AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ್ಣು, ತರಕಾರಿಯಲ್ಲಿ ಕೀಟನಾಶಕ ಪತ್ತೆ ಮಾಡಲು ಬಯೋಸೆನ್ಸರ್​​ಗಳ ಪಾತ್ರ ಎಷ್ಟು? ಪತಂಜಲಿ ಕುತೂಹಲಕಾರಿ ಸಂಶೋಧನೆ

Patanjali Research says, Biosensors can detect pesticide residue on fruits: ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರಬಹುದಾದ ಕೀಟನಾಶಕಗಳನ್ನು ಪತ್ತೆಹಚ್ಚುವಲ್ಲಿ ಬಯೋಸೆನ್ಸರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಪತಂಜಲಿ ರಿಸರ್ಚ್ ಪತ್ತೆ ಮಾಡಿದೆ. ಬಯೋಸೆನ್ಸರ್‌ಗಳು ತ್ವರಿತ ಮತ್ತು ನಿಖರವಾದ ಫಲಿತಾಂಶಗಳನ್ನು ನೀಡಬಲ್ಲವು. ಅವುಗಳ ಬಳಕೆಯೂ ಸುಲಭವಿರುತ್ತದೆ. ಪತಂಜಲಿಯ ಈ ಸಂಶೋಧನೆಯು ಮೈಕ್ರೋಕೆಮಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಹಣ್ಣು, ತರಕಾರಿಯಲ್ಲಿ ಕೀಟನಾಶಕ ಪತ್ತೆ ಮಾಡಲು ಬಯೋಸೆನ್ಸರ್​​ಗಳ ಪಾತ್ರ ಎಷ್ಟು? ಪತಂಜಲಿ ಕುತೂಹಲಕಾರಿ ಸಂಶೋಧನೆ
ಪತಂಜಲಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 29, 2025 | 3:42 PM

ಕೀಟಗಳು ದಾಳಿ ಮಾಡುವುದನ್ನು ತಡೆಯಲು ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ. ಆದರೆ ಕೆಲವೊಮ್ಮೆ ಕೀಟನಾಶಕಗಳು (Pesticide) ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಉಳಿದುಬಿಡಬಹುದು. ಇದನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಿರುವುದಿಲ್ಲ. ಇಂಥ ಹಣ್ಣು ಮತ್ತು ತರಕಾರಿ ತಿಂದರೆ ಆರೋಗ್ಯ ಹಾಳಾಗಬಹುದು. ಈ ಹಿನ್ನೆಲೆಯಲ್ಲಿ, ಹಣ್ಣು, ತರಕಾರಿಗಳಲ್ಲಿ ಉಳಿದುಕೊಂಡಿರುವ ಕೀಟನಾಶಕವನ್ನು (Pesticide residue) ಪತ್ತೆ ಮಾಡಲು ಪತಂಜಲಿ ರಿಸರ್ಚ್ ಸಂಸ್ಥೆಯ ಹರ್ಬಲ್ ವಿಭಾಗವು ಒಂದು ಸಂಶೋಧನೆ ಮಾಡಿದೆ. ಈ ಸಂಶೋಧನೆಯು ಕೀಟನಾಶಕಗಳ ಉಳಿಕೆಗಳು, ಮೈಕೋಟಾಕ್ಸಿನ್‌ಗಳು ಮತ್ತು ಭಾರದ ಲೋಹಗಳನ್ನು ಪತ್ತೆಹಚ್ಚುವಲ್ಲಿ ಜೈವಿಕ ಸಂವೇದಕಗಳ (ಬಯೋಸೆನ್ಸಾರ್ಸ್) ಪಾತ್ರವನ್ನು ವಿವರಿಸುತ್ತದೆ. ಈ ಸಂಶೋಧನೆಯು ಮೈಕ್ರೋಕೆಮಿಕಲ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಆಹಾರ ಪದಾರ್ಥಗಳಲ್ಲಿನ ಹಾನಿಕಾರಕ ವಸ್ತುಗಳನ್ನು ಪತ್ತೆಹಚ್ಚಲು ಬಯೋಸೆನ್ಸರ್‌ಗಳು ಸಹಾಯ ಮಾಡುತ್ತವೆ ಎಂದು ಸಂಶೋಧನೆ ತೋರಿಸಿದೆ. ಇದು ಪರಿಸರದಲ್ಲಿನ ಹಾನಿಕಾರಕ ವಸ್ತುಗಳನ್ನು ಸಹ ಪತ್ತೆ ಮಾಡುತ್ತದೆ. ಬಯೋಸೆನ್ಸರ್‌ಗಳು ತ್ವರಿತ ಮತ್ತು ನಿಖರವಾದ ಫಲಿತಾಂಶಗಳನ್ನು ನೀಡಬಲ್ಲವು. ಇವುಗಳನ್ನು ಸುಲಭವಾಗಿ ಬಳಸಬಹುದು. ಇದನ್ನು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕೀಟನಾಶಕಗಳ ಉಳಿಕೆಗಳು, ಮೈಕೋಟಾಕ್ಸಿನ್‌ಗಳು ಮತ್ತು ಸೀಸ (ಲೆಡ್) ಮತ್ತು ಪಾದರಸದಂತಹ ಭಾರ ಲೋಹಗಳನ್ನು ಪತ್ತೆಹಚ್ಚಲು ಬಳಸಬಹುದು. ಈ ರೀತಿಯಾಗಿ, ಬಯೋಸೆನ್ಸರ್‌ಗಳನ್ನು ಬಳಸುವುದರಿಂದ, ಆರೋಗ್ಯಕ್ಕಾಗುವ ಹಾನಿಯನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಪತಂಜಲಿಯಿಂದ ನ್ಯಾನೋಟೆಕ್ನಾಲಜಿ ಮತ್ತು ಕೋವಿಡ್ ಬಗ್ಗೆ ಸಂಶೋಧನೆ; ಅಚ್ಚರಿ ಫಲಿತಾಂಶ ಬಹಿರಂಗ

ಇದನ್ನೂ ಓದಿ
Image
ಪತಂಜಲಿ, ಕೋವಿಡ್ ಮತ್ತು ನ್ಯಾನೋತಂತ್ರಜ್ಞಾನ
Image
ಘಮಘಮ ಮಲ್ಲಿಗೆಯಲ್ಲಿದೆ ಅಪೂರ್ವ ಔಷಧ ಗುಣ: ಪತಂಜಲಿ
Image
Sepsisಗೆ ಆಯುರ್ವೇದಲ್ಲಿ ಚಿಕಿತ್ಸೆ: ಪತಂಜಲಿ ರಿಸರ್ಚ್
Image
ಈ ಸಸ್ಯದಲ್ಲಿದೆ ಉರಿಯೂತ ತಗ್ಗಿಸುವ ಗುಣ: ಪತಂಜಲಿ

ಬಯೋಸೆನ್ಸರ್ಸ್ ಎಂದರೇನು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ಜೈವಿಕ ಸಂರಚನೆ ತಿಳಿಯಲು, ಸೂಕ್ಷ್ಮಜೀವಿಗಳನ್ನು ಪತ್ತೆ ಹೆಚ್ಚಲು ಬಳಸಲಾಗುವ ಒಂದು ಸಾಧನವೇ ಬಯೋಸೆನ್ಸರ್. ಇದು ಸಂಜ್ಞಾಪರಿವರ್ತಕಗಳು ಮತ್ತು ಎಲೆಕ್ಟ್ರಾನಿಕ್ ಸಿಸ್ಟಂಗಳಿಂದ ಮಾಡಲ್ಪಟ್ಟಿದೆ. ಇವುಗಳಲ್ಲಿ ಹಲವು ವಿಧಗಳಿವೆ. ಉದಾಹರಣೆಗೆ ಆಂಪರೋಮೆಟ್ರಿಕ್ ಬಯೋಸೆನ್ಸರ್‌ಗಳು, ಆಪ್ಟಿಕಲ್ ಬಯೋಸೆನ್ಸರ್‌ಗಳು, ನ್ಯೂಕ್ಲಿಯಿಕ್ ಎಸಿಡ್ ಬಯೋಸೆನ್ಸರ್, Ag ಮತ್ತು Au ಆಧಾರಿತ ಬಯೋಸೆನ್ಸರ್‌ಗಳು ಮತ್ತು ಎಲೆಕ್ಟ್ರೋಕೆಮಿಕಲ್ ಬಯೋಸೆನ್ಸರ್‌ಗಳು ಇವೆ. ಇವುಗಳಲ್ಲಿ, Ag ಮತ್ತು Au ಆಧಾರಿತ ಬಯೋಸೆನ್ಸರ್​​ಗಳು ಕೀಟನಾಶಕಗಳ ಅವಶೇಷಗಳನ್ನು ಪತ್ತೆಹಚ್ಚಲು ಸಹಾಯ ಮಾಡಬಹುದು. ಅದೇ ಸಮಯದಲ್ಲಿ, ಎಲೆಕ್ಟ್ರೋಕೆಮಿಕಲ್ ಬಯೋಸೆನ್ಸರ್‌ಗಳು ಹಣ್ಣುಗಳು ಮತ್ತು ತರಕಾರಿಗಳಲ್ಲಿನ ವಿಷ ಮತ್ತು ಭಾರ ಲೋಹಗಳನ್ನು ಪತ್ತೆ ಮಾಡಬಲ್ಲವು.

ಅವುಗಳ ಸಹಾಯದಿಂದ, ಕೀಟನಾಶಕಗಳ ಉಳಿಕೆಗಳನ್ನು ಪತ್ತೆ ಮಾಡಬಹುದು. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಅವುಗಳನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾದರೆ, ಉಳಿದ ಕೀಟನಾಶಕಗಳ ಉಳಿಕೆಗಳನ್ನು ತೆಗೆದುಹಾಕಬಹುದು. ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಮಾರುಕಟ್ಟೆಗೆ ತರಬಾರದು ಎಂಬುದು ಸಹ ಮಾಡಬಹುದಾದ ಕೆಲಸ. ಏಕೆಂದರೆ ಅವುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹದಗೆಡಬಹುದು.

ಇದನ್ನೂ ಓದಿ: ಮಲ್ಲಿಗೆ ಹೂವೇ ನಿನ್ನ ಔಷಧದ ಗುಣ ಎಂಥ ಚೆನ್ನ..! ಪತಂಜಲಿ ಸಂಶೋಧನೆಯಲ್ಲಿ ಅಚ್ಚರಿ ಫಲಿತಾಂಶ

ಬಯೋಸೆನ್ಸರ್​​ಗಳಿಂದ ಏನು ಲಾಭ?

ಬಯೋಸೆನ್ಸರ್‌ಗಳು ತ್ವರಿತ ಮತ್ತು ನಿಖರವಾದ ಫಲಿತಾಂಶಗಳನ್ನು ನೀಡಬಲ್ಲವು. ಅವುಗಳ ಬಳಕೆಯೂ ಸುಲಭವಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ