ದೇಶಕ್ಕೆ ಗಂಡಾಂತರ ಎದುರಾದಾಗ ಯುದ್ಧ ಮಾಡದೆ ಕೈ ಕಟ್ಟಿ ಕೂರಲಾದೀತೆ? ಅರ್ ಬಿ ತಿಮ್ಮಾಪುರ
ನಿನ್ನೆ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಪೊಲೀಸ್ ಅಧಿಕಾರಿಯ ಮೇಲೆ ಕೈ ಮಾಡಲು ಮುಂದಾಗಿದ್ದನ್ನು ಸಚಿವ ತಿಮ್ಮಾಪುರ ಡೌನ್ ಪ್ಲೇ ಮಾಡಿದರು. ಹಿಂದೆ, ಬಿಎಸ್ ಯಡಿಯೂರಪ್ಪನವರು ಐಎಎಸ್ ಅಧಿಕಾರಿಗಳ ಮೇಲೆ ಕೈ ಮಾಡಿದ್ದು ತನಗೆ ಗೊತ್ತಿದೆ, ಈ ಮಾತನ್ನು ಬಿವೈ ವಿಜಯೇಂದ್ರ ಅಲ್ಲಗಳೆಯುತ್ತಾರಾ? ಎಂದು ಪ್ರಶ್ನಿಸಿದ ತಿಮ್ಮಾಪುರ, ಸಿಎಂ ಸಿದ್ದರಾಮಯ್ಯ ಯಾವ ಒತ್ತಡದಲ್ಲೂ ಇಲ್ಲ ಎಂದು ಹೇಳಿದರು.
ಬಾಗಲಕೋಟೆ, ಏಪ್ರಿಲ್ 29: ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ತಮ್ಮ ವಾದವನ್ನು ಬಿಡಲಾರರು. ಪಾಕಿಸ್ತಾನದೊಂದಿಗೆ ಯುದ್ಧ (war against Pakistan) ಬೇಕೇ ಬೇಡವೇ ಎಂಬ ಪ್ರಶ್ನೆಗೆ ಅವರು ಮೊನ್ನೆ ಹೇಳಿದ್ದನ್ನೇ ಇವತ್ತು ಕೊಂಚ ಮಾಡಿಫೈ ಮಾಡಿ ಹೇಳಿದರು. ದೇಶದ ಪರಿಸ್ಥಿತಿ ಏನು ಅನ್ನೋದು ಪ್ರಧಾನಿಯವರಿಗೆ ಚೆನ್ನಾಗಿ ಗೊತ್ತು, ಅವರು ನಿರ್ಧಾರ ತೆಗೆದುಕೊಳ್ಳಲಿ ನಾವು ಬದ್ಧತೆಯನ್ನು ತೋರಿಸುತ್ತೇವೆ ಎಂದು ಅವರು ಹೇಳಿದರು. ಯುದ್ಧದ ಅವಶ್ಯಕತೆಯಿದೆಯಾ ಅಂತ ಯೋಚಿಸಬೇಕಾಗಿದೆ ಎಂದಷ್ಟೇ ತಾನು ಹೇಳಿದ್ದು, ದೇಶಕ್ಕೆ ಗಂಡಾಂತರ ಎದುರಾದಾಗ ಯುದ್ಧ ಮಾಡದೆ ಸುಮ್ಮನೆ ಕೂರಲಾದೀತೆ ಎಂದು ತಿಮ್ಮಾಪುರ ಹೇಳಿದರು.
ಇದನ್ನೂ ಓದಿ: ಕೆಡಿಪಿ ಸಭೆಯಿಂದ ಅಧಿಕಾರಿಯೊಬ್ಬರನ್ನು ಹೊರ ಹಾಕಿದ ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

