ನೂರಕ್ಕೆ ನೂರು ಜೆಡಿಎಸ್ ಪಕ್ಷ ಸಹಕಾರ ನೀಡುತ್ತೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ
ಪ್ರತಿಪಕ್ಷ ನಾಯಕ ಎನ್ನುವುದನ್ನ ಮರೆತು ಹೇಳಿಕೆ ನೀಡುತ್ತಿದ್ದಾರೆ. ಮೈಸೂರನಲ್ಲಿಯೇ ಸೋತು ಹೀಗೆ ಮಾತಾಡುವುದು ಸರಿಯಲ್ಲ. ಇವರ ಸೊಕ್ಕಿನ ದಿಮಾಕಿನ ಮಾತುಗಳಿಗೆ ಚುನಾವಣೆ ಉತ್ತರ ನೀಡಲಿದೆ ಅಂತ ಅಭಿಪ್ರಾಯಪಟ್ಟರು.
ದಾವಣಗೆರೆ: ಈಗಾಗಲೇ ನಾನು ಬಹಿರಂಗವಾಗಿಯೇ ಹೇಳಿದ್ದೇನೆ. ಕುಮಾರಸ್ವಾಮಿ ಅವರೊಂದಿಗೆ ಮಾತಾಡಿರುವೆ. ಎಲ್ಲಿ ಜೆಡಿಎಸ್ ಅಭ್ಯರ್ಥಿಗಳು ಇಲ್ಲಾ ಅಲ್ಲಿ ಬಿಜೆಪಿಗೆ ಸಹಕಾರ ನೀಡಬೇಕು ಎಂದಿದ್ದೇನೆ. ನೂರಕ್ಕೆ ನೂರು ಸಹಕಾರ ನೀಡುತ್ತಾರೆ ಅಂತ ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurapppa) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಜೆಡಿಎಸ್ -ಬಿಜೆಪಿ ಬಿ ಟೀಮ್ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್ವೈ, ಪ್ರತಿಪಕ್ಷ ನಾಯಕ ಎನ್ನುವುದನ್ನ ಮರೆತು ಹೇಳಿಕೆ ನೀಡುತ್ತಿದ್ದಾರೆ. ಮೈಸೂರನಲ್ಲಿಯೇ ಸೋತು ಹೀಗೆ ಮಾತಾಡುವುದು ಸರಿಯಲ್ಲ. ಇವರ ಸೊಕ್ಕಿನ ದಿಮಾಕಿನ ಮಾತುಗಳಿಗೆ ಚುನಾವಣೆ ಉತ್ತರ ನೀಡಲಿದೆ ಅಂತ ಅಭಿಪ್ರಾಯಪಟ್ಟರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುಳಿವು ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಎಸ್ ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಬೊಮ್ಮಾಯಿ ಉತ್ತರಿಸಲಿದ್ದಾರೆ. ಇಷ್ಟರಲ್ಲೇ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ನನಗೂ ಇದೆ ಅಂತ ದಾವಣಗೆರೆ ತಾಲೂಕಿನ ಆನಗೋಡದಲ್ಲಿ ಬಿಎಸ್ವೈ ಹೇಳಿಕೆ ನೀಡಿದ್ದಾರೆ.
ಮೋದಿಯನ್ನು ಹೆಚ್ಡಿ ದೇವೇಗೌಡರು ಆತ್ಮೀಯವಾಗಿ ಭೇಟಿ ಆಗಿದ್ದಾರೆ. ಪರಿಷತ್ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್, ಬಿಜೆಪಿ ಹೊಂದಾಣಿಕೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಮಾಡುತ್ತೇವೆ ಅಂತ ಈ ಹಿಂದೆ ಯಡಿಯೂರಪ್ಪ ಹೇಳಿದ್ದರು. ಅದರಂತೆ ಇಂದು ಜಿಲ್ಲೆಯಲ್ಲಿ ನೂರಕ್ಕೆ ನೂರು ಜೆಡಿಎಸ್ ಪಕ್ಷ ಸಹಕಾರ ನೀಡುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ
ನಾಪತ್ತೆಯಾಗಿದ್ದ ದಕ್ಷಿಣ ಆಫ್ರಿಕಾ ಪ್ರಯಾಣಿಕರನ್ನು ಪತ್ತೆ ಮಾಡಿದ ಬಿಬಿಎಂಪಿ
ಒಮಿಕ್ರಾನ್ ಸೋಂಕಿತ ವಿದೇಶಕ್ಕೆ ಎಸ್ಕೇಪ್! ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದ ಬಿಬಿಎಂಪಿ