ಮಂಡ್ಯ ಎಸ್ಪಿ ಸೇರಿ ಕೆಲ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್! ಎಎಸ್ಪಿಗೆ ಆಡಳಿತದ ಹೊಣೆ
ಹಿರಿಯ ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಸಿಬ್ಬಂದಿಯಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ತಗುಲಿರುವ ಹಿನ್ನೆಲೆ, ಮೈಸೂರು ಜಿಲ್ಲಾ ಎಎಸ್ಪಿಗೆ ಮಂಡ್ಯ ಆಡಳಿತದ ಹೊಣೆ ನೀಡಲಾಗಿದೆ.
ಮಂಡ್ಯ: ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ (Coronavirus) ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಸ್ವತಃ ಹೋಂ ಐಸೋಲೇಷನ್ನಲ್ಲಿದ್ದಾರೆ. ಎಸ್ಪಿ ಎನ್ ಯತೀಶ್, ಎಎಸ್ಪಿ ಧನಂಜಯ್, ಮಂಡ್ಯ ಡಿವೈಎಸ್ಪಿ ಮಂಜುನಾಥ್, ನಾಗಮಂಗಲ, ಮಳವಳ್ಳಿ ಡಿವೈಎಸ್ಪಿ, ನಾಗಮಂಗಲ ಗ್ರಾಮಾಂತರ ಸಿಪಿಐ, ಬೆಳ್ಳೂರು ಪಿಎಸ್ ಸೇರಿದಂತೆ ಹಲವರು ಹೋಂ ಐಸೋಲೇಷನ್ ಆಗಿದ್ದಾರೆ.
ಕೆಲವರು ಪರೀಕ್ಷೆ ಮಾಡಿಸಿ ಹೋಂ ಐಸೋಲೇಷನ್ನಲ್ಲಿದ್ದರೆ, ಇನ್ನು ಕೆಲವರು ಸೋಂಕಿನ ಲಕ್ಷಣ ಇದ್ದರೂ ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇತ್ತೀಚೆಗೆ ಮಂಡ್ಯ ಡಿಎಆರ್ ಆವರಣದಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆದಿತ್ತು. ಕ್ರೀಡಾಕೂಟದ ಬಳಿಕ ಯುವ ಜನೋತ್ಸವದ ಭದ್ರತೆಯಲ್ಲಿ ಪೊಲೀಸರು ಇದ್ದರು. ಭದ್ರತೆಯಲ್ಲಿದ್ದ ಪೊಲೀಸ್ ಅಧಿಕಾರಿಗೆ ಇದೀಗ ಸೋಂಕು ತಗುಲಿರುವುದು ದೃಢಪಟ್ಟಿದೆ.
ಹಿರಿಯ ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಸಿಬ್ಬಂದಿಯಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ ತಗುಲಿರುವ ಹಿನ್ನೆಲೆ, ಮೈಸೂರು ಜಿಲ್ಲಾ ಎಎಸ್ಪಿಗೆ ಮಂಡ್ಯ ಆಡಳಿತದ ಹೊಣೆ ನೀಡಲಾಗಿದೆ ಅಂತ ಪೊಲೀಸ್ ಇಲಾಖೆ ಉನ್ನತ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ.
15 ಭಕ್ತರಿಗೆ ಕೊರೊನಾ ಸೋಂಕು ಓಂ ಶಕ್ತಿಗೆ ಹೋಗಿ ಬಂದಿದ್ದ 15 ಭಕ್ತರಿಗೆ ಕೊರೊನಾ ಸೋಂಕು ತಗುಲಿದೆ. ಮಂಡ್ಯ ತಾಲೂಕಿನ ಹೊನ್ನಾಯಕನಹಳ್ಳಿ 15 ಜನರಿಗೆ ಸೋಂಕು ದೃಢಪಟ್ಟಿದೆ. ಮಂಡ್ಯದ ಕಲ್ಯಾಣ ಮಂಟಪದಲ್ಲಿ ಟೆಸ್ಟ್ ವೇಳೆ ಸೋಂಕಿರುವುದು ತಿಳಿದುಬಂದಿದೆ.
ಮಾಸ್ಕ್ ಹಾಕದಿದ್ರೆ ಬಿಳುತ್ತೆ ದಂಡ ಸಕ್ಕರೆ ನಾಡು ಮಂಡ್ಯದಲ್ಲಿ ಮಾಸ್ಕ್ ಹಾಕದಿರುವವರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ಹೊಸಹಳ್ಳಿ ಸರ್ಕಲ್ ಬಳಿ ಪೋಲಿಸರು ದಂಡ ಹಾಕುತ್ತಿದ್ದಾರೆ.
ಇದನ್ನೂ ಓದಿ
ನೀವು ಬೇರೆ ಬೇರೆ ಭಾಷೆಯಲ್ಲಿ ಮಾತನಾಡಿದರೂ ಶ್ವಾನಗಳು ಅರ್ಥ ಮಾಡಿಕೊಳ್ಳುತ್ತವೆ; ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ
ವಿದ್ಯಾಗಮ ಜಾರಿಗೆ ಮುಂದಾದ ಕರ್ನಾಟಕ ಸರ್ಕಾರ; ಶಿಕ್ಷಣ ಅಧಿಕಾರಿಗಳಿಗೆ ಸೂಚನೆ
Published On - 1:28 pm, Sat, 8 January 22