೀತ್ ದುಸ್ಸಾಂಜ್ ಈ ಹಿಂದೆ ‘ಇಲ್ಲುಮಿನಾಟಿ’ ಹೆಸರಿನ ಲೈವ್ ಮ್ಯೂಸಿಕ್ ಟೂರ್ ಮಾಡಿದ್ದರು. ಬ್ರಿಟನ್​ನಲ್ಲಿ ತಮ್ಮ ಲೈವ್ ಶೋ ಮಾಡಿದಾಗ ತಮ್ಮ ಕಾರ್ಯಕ್ರಮದ ಅತಿಥಿಯಾಗಿ ಹಾನಿಯಾ ಆಮಿರ್ ಅವರನ್ನು ಕರೆಸಿದ್ದರು. ದಿಲ್ಜೀತ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ನಟಿ ಹಾನಿಯಾ, ದಿಲ್ಜೀತ್ ಜೊತೆಗೆ ಹಾಡುಗಳನ್ನು ಸಹ ಹಾಡಿದ್ದರು. ದಿಲ್ಜೀತ್ ಹಾಗೂ ಹಾನಿಯಾರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಹ ಖುಷಿ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಸಿನಿಮಾದಲ್ಲಿಯೂ ಸಹ ಈ ಇಬ್ಬರನ್ನು ಒಟ್ಟಿಗೆ ತರುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಅದೀಗ ಮುರಿದು ಬಿದ್ದಿದೆ.

ಹಾನಿಯಾ ಆಮಿರ್ ಪಾಕಿಸ್ತಾನದ ಬಲು ಜನಪ್ರಿಯ ನಟಿ. ಟಿವಿ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಹಾನಿಯಾ ನಟಿಸಿದ್ದಾರೆ. ತಮ್ಮ ಸೌಂದರ್ಯ ಹಾಗೂ ಅದ್ಭುತ ನಟನೆಯಿಂದ ಹಾನಿಯಾ ಜನಪ್ರಿಯತೆ ಪಡೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Tue, 29 April 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ