ಅವ್ಯವಹಾರದ ಬಗ್ಗೆ ವರದಿ ಮಾಡಿದಕ್ಕೆ ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ, ಪಾಂಡವಪುರದಲ್ಲಿ ಪ್ರಕರಣ ದಾಖಲು

| Updated By: ಆಯೇಷಾ ಬಾನು

Updated on: Dec 04, 2021 | 1:49 PM

ಪಾಂಡವಪುರ ಪತ್ರಕರ್ತ ರಘುವೀರ್ ಮೇಲೆ ಪಾಂಡವಪುರ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಯಾಗಿರೊ ನಾಗಣ್ಣ ಹಲ್ಲೆಗೆ ಯತ್ನಿಸಿದ್ದಾರೆ. ಪತ್ರಕರ್ತ ರಘುವೀರ್ ನಾಗಣ್ಣನ ಅವ್ಯವಹಾರದ ಬಗ್ಗೆ ವರದಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನಾಗಣ್ಣ, ರಘುವೀರ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಅವ್ಯವಹಾರದ ಬಗ್ಗೆ ವರದಿ ಮಾಡಿದಕ್ಕೆ ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ, ಪಾಂಡವಪುರದಲ್ಲಿ ಪ್ರಕರಣ ದಾಖಲು
ಅವ್ಯವಹಾರದ ಬಗ್ಗೆ ವರದಿ ಮಾಡಿದಕ್ಕೆ ಪತ್ರಕರ್ತನ ಮೇಲೆ ಹಲ್ಲೆಗೆ ಯತ್ನ, ಪಾಂಡವಪುರದಲ್ಲಿ ಪ್ರಕರಣ ದಾಖಲು
Follow us on

ಮಂಡ್ಯ: ಸ್ಥಳೀಯ ಪತ್ರಕರ್ತನ ಜೊತೆಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿ ಪತ್ರಕರ್ತನ ಮೇಲೆ ಹಲ್ಲೆ ಮಾಡಲು ಮುಂದಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಕಚೇರಿ ಬಳಿ ನಡೆದಿದೆ. ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡ್ತಿರೊ ನಾಗಣ್ಣ ಎಂಬುವವರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಪಾಂಡವಪುರ ಟೌನ್ ಮಿನಿ ವಿಧಾನಸೌಧದಲ್ಲಿ ಮಧ್ಯವರ್ತಿ ಕೆಲಸ ಮಾಡುತ್ತಿದ್ದ ದಲ್ಲಾಳಿ ನಾಗಣ್ಣ ಎಂಬುವರು ಪತ್ರಕರ್ತ ರಘುವೀರ್ ಜೊತೆ ಗಲಾಟೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಪಾಂಡವಪುರ ತಾಲೂಕು ಕಚೇರಿಯಲ್ಲಿ ನಾಗಣ್ಣ ಎಂಬುವರು ಮಧ್ಯವರ್ತಿ ಅವ್ಯವಹಾರದ ಬಗ್ಗೆ ಪತ್ರಕರ್ತ ರಘುವೀರ್ ವರದಿ ಮಾಡಿದ್ದರು. ಈ ಹಿನ್ನೆಲೆ ಅವರ ಮೇಲೆ ಹಲ್ಲೆ ಮಾಡಲು ನಾಗಣ್ಣ ಮುಂದಾಗಿದ್ದಾರೆ. ಪತ್ರಕರ್ತರ ಮೇಲೆ ಹಲ್ಲೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 504, 506 ಅಡಿಯಲ್ಲಿ ಕೇಸು ದಾಖಲಾಗಿದೆ.

ಪಾಂಡವಪುರ ಟೌನ್ ಮಿನಿವಿಧಾನಸೌಧ ಆವರಣದಲ್ಲಿ ವ್ಯಕ್ತಿಯೊಬ್ಬ ಮನಬಂದಂತೆ ಅವಾಚ್ಯ ಶಬ್ದಗಳಿಂದ ಕೂಗಾಡುತ್ತಾ ಗಲಾಟೆ ಮಾಡುತ್ತಿದ್ದ ಘಟನೆಯನ್ನು ಸುದ್ದಿ ಮಾಡಲು ಸೆರೆ ಹಿಡಿಯುತ್ತಿದ್ದ ಪಾಂಡವಪುರ ಪತ್ರಕರ್ತ ರಘುವೀರ್ ಅವರಿಗೆ ಗಲಾಟೆ ನಡೆಸಿ, ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿ, ಜತೆಗೆ ಅಶ್ಲೀಲ ಪದಗಳನ್ನು ಬಳಸಿ ಬೈದು, ಅಸಭ್ಯವಾಗಿ ವರ್ತಿಸಲಾಗಿದೆ.

ಪತ್ರಕರ್ತನ ಮೇಲೆ ಹಲ್ಲೆ ಮಾಡಲು ಮುಂದಾದ ನಾಗಣ್ಣ

ಪಾಂಡವಪುರ ತಾಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷದಿಂದ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿರುವ ಪಾಂಡವಪುರ ತಾಲೂಕು ಕೆನ್ನಾಳು ಗ್ರಾಮದ ನಾಗಣ್ಣ ಎಂಬುವರ ವಿರುದ್ಧ ಕಾನೂನು ರೀತಿ ಕ್ರಮ‌ ಜರುಗಿಸಬೇಕೆಂದು ಕೆಆರ್​ಎಸ್ ಪಕ್ಷದ ಕಾರ್ಯಕರ್ತರು ಮಿನಿವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಕೆಆರ್​ಎಸ್ ಪಕ್ಷದವರು ಪ್ರತಿಭಟನೆ ಮಾಡಿದ್ದನ್ನು ಸುದ್ದಿ ಮಾಡಿದ ಪತ್ರಕರ್ತ ರಘುವೀರ್ ಅವರನ್ನು ಗುರಿಯಾಗಿಟ್ಟುಕೊಂಡ ನಾಗಣ್ಣ ಎಂಬುವರು ಮಿನಿವಿಧಾನಸೌಧದಲ್ಲಿ ಪತ್ರಕರ್ತ ರಘುವೀರ್ ಇದ್ದಂತ ಸಂದರ್ಭದಲ್ಲಿ ಮನಬಂದಂತೆ ಬೈಯುತ್ತಾ, ಅಸಭ್ಯವಾಗಿ ವರ್ತಿಸಿ, ಕೊಲೆ ಬೆದರಿಕೆ ಹೊಡ್ಡಿದ್ದಾನೆ. ಮಧ್ಯವರ್ತಿ ನಾಗಣ್ಣ ಎಂಬುವರು ಅಸಭ್ಯವಾಗಿ ವರ್ತಿಸಿರುವ ಘಟನೆಯ ವಿಡಿಯೋ ಲಭ್ಯವಾಗಿದೆ. ಗಲಾಟೆ ಮಾಡುತ್ತಿದ್ದನ್ನು ಸ್ವತಃ ಪತ್ರಕರ್ತ ರಘುವೀರ್ ಅವರೇ ಮೊಬೈಲ್ ಮೂಲಕ‌ ಚಿತ್ರಿಸುತ್ತಿದ್ದಾಗ ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿ ಜೋರಾಗಿ ಕಿರುಚಾಡಿದ್ದಾರೆ. ಘಟನೆ ಬಗ್ಗೆ ಪತ್ರಕರ್ತ ರಘುವೀರ್ ಅವರು ಪಾಂಡವಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಪಾಂಡವಪುರ ಪೊಲೀಸರು ಪತ್ರಕರ್ತ ರಘುವೀರ್ ಅವರೊಂದಿಗೆ ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿ ಮಹಜರ್ ಮಾಡಿಕೊಂಡಿದ್ದಾರೆ.

ನಾಗಣ್ಣನ ಬಗ್ಗೆ ಅಧಿಕಾರಿಗಳು ಮೌನ ವಹಿಸಿರುವುದು ಯಾವ ಕಾರಣಕ್ಕೆ. ಇಂತಹ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಿ, ಮಧ್ಯವರ್ತಿ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Real Estate Investment: ನಿಮಗೆ ಉತ್ತಮ ಹೂಡಿಕೆಯ ಲಾಭ ಸಿಗಬೇಕೇ? ಆಸ್ತಿ ಮಾರ್ಕೆಟ್‌ನಲ್ಲಿ ಕೇವಲ 5000 ರೂಪಾಯಿ ಹೂಡಿ

ನೂರಕ್ಕೆ ನೂರು ಜೆಡಿಎಸ್ ಪಕ್ಷ ಸಹಕಾರ ನೀಡುತ್ತೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ