‘ಅಭಿರ್ ಗುಲಾಲ್’ ಸಿನಿಮಾ ಹಾಡುಗಳ ತೆಗೆದು ಹಾಕಿದ ಯೂಟ್ಯೂಬ್
Abir Gulaal movie: ಪಹಲ್ಗಾಮ್ ದಾಳಿಯ ಬಳಿಕ ಬಾಲಿವುಡ್ ಸಿನಿಮಾ ‘ಅಬಿರ್ ಗುಲಾಲ್’ ನಿಷೇಧಕ್ಕೆ ಒತ್ತಾಯ ಕೇಳಿ ಬಂದಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ‘ಅಬಿರ್ ಗುಲಾಲ್’ ಸಿನಿಮಾದ ಬಿಡುಗಡೆಗೆ ಅವಕಾಶ ನಿರಾಕರಿಸಿದೆ ಎನ್ನಲಾಗುತ್ತಿದೆ. ಇದರ ನಡುವೆ ಯೂಟ್ಯೂಬ್, ಭಾರತದಲ್ಲಿ ‘ಅಭಿರ್ ಗುಲಾಲ್’ ಸಿನಿಮಾ ಹಾಡುಗಳನ್ನು ತೆಗೆದು ಹಾಕಿದೆ.

ಪಾಕಿಸ್ತಾನಿ ನಟ ಫಹಾದ್ ಖಾನ್ (Fahad Khan) ನಟಿಸಿರುವ ‘ಅಭಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂಬ ಒತ್ತಾಯ ಜೋರಾಗುತ್ತಿರುವ ಸಮಯದಲ್ಲಿಯೇ ಆ ಸಿನಿಮಾದ ಹಾಡುಗಳನ್ನು ಯೂಟ್ಯೂಬ್ ತೆಗೆದು ಹಾಕಿದೆ. ಪಹಲ್ಗಾಮ್ ದಾಳಿಯ ಬಳಿಕ ಬಾಲಿವುಡ್ ಸಿನಿಮಾ ‘ಅಬಿರ್ ಗುಲಾಲ್’ ನಿಷೇಧಕ್ಕೆ ಒತ್ತಾಯ ಕೇಳಿ ಬಂದಿದೆ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ‘ಅಬಿರ್ ಗುಲಾಲ್’ ಸಿನಿಮಾದ ಬಿಡುಗಡೆಗೆ ಅವಕಾಶ ನಿರಾಕರಿಸಿದೆ ಎನ್ನಲಾಗುತ್ತಿದೆ.
ವಿವಾದದ ಕೇಂದ್ರವಾಗಿರುವ ‘ಅಭಿರ್ ಗುಲಾಲ್’ ಸಿನಿಮಾ ಮೇ 9ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾನಲ್ಲಿ ಫಹಾದ್ ಖಾನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ನಟಿ ವಾಣಿ ಕಪೂರ್ ನಾಯಕಿ. ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ. ಫಹಾದ್ ಖಾನ್ ಹೊರತುಪಡಿಸಿ ಸಿನಿಮಾದಲ್ಲಿ ನಟಿಸಿರುವ, ಕೆಲಸ ಮಾಡಿರುವ ಎಲ್ಲರೂ ಭಾರತೀಯರೇ ಆಗಿದ್ದಾರೆ. ಆದರೆ ಪಾಕಿಸ್ತಾನಿ ನಟ ಫಹಾದ್ ಖಾನ್ ನಟಿಸಿರುವ ಕಾರಣಕ್ಕೆ ಈಗ ಸಿನಿಮಾಕ್ಕೆ ಸಮಸ್ಯೆ ಎದುರಾಗಿದೆ.
‘ಅಭಿರ್ ಗುಲಾಲ್’ ಸಿನಿಮಾದ ಕೆಲ ಹಾಡುಗಳು ಯೂಟ್ಯೂಬ್ನಲ್ಲಿ ಈ ಹಿಂದೆ ಬಿಡುಗಡೆ ಆಗಿತ್ತು. ಸಿನಿಮಾದ ಹಾಡುಗಳು ಚೆನ್ನಾಗಿಯೇ ಇದ್ದವು. ಆದರೆ ಇದೀಗ ಯೂಟ್ಯೂಬ್, ‘ಅಭಿರ್ ಗುಲಾಲ್’ ಸಿನಿಮಾದ ಹಾಡುಗಳನ್ನು ಡಿಲೀಟ್ ಮಾಡಿದೆ. ಯೂಟ್ಯೂಬ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ಭಾರತದಲ್ಲಿ ಮಾತ್ರ ‘ಅಭಿರ್ ಗುಲಾಲ್’ ಸಿನಿಮಾದ ಹಾಡುಗಳು ಯೂಟ್ಯೂಬ್ನಲ್ಲಿ ಕೇಳಲು ಲಭ್ಯ ಇರುವುದಿಲ್ಲ.
ಇದನ್ನೂ ಓದಿ:‘ಅಭಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಎಂಎನ್ಎಸ್ ವಿರೋಧ
‘ಅಭಿರ್ ಗುಲಾಲ್’ ಸಿನಿಮಾದ ಎರಡು ಹಾಡುಗಳು ಯೂಟ್ಯೂಬ್ನಲ್ಲಿ ಇದ್ದವು. ಅದರಲ್ಲಿ ಒಂದು ರೊಮ್ಯಾಂಟಿಕ್ ಹಾಡಾದರೆ ಮತ್ತೊಂದು ಪಾರ್ಟಿ ಡ್ಯಾನ್ಸ್ ಹಾಡಾಗಿತ್ತು. ಎರಡೂ ಹಾಡುಗಳು ತಕ್ಕ ಮಟ್ಟಿಗೆ ವೀವ್ಸ್ ಸಹ ಪಡೆದಿದ್ದವು. ಆದರೆ ಈಗ ಯೂಟ್ಯೂಬ್ ಇಂಡಿಯಾ ಎರಡೂ ಹಾಡುಗಳನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಿದೆ. ಇದು ಸಿನಿಮಾ ತಂಡಕ್ಕೆ ಭಾರಿ ಹಿನ್ನಡೆ ಉಂಟು ಮಾಡಿದೆ.
ಕೆಲ ತಿಂಗಳ ಹಿಂದೆಯಷ್ಟೆ ಪಾಕಿಸ್ತಾನದಲ್ಲೇ ನಿರ್ಮಾಣವಾಗಿದ್ದ ‘ಮೌಲಾ ಜಟ್’ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾನಲ್ಲಿ ಫಹಾದ್ ಖಾನ್ ಮತ್ತು ಮಹೀರಾ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಲವು ವರ್ಷಗಳ ಬಳಿಕ ಭಾರತದಲ್ಲಿ ಬಿಡುಗಡೆ ಆದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ‘ಮೌಲಾ ಜಟ್’ ಸಿನಿಮಾ ಗಳಿಸಿಕೊಂಡಿತು. ಪಂಜಾಬ್ ಪ್ರಾಂತ್ಯದಲ್ಲಿ ಈ ಸಿನಿಮಾ ತುಸು ಹಣ ಗಳಿಕೆಯನ್ನು ಮಾಡಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 am, Fri, 25 April 25




