AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಮೋದಿಯನ್ನು ದ್ವೇಷಿಸುತ್ತದೆ ಎಂದು ಗೊತ್ತು, ಆದರೆ ಇಂದು ಪ್ರಧಾನಿಗೆ ಹಾನಿ ಮಾಡಲು ಯತ್ನಿಸಿದರು: ಸ್ಮೃತಿ ಇರಾನಿ

ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ದ್ವೇಷಿಸುತ್ತದೆ ಎಂದು ನಮಗೆ ತಿಳಿದಿದೆ. ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಪ್ರಧಾನಿಗೆ ಭದ್ರತೆ ನೀಡಲು ತಾನು ಅಸಮರ್ಥ ಎಂದು ಡಿಸಿಪಿ ಹೇಳಿರುವುದಾಗಿ ಸಚಿವೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಮೋದಿಯನ್ನು ದ್ವೇಷಿಸುತ್ತದೆ ಎಂದು ಗೊತ್ತು, ಆದರೆ ಇಂದು ಪ್ರಧಾನಿಗೆ ಹಾನಿ ಮಾಡಲು ಯತ್ನಿಸಿದರು: ಸ್ಮೃತಿ ಇರಾನಿ
ಸ್ಮೃತಿ ಇರಾನಿ
TV9 Web
| Edited By: |

Updated on:Jan 05, 2022 | 5:46 PM

Share

ದೆಹಲಿ: ನಮ್ಮ ದೇಶದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ಆಗಿಲ್ಲ. ಒಂದು ರಾಜ್ಯ ಸರ್ಕಾರವು ಉದ್ದೇಶಪೂರ್ವಕವಾಗಿ ಪ್ರಧಾನಿಯವರಿಗೆ ತೊಂದರೆಯೊಡ್ಡುವ ಸನ್ನಿವೇಶವನ್ನು ನಿರ್ಮಿಸಿದೆ. ಕಾಂಗ್ರೆಸ್ (Congress) ನರೇಂದ್ರ ಮೋದಿಯನ್ನು(Narendra Modi) ದ್ವೇಷಿಸುತ್ತದೆ ಎಂದು ನಮಗೆ ತಿಳಿದಿದೆ, ಆದರೆ ಇಂದು ಅವರು ಭಾರತದ ಪ್ರಧಾನಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ (Smriti Irani) ಹೇಳಿದ್ದಾರೆ. ರಾಜ್ಯದಲ್ಲಿ ಭದ್ರತಾ ವ್ಯವಸ್ಥೆಗಳ ಮುಂದಾಳತ್ವ ವಹಿಸುವವರು ಪ್ರಧಾನಿ ಭದ್ರತೆಗೆ ವ್ಯವಸ್ಥೆ ಮಾಡಲು ಏಕೆ ಪ್ರತಿಕ್ರಿಯಿಸಲಿಲ್ಲ? ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರ ಫಿರೋಜ್‌ಪುರ (Ferozepur) ಭೇಟಿಯ ಸಂದರ್ಭದಲ್ಲಿ ಪಂಜಾಬ್ ಪೊಲೀಸರಿಂದ ಭದ್ರತಾ ಲೋಪಗಳ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರವರು. ಕಾಂಗ್ರೆಸ್ ಪ್ರಧಾನಿ ಮೋದಿಯನ್ನು ದ್ವೇಷಿಸುತ್ತದೆ ಎಂದು ನಮಗೆ ತಿಳಿದಿದೆ. ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಪ್ರಧಾನಿಗೆ ಭದ್ರತೆ ನೀಡಲು ತಾನು ಅಸಮರ್ಥ ಎಂದು ಡಿಸಿಪಿ ಹೇಳಿರುವುದಾಗಿ ಸಚಿವೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಡಿಜಿಪಿ ಅವರು ಪಿಎಂಒ ಮತ್ತು ಪಿಎಂ ಭದ್ರತಾ ವಿವರಗಳನ್ನು ಒದಗಿಸಲು ಅಸಮರ್ಥರಾಗಿದ್ದಾರೆಂದು ಹೇಳುತ್ತಾರೆ. ಕಾಂಗ್ರೆಸ್ ಉತ್ತರಿಸಬೇಕು ಪ್ರಧಾನಿ ಮೋದಿ ಅವರ ಭದ್ರತೆಯಲ್ಲಿ ಲೋಪ ಕಂಡುಬಂದಾಗ, ಕಾಂಗ್ರೆಸ್ ನಾಯಕರು ಸಂತೋಷದಿಂದ ಅವರ ಜೋಶ್ ಹೇಗಿದೆ ಎಂದು ಕೇಳಿದರು. ಎಂದಿನಂತೆ ಮಹಾನುಭಾವರಾದ ಪ್ರಧಾನಿ ಮೋದಿ ಅವರು ಹಿಂತಿರುಗುವಾಗ ‘ಜಿಂದಾ ಲೌಟ್ ರಹಾ ಹೂಂ(ಜೀವಂತ ಮರಳುತ್ತಿದ್ದೇನೆ) ಎಂದು ಹೇಳಿದ್ದರು.

ಪ್ರಧಾನಿ ಕೈಗೊಳ್ಳಲಿರುವ ಮಾರ್ಗದಲ್ಲಿ ಭದ್ರತೆ ಇದೆ ಎಂದು ಡಿಜಿಪಿ ಪೊಲೀಸರು ಯಾಕೆ ಹೇಳಿದರು ಎಂದು ಬಿಜೆಪಿ ಕಾರ್ಯಕರ್ತರು ಮತ್ತು ದೇಶದ ಜನರು ಪಂಜಾಬ್‌ನ ಕಾಂಗ್ರೆಸ್ ಸರ್ಕಾರಕ್ಕೆ ಕೇಳಬೇಕಿದೆ. ಇದು ಯೋಜಿತ, ಲೆಕ್ಕಾಚಾರದಿಂದ ಕೂಡಿದ, ರಾಜಕೀಯ ಪ್ರೇರಿತ ಭದ್ರತಾ ಲೋಪವಾಗಿದೆ.

ಪಂಜಾಬ್‌ನಲ್ಲಿನ ಆಡಳಿತದ ಸ್ಥಿತಿ ಹೀಗಿದೆ, ಆಡಳಿತಾತ್ಮಕವಾಗಿ ರಾಜ್ಯ ಮುಖ್ಯಸ್ಥರು ಅನುಸರಿಸಬೇಕಾದ ಪ್ರೋಟೋಕಾಲ್ ಆಗಿರುವ ಭದ್ರತಾ ವಿವರ ಮತ್ತು ರನ್ ಅನ್ನು ಕಿತ್ತುಹಾಕಲಾಯಿತು ಇದರಿಂದ ಪಿಎಂ ಮೋದಿಗೆ ಹಾನಿಯಾಗಬಹುದು. ಫ್ಲೈಓವರ್ ಮೇಲೆ ನಿಂತ ವ್ಯಕ್ತಿಗಳಿಗೆ ಪಂಜಾಬ್ ಸರ್ಕಾರದಲ್ಲಿ ಯಾರು ಪ್ರಧಾನಿ ಮಾರ್ಗದ ಬಗ್ಗೆ ಮಾಹಿತಿ ನೀಡಿದರು? ಈಗ ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೊ ಸಾಕ್ಷ್ಯವು ಅಂತಹ ಪ್ರಶ್ನೆಗಳನ್ನು ಮುಂದಕ್ಕೆ ತರುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

ಭದ್ರತಾ ಲೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರು ಪಂಜಾಬ್‌ನ  ಫಿರೋಜ್‌ಪುರದಲ್ಲಿ ರ್ಯಾಲಿ ರದ್ದು ಮಾಡಿದ್ದರು. “ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿದ್ದು. ಪ್ರಧಾನಿಯವರು 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. . ಎರಡು ವರ್ಷಗಳ ಅಂತರದ ನಂತರ ಪ್ರಧಾನಿಯವರ ಪಂಜಾಬ್ ಭೇಟಿ ನಿಗದಿಯಾಗಿದ್ದು, ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ ಇದು ಮೊದಲನೆಯ ಭೇಟಿಯಾಗಿತ್ತು. ರ್ಯಾಲಿಗೆ ಗಂಟೆಗಳ ಮೊದಲು, ಫಿರೋಜ್‌ಪುರದ ಸ್ಥಳಕ್ಕೆ ಹೋಗುವ ಮೂರು ಮಾರ್ಗಗಳನ್ನು ಕಿಸಾನ್ ಮಜ್ದೂರ್ ಸಂಗ್ರಹ್ ಸಮಿತಿ (KMSC) ಸದಸ್ಯರು ನಿರ್ಬಂಧಿಸಿದರು. ಆದರೆ, ರೈತರು ತಮ್ಮ ಬೇಡಿಕೆಗಳ ಕುರಿತು ಜನವರಿ 15 ರಂದು ಪ್ರಧಾನಿಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.

ಇದನ್ನೂ ಓದಿ:  ಪಂಜಾಬ್​ನಲ್ಲಿ ಭದ್ರತಾ ಲೋಪದಿಂದ ಸಿಟ್ಟಾದ ಪ್ರಧಾನಿ ಮೋದಿ; ನಾನು ಜೀವಂತವಾಗಿಯಾದರೂ ಬಂದೆನಲ್ಲ ಎಂದ ಪ್ರಧಾನಮಂತ್ರಿ

ಇದನ್ನೂ ಓದಿ:  ಭದ್ರತಾ ಲೋಪ: ಪ್ರಧಾನಿ ಮೋದಿಯವರ ಪಂಜಾಬ್ ರ್ಯಾಲಿ ದಿಢೀರ್ ರದ್ದು

Published On - 5:23 pm, Wed, 5 January 22

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು