ಮಂಡ್ಯ: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪವಾಗಿದೆ. ಪ್ರಧಾನಿಗೆ ಮುಕ್ತವಾಗಿ ಓಡಾಡಲು ಅವಕಾಶ ನೀಡಿಲ್ಲ. ಅವಕಾಶ ನೀಡದಿರುವುದು ಖಂಡನೀಯ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಹೇಳಿಕೆ ನೀಡಿದ್ದಾರೆ. ಪ್ರಧಾನಿಗೆ ಗೌರವ ಕೊಡುವುದು ಎಲ್ಲ ಸರ್ಕಾರಗಳ ಕರ್ತವ್ಯ. ಭದ್ರತೆ ಒದಗಿಸುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿದೆ. ಪಂಜಾಬ್ ಸರ್ಕಾರವನ್ನ ವಜಾಗೊಳಿಸಬೇಕು. ಉನ್ನತ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಕೂಡ ಮಾಡಿರುವ ಬಸವರಾಜ ಬೊ್ಮ್ಮಾಯಿ, ಪಂಜಾಬ್ ಚರಣ್ಜಿತ್ ಸಿಂಗ್ ಚನ್ನಿ ಹೇಳಿಕೆಯನ್ನು ಕೂಡ ಬಲವಾಗಿ ಖಂಡಿಸಿದ್ದಾರೆ. ಈ ಘಟನೆ ಖಂಡನೀಯವಾಗಿದೆ. ಜೊತೆಗೆ ಅದನ್ನು ಸಹಜವಾಗಿ ನಡೆದಿದೆ ಎಂದು ಹೇಳಿರುವ ಚರಣ್ಜಿತ್ ಸಿಂಗ್ ಚನ್ನಿ ಹೇಳಿಕೆಗೆ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
We condemn the breach of security and the blockage of our PM @Narendramodi Ji’s road cavalcade in Punjab.
But what’s equally condemnable is the irresponsible statement by the CM @CHARANJITCHANNI who has called it a natural happening. If this is your idea of law and order,
1/2— Basavaraj S Bommai (@BSBommai) January 5, 2022
ಮಂಡ್ಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿ ಮಾತನಾಡಿದ್ದಾರೆ. ಸಚಿವರಾದ ಆರಗ ಜ್ಞಾನೇಂದ್ರ, ಆರ್. ಅಶೋಕ್, ಕೆ.ಸಿ. ನಾರಾಯಣಗೌಡ, ಸಂಸದೆ ಸುಮಲತಾ , ಶಾಸಕರಾದ ಸುರೇಶ್ ಗೌಡ, ಎಂ. ಶ್ರೀನಿವಾಸ್ ಭಾಗಿ ಆಗಿದ್ದಾರೆ. ಅಮೃತ ಕ್ರೀಡಾ ಯೋಜನೆಯಡಿ 6 ಕ್ರೀಡಾಪಟುಗಳಿಗೆ 5 ಲಕ್ಷ ಚೆಕ್ ವಿತರಣೆ ಮಾಡಲಾಗಿದೆ. ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಅಮೃತ ಸಮುದಾಯ ಅಭಿವೃದ್ಧಿ ಯೋಜನೆಗೆ ಸಿಎಂ ಚಾಲನೆ ನೀಡಿದ್ದಾರೆ.
ಸಿಎಂಗೆ ಸಚಿವರು ನೀಡಿದ್ದ ಬೆಳ್ಳಿ ಗದೆ ಆದಿಚುಂಚನಗಿರಿ ಮಠಕ್ಕೆ ನೀಡಿದ್ದಾರೆ. ಆದಿಚುಂಚನಗಿರಿ ಮಠದ ಆಂಜನೇಯನ ದೇವಸ್ಥಾನಕ್ಕೆ ಕೊಡುಗೆಯಾಗಿ ಬೆಳ್ಳಿ ಗದೆಯನ್ನು ನೀಡಿದ್ದಾರೆ. ಯುವ ಜನೋತ್ಸವ ಸಮಾರೋಪ ಸಮಾರಂಭದಲ್ಲಿ ಕೊಡುಗೆ ನೀಡಿದ್ದಾರೆ. ಕ್ರೀಡಾ ಸಚಿವ ನಾರಾಯಣಗೌಡ ಸಿಎಂಗೆ ಬೆಳ್ಳೆ ಗದೆ ನೀಡಿದ್ದರು. ಸಚಿವರು ನೀಡಿದ್ದ ಗದೆ ಆಂಜನೇಯ ದೇವಸ್ಥಾನಕ್ಕೆ ಕೊಡುಗೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಭದ್ರತಾ ಲೋಪದಿಂದ ಸಿಟ್ಟಾದ ಪ್ರಧಾನಿ ಮೋದಿ; ನಾನು ಜೀವಂತವಾಗಿಯಾದರೂ ಬಂದೆನಲ್ಲ ಎಂದ ಪ್ರಧಾನಮಂತ್ರಿ
ಇದನ್ನೂ ಓದಿ: ಕಾಂಗ್ರೆಸ್ ಮೋದಿಯನ್ನು ದ್ವೇಷಿಸುತ್ತದೆ ಎಂದು ಗೊತ್ತು, ಆದರೆ ಇಂದು ಪ್ರಧಾನಿಗೆ ಹಾನಿ ಮಾಡಲು ಯತ್ನಿಸಿದರು: ಸ್ಮೃತಿ ಇರಾನಿ
Published On - 6:00 pm, Wed, 5 January 22