AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya News: ಬೈಕ್​ನಿಂದ ಬಿದ್ದು ಶಿಕ್ಷಕ ಸಾವು; ಹತ್ತಿರವಿದ್ದರೂ ಸಹಾಯಕ್ಕೆ ಬಾರದೇ ಮಾನವೀಯತೆ ಮರೆತ ಜನ

ಬೈಕ್​ನಿಂದ ಅಯಾತಪ್ಪಿ ಬಿದ್ದು ಶಿಕ್ಷಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರೆಗೋಡು ಗ್ರಾಮದ ಬಳಿ ನಡೆದಿದೆ. ರವಿ(45) ಮೃತ ಶಿಕ್ಷಕ.

Mandya News: ಬೈಕ್​ನಿಂದ ಬಿದ್ದು ಶಿಕ್ಷಕ ಸಾವು; ಹತ್ತಿರವಿದ್ದರೂ ಸಹಾಯಕ್ಕೆ ಬಾರದೇ ಮಾನವೀಯತೆ ಮರೆತ ಜನ
ಮೃತ ಶಿಕ್ಷಕ
ಸೂರಜ್ ಪ್ರಸಾದ್ ಎಸ್.ಎನ್
| Edited By: ಕಿರಣ್ ಹನುಮಂತ್​ ಮಾದಾರ್|

Updated on: Jul 08, 2023 | 9:03 AM

Share

ಮಂಡ್ಯ: ಬೈಕ್​ನಿಂದ ಅಯಾತಪ್ಪಿ ಬಿದ್ದು ಶಿಕ್ಷಕ(Teacher) ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರೆಗೋಡು ಗ್ರಾಮದ ಬಳಿ ನಡೆದಿದೆ. ರವಿ(45) ಮೃತ ಶಿಕ್ಷಕ. ಮಂಡ್ಯ(Mandya) ತಾಲೂಕಿನ ಹಲ್ಲೇಗೆರೆ ಗ್ರಾಮದ ಪರಿಣಿತ ‌ವಿದ್ಯಾಸಂಸ್ಥೆಯ ಶಿಕ್ಷಕನಾಗಿದ್ದ ಅವರು ನಿನ್ನೆ(ಜು.7) ಬೆಳಗ್ಗೆ ಶಾಲೆಗೆ ತೆರಳುವ ವೇಳೆ ಕೆರೆಗೋಡು ಗ್ರಾಮದ ಬಳಿ ಅಪಘಾತ ಸಂಭವಿಸಿತ್ತು. ಇನ್ನು ಅಪಘಾತದ ನಂತರ ಕೆಲ ಕಾಲ ಶಿಕ್ಷಕ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಯಾರಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಬೇಡಿಕೊಳ್ಳುತ್ತಿದ್ದ. ಅದನ್ನ ನೋಡಿದರೂ ಯಾರೊಬ್ಬರು ಕೂಡ ಆತನನ್ನ ಆಸ್ಪತ್ರೆಗೆ ಸಾಗಿಸಲು ಮುಂದೆ ಬರದೇ ಅಮಾನವೀಯತೆ ತೋರಿದ್ದಾರೆ.

ಆಸ್ಪತ್ರೆಗೆ ರವಾನೆ ಮಾಡಲು ಹಿಂದೇಟು

ಇನ್ನು ಅಪಘಾತದಲ್ಲಿ ಶಿಕ್ಷಕ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ. ದಯವಿಟ್ಟು ಯಾರಾದರೂ ಆಸ್ಪತ್ರೆಗೆ ಸೇರಿಸಿ ಎಂದು ಅಂಗಲಾಚಿದರೂ ಸ್ಥಳದಲ್ಲಿ ನೆರೆದಿದ್ದ ಜನರು ಮಾತ್ರ ಕರಗಲಿಲ್ಲ. ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕಿದ್ದಾರೆ. ತೀವ್ರವಾಗಿ ಗಾಯಗೊಂಡ ಕಾರಣ, ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ. ಇನ್ನು ಈ ಘಟನೆ ಕೆರೆಗೋಡು ಪೊಲೀಸ್ ಠಾಣೆ ಸಮೀಪವೇ ನಡೆದಿದ್ದರೂ, ಸ್ಥಳಕ್ಕೆ ಪೊಲೀಸರು ಬರುವುದು ಕೂಡ ತಡವಾಗಿತ್ತು. ಆಸ್ಪತ್ರೆಗೆ ಸಾಗಿಸಿದ್ರೆ, ಜೀವ ಉಳಿಯುವ ಸಾಧ್ಯತೆಯಿದ್ದು, ಜನರ ಅಮಾನವೀಯತೆಯಿಂದ ಓರ್ವ ಶಿಕ್ಷಕ ಮೃತನಾಗಿದ್ದಾನೆ.

ಇದನ್ನೂ ಓದಿ:ಕಣ್ಣೆದುರೇ ಅಪಘಾತವಾದರೂ ಹೊಯ್ಸಳ ನಿಲ್ಲಿಸಿದೆ ಹೋದ ಪೊಲೀಸ್ರು, ಒದ್ದಾಡಿ ಪ್ರಾಣ ಬಿಟ್ಟ ಆಟೋ ಚಾಲಕ

ಮುಂದುವರಿದ ಕಾಡಾನೆಗಳ ದಾಂಧಲೆ; ಮನೆಯ ಕಾಂಪೌಂಡ್ ಪುಡಿ ಪುಡಿ

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದ್ದು, ಕಾಡಾನೆ ದಾಳಿಗೆ ಮನೆಯ ಕಾಂಪೌಂಡ್ ಪುಡಿ ಪುಡಿಯಾಗಿದೆ. ಜೊತೆಗೆ ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದಲ್ಲಿ ಕಾಡಾನೆಗಳ ಓಡಾಟದಿಂದ ಐದಾರು ವರ್ಷಗಳಿಂದ ಬೆಳೆದಿರುವ ಅಪಾರ ಪ್ರಮಾಣದ ಕಾಫಿ, ಬಾಳೆ ಬೆಳೆ ನಾಶವಾದ ಘಟನೆ ನಡೆದಿದೆ. ಮರಿಗಳೊಂದಿಗೆ ಗ್ರಾಮದ ಲಕ್ಷ್ಮಮ್ಮ ಎಂಬುವವರ ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬಿಡುಬಿಟ್ಟಿದೆ. ಕಾಡಾನೆಗಳ ಹಿಂಡು ಕಂಡು ಭಯಭೀತರಾಗಿರುವ ಗ್ರಾಮಸ್ಥರು, ಕಾಡಾನೆಗಳ ಹಿಂಡಿನ ದಾಳಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಜನರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಕಾಡಾನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Suraj Prasad SN
Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More