Mandya News: ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟ: ಡೆಪ್ಯುಟಿ ಮ್ಯಾನೇಜರ್ ಸಾವು
ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟಗೊಂಡು ಡೆಪ್ಯುಟಿ ಮ್ಯಾನೇಜರ್ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ NSL ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ.
ಮಂಡ್ಯ, ಜುಲೈ 19: ಸಕ್ಕರೆ ಕಾರ್ಖಾನೆಯಲ್ಲಿ ಎಸಿ ಸ್ಫೋಟ (AC blast) ಗೊಂಡು ಡೆಪ್ಯುಟಿ ಮ್ಯಾನೇಜರ್ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಲ್ಲಿರುವ NSL ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಶ್ರೀಧರ್(48) ಮೃತ ಡೆಪ್ಯುಟಿ ಮ್ಯಾನೇಜರ್. ವಿದ್ಯುತ್ ವಿಭಾಗದ ಕಂಟ್ರೋಲ್ ರೂಂನಲ್ಲಿ ಕೆಲಸ ಮಾಡುವಾಗ ದುರಂತ ಸಂಭವಿಸಿದೆ.
ಸ್ಫೋಟದ ಬಳಿಕ ರಾಸಾಯನಿಕ ಸೋರಿಕೆಯಿಂದ ಶ್ರೀಧರ್ ಅಸ್ವಸ್ಥಗೊಂಡಿದ್ದಾರೆ. ಇತರೆ ಸಿಬ್ಬಂದಿಗಳು ಗಮನಿಸಿ ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತ ಪಟ್ಟಿದ್ದಾರೆ. ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಸಾವು: ಅನುಮಾನ ವ್ಯಕ್ತಪಡಿಸಿ ದೂರು ನೀಡಿದ ಪೋಷಕರು
ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ನಾಪತ್ತೆ
ಶಿವಮೊಗ್ಗ: ಎನ್ಪಿಎಸ್ ನೌಕರರ ಸಂಘದ ನಾಪತ್ತೆಯಾಗಿ ಆಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಘಟಕದ ಪ್ರಭಾಕರ್(38) ನಾಪತ್ತೆಯಾದ ಅಧ್ಯಕ್ಷ. ಬದುಕಿಗೆ ವಿದಾಯ ಹೇಳುತ್ತಿರುವುದಾಗಿ ಎನ್ಪಿಎಸ್ ಹೋರಾಟ ಸಮಿತಿ ಗ್ರೂಪ್ನಲ್ಲಿ ಪ್ರಭಾಕರ್ ಸಂದೇಶ ರವಾನಿಸಿ ನಾಪತ್ತೆ ಆಗಿದ್ದಾರೆ.
ತನಗೆ ಆಗಿರುವ ನೋವಿನಿಂದ ಬೇಸತ್ತಿದ್ದೇನೆಂದು ಸಂದೇಶ ಕಳುಹಿಸಿದ್ದು, ಸಂದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಮಾಜಿ ಸಚಿವ ಬಿ.ಸಿ.ನಾಗೇಶ್, ಪಿಎ ಆರ್.ರವಿ ಮತ್ತಿರರ ಹೆಸರು ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: Kolar News: ಕೌಟುಂಬಿಕ ಕಲಹ, ಪತ್ನಿಯನ್ನು ಕೊಂದು ಎಸ್ಕೇಪ್ ಆದ ಪತಿ
ನನ್ನ ನಿರ್ಧಾರಕ್ಕೆ ಇವರೆಲ್ಲರೂ ಕಾರಣ ಎಂದು ಪ್ರಭಾಕರ್ ಬರೆದಿದ್ದು, ಸಂದೇಶ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಪ್ರಭಾಕರ್ಗಾಗಿ ಕುಟುಂಬ ಸದಸ್ಯರು, ಎನ್ಪಿಎಸ್ ನೌಕರರಿಂದ ಹುಡುಕಾಟ ಮಾಡಲಾಗುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:59 pm, Wed, 19 July 23