ಇರಲು ಮನೆ ಇರಲಿಲ್ಲ, ಈಗ ಬರುವ ಬಾಡಿಗೆಗೆ ತಿಂಗಳಿಗೊಂದು ಸೈಟು ಖರೀದಿಸಬಹುದು
Manoj Bajpayee: ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿರುವ ಮನೋಜ್ ಬಾಜಪೇಯಿ ಮುಂಬೈಗೆ ಬಂದಾಗ 10/10ರ ಅಳತೆಯ ಮನೆಯಲ್ಲಿ ಗೆಳೆಯರೊಟ್ಟಿಗೆ ವಾಸವಿದ್ದರು. ಆದರೆ ಈಗ ಅವರಿಗೆ ತಿಂಗಳಿಗೆ ಬರುವ ಬಾಡಿಗೆ ಹಣದಲ್ಲಿ ಪ್ರತಿ ತಿಂಗಳು ಒಂದು ಹೊಸ ಸೈಟು ಖರೀದಿಸಬಹುದು.

ಮುಂಬೈಗೆ (Mumbai) ಬಂದಾಗ 10/10 ರೂಮಿನಲ್ಲಿ ಗೆಳೆಯರೊಟ್ಟಿಗೆ ವಾಸವಿದ್ದ ನಟ ಮನೋಜ್ ಬಾಜಪೇಯಿ ಈಗ ಬಾಲಿವುಡ್ನ ಸ್ಟಾರ್ ನಟರಲ್ಲಿ ಒಬ್ಬರು. ಮನೋಜ್ ಬಾಜಪೇಯಿ ಅವರ ಸ್ಟ್ರಗಲ್ ದಿನದ ಕತೆಗಳು ಬಹಳ ಜನಪ್ರಿಯ. ಆದರೆ ಈಗ ಅವರು ಬಾಲಿವುಡ್ನ ಶ್ರೀಮಂತ ನಟರಲ್ಲಿ ಒಬ್ಬರು. ವಯಸ್ಸು ಮಾಗಿದಂತೆ ಅವರಿಗೆ ಸಿಗುತ್ತಿರುವ ಅವಕಾಶಗಳು ಸಹ ಹೆಚ್ಚಾಗುತ್ತಲೇ ಇವೆ. ವೆಬ್ ಸರಣಿಗಳು, ಸಿನಿಮಾಗಳು ಹೀಗೆ ಒಂದರ ಹಿಂದೊಂದು ಪ್ರಾಜೆಕ್ಟ್ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಮನೋಜ್ ಬಾಜಪೇಯಿ ಸಿನಿಮಾಗಳ ಜೊತೆಗೆ ರಿಯಲ್ ಎಸ್ಟೇಟ್ನಲ್ಲಿಯೂ ಹೂಡಿಕೆ ಮಾಡಿದ್ದಾರೆ.
ಮನೋಜ್ ಬಾಜಪೇಯಿ ಮುಂಬೈ ನಗರ ಮತ್ತು ಹೊರರಾಜ್ಯಗಳಲ್ಲಿಯೂ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಅವರು ಮುಂಬೈನ ತಮ್ಮ ಸ್ಥಳವನ್ನು ಬಾಡಿಗೆಗೆ ನೀಡಿದ್ದು, ಭಾರಿ ಮೊತ್ತದ ಬಾಡಿಗೆಯನ್ನು ಇದರಿಂದ ಪಡೆಯುತ್ತಿದ್ದಾರೆ. ಮನೋಜ್ಗೆ ಬರುವ ತಿಂಗಳ ಬಾಡಿಗೆಯನ್ನು ಟಯರ್ 2 ನಗರದಲ್ಲಿ ಒಳ್ಳೆಯ ಸೈಟು ಖರೀದಿ ಮಾಡಬಹುದು, ಅಷ್ಟು ಹಣ ಅವರಿಗೆ ಬಾಡಿಗೆಯಿಂದಲೇ ಬರುತ್ತಿದೆ.
ಅಂಧೇರಿ ವೆಸ್ಟ್ನಲ್ಲಿ ಮನೋಜ್ ಬಾಜಪೇಯಿ ಅವರಿಗೆ ಸೇರಿದ 1905 ಚದರ ಅಡಿಯ ಎರಡು ಕಚೇರಿ ಸ್ಪೇಸ್ ಅನ್ನು ಬಾಡಿಗೆಗೆ ನೀಡಲಾಗಿದೆ. ಎರಡು ಕಂಪೆನಿಗಳಿಗೆ ಈ ಸ್ಥಳವನ್ನು ಬಾಡಿಗೆಗೆ ನೀಡಲಾಗಿದ್ದು ಐದು ವರ್ಷಕ್ಕೆ ಒಪ್ಪಂದ ಸಹ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಮನೋಜ್ ಬಾಜಪೇಯಿಗೆ ಪ್ರತಿ ತಿಂಗಳು 10.9 ಲಕ್ಷ ರೂಪಾಯಿ ಬಾಡಿಗೆ ಬರುತ್ತದೆ. 43.7 ಲಕ್ಷ ರೂಪಾಯಿಗಳನ್ನು ಅಡ್ವಾನ್ಸ್ ಹಣವಾಗಿ ಪಡೆದುಕೊಂಡಿದ್ದಾರೆ ಮನೋಜ್ ಬಾಜಪೇಯಿ. ಇದು ಮಾತ್ರವೇ ಅಲ್ಲದೆ ಪ್ರತಿ ವರ್ಷವೂ ಬಾಡಿಗೆ ಮೊತ್ತ 5% ಹೆಚ್ಚಳ ಮಾಡುವುದಾಗಿ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಈ ಆಫೀಸ್ ಸ್ಪೇಸ್ನ ಜೊತೆಗೆ ಆರು ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ನೀಡಲಾಗಿದೆ. ಹಾಗೂ 75 ದಿನಗಳ ಫಿಟ್ ಔಟ್ ಸಮಯ ಅಂದರೆ ಇಂಟೀರಿಯರ್ ಮಾಡಿಕೊಳ್ಳುವ ಸಮಯವನ್ನು ನೀಡಲಾಗಿದೆ.
ಇದನ್ನೂ ಓದಿ:‘ಕೆಜಿಎಫ್ 2’ ಜೋಡಿನ ಬಾಲಿವುಡ್ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್; ಕಾಡಿತ್ತು ಆ ಒಂದು ಭಯ
ಮನೋಜ್ ಬಾಜಪೇಯಿ ಹಲವು ಕರೆ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ. 2023 ರಲ್ಲಿ ಮುಂಬೈನ ಒಶಿವಾರನಲ್ಲಿ 32 ಕೋಟಿ ರೂಪಾಯಿ ನೀಡಿ ನಾಲ್ಕು ಆಫೀಸ್ ಸ್ಪೇಸ್ ಖರೀದಿ ಮಾಡಿದ್ದಾರೆ. 2024 ರಲ್ಲಿ 9 ಕೋಟಿ ನೀಡಿ ಮುಂಬೈನ ಮಹಾಲಕ್ಷ್ಮಿ ಏರಿಯಾನಲ್ಲಿ ಪ್ರಾಪರ್ಟಿಯೊಂದನ್ನು ಖರೀದಿ ಮಾಡಿದ್ದರು. ಇವುಗಳಲ್ಲಿ ಹಲವು ಸ್ಥಳಗಳನ್ನು ಬಾಡಿಗೆ ನೀಡಿರುವ ಮನೋಜ್ ಬಾಜಪೇಯಿ ಇದರಿಂದಲೇ ತಿಂಗಳಿಗೆ ಸುಮಾರು 30 ರಿಂದ 40 ಲಕ್ಷ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ.
ಮನೋಜ್ ಬಾಜಪೇಯಿ ಪ್ರಸ್ತುತ ಹಲವು ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ‘ಫ್ಯಾಮಿಲಿ ಮ್ಯಾನ್’ ಮನೋಜ್ ಅವರ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Fri, 25 April 25




