ತಮ್ಮ ಪಕ್ಷಕ್ಕೆ ಮತ ಹಾಕಬೇಡಿ ಎಂದ ಜೆಡಿಎಸ್ ಎಂಎಲ್ಸಿ ಮರಿತಿಬ್ಬೇಗೌಡ! ಮಂಡ್ಯದಲ್ಲಿ ದಳಪತಿಗಳ ಮತ್ತೊಂದು ವಿಕೆಟ್ ಪತನ ಸಾಧ್ಯತೆ
ಜೆಡಿಎಸ್ನಲ್ಲಿ ದುಡ್ಡು ಇರುವವರಿಗೆ ಮಾತ್ರ ಬಿಫಾರಂ ನೀಡುತ್ತಾರೆ. ನಮ್ಮ ಪಕ್ಷದ ನಾಯಕರ ನಡೆ ಬಗ್ಗೆ ನನಗೆ ತೀವ್ರ ಬೇಸರವಾಗಿದೆ. ನಾಲ್ಕೈದು ವರ್ಷಗಳಿಂದ ನೋವು ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷ, ಕಾರ್ಯಕರ್ತರ ಬಗ್ಗೆ ನಾಯಕರಿಗೆ ಕಿಂಚಿತ್ತೂ ಕಳಕಳಿ ಇಲ್ಲ.
ಮಂಡ್ಯ: ವಿಧಾನಸಭಾ ಚುನಾವಣೆಗೆ ಹೆಚ್ಚು- ಕಡಿಮೆ ಒಂದು ವರ್ಷವಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದ ನಾಯಕರು ಜೆಡಿಎಸ್ ಪಕ್ಷ (JDS Party) ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಪಕ್ಷಕ್ಕೆ ಭಾರಿ ಹೊಡೆತ ಬೀಳುವುದು ಗ್ಯಾರೆಂಟಿ. ಈ ನಡುವೆ ಜಿಲ್ಲೆಯಲ್ಲಿ ಜೆಡಿಎಸ್ನ ಮತ್ತೊಂದು ವಿಕೆಟ್ ಪತನವಾಗುವ ಸಾಧ್ಯತೆಯಿದೆ. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಬೇಡಿ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ (Marithibbegowda) ಬೆಂಬಲಿಗರ ಸಭೆಯಲ್ಲಿ ಸೂಚನೆ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹೆಚ್ ಕೆ ರಾಮುಗೆ ಮತ ಹಾಕದಂತೆ ಮನವಿ ಮಾಡಿರುವ ಅವರು, ತಮ್ಮ ಬೆಂಬಲಿಗ ಜಯರಾಂಗೆ ಬಿಫಾರಂ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ನಲ್ಲಿ ದುಡ್ಡು ಇರುವವರಿಗೆ ಮಾತ್ರ ಬಿಫಾರಂ ನೀಡುತ್ತಾರೆ. ನಮ್ಮ ಪಕ್ಷದ ನಾಯಕರ ನಡೆ ಬಗ್ಗೆ ನನಗೆ ತೀವ್ರ ಬೇಸರವಾಗಿದೆ. ನಾಲ್ಕೈದು ವರ್ಷಗಳಿಂದ ನೋವು ಅನುಭವಿಸಿಕೊಂಡು ಬಂದಿದ್ದೇನೆ. ಪಕ್ಷ, ಕಾರ್ಯಕರ್ತರ ಬಗ್ಗೆ ನಾಯಕರಿಗೆ ಕಿಂಚಿತ್ತೂ ಕಳಕಳಿ ಇಲ್ಲ. ಜಯರಾಂ ಬಳಿ ಹಣ ಇಲ್ಲವೆಂದು ಟಿಕೆಟ್ ಕೊಡಲ್ಲ ಅಂದಿದ್ದಾರೆ. ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿಯೇ ಹೇಳಿದ್ದಾರೆ ಎಂದು ಮರಿತಿಬ್ಬೇಗೌಡ ಆಕ್ರೋಶ ಹೊರಹಾಕಿದ್ದಾರೆ.
ಪಕ್ಷ ಕಟ್ಟಿಲ್ಲ, ಬಾವುಟ ಹಿಡಿಯದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಪಕ್ಷದ ಸದಸ್ಯತ್ವವನ್ನೇ ಪಡೆಯದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಯಾವ ಮಾನದಂಡದಲ್ಲಿ ಹೆಚ್ ಕೆ ರಾಮುಗೆ ಟಿಕೆಟ್ ನೀಡಿದ್ದಾರೆ. ನಾನು ಪಕ್ಷದಲ್ಲಿರಬೇಕೋ ಬೇಡವೋ ಅನ್ನೋ ಬಗ್ಗೆ ನಿರ್ಧರಿಸುವೆ. ಮತದಾರರು, ಹಿತೈಷಿಗಳ ಜತೆ ಮಾತನಾಡಿ ನಿರ್ಧಾರ ಮಾಡುತ್ತೇನೆ. ಜೆಡಿಎಸ್ ನಾಯಕರು ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ. ನಾನು ಸ್ವಾಭಿಮಾನಿ, ಯಾವುದೇ ಕಾರಣಕ್ಕೂ ಜೆಡಿಎಸ್ ಪರ ಮತ ಕೇಳಲ್ಲ. ನೋಟಿಫಿಕೇಷನ್ ಆದ ಬಳಿಕ ಯಾರಿಗೆ ಮತಹಾಕಬೇಕೆಂದು ನಿರ್ಧಾರ ಮಾಡುತ್ತೇವೆ ಅಂತ ಮಂಡ್ಯದಲ್ಲಿ ಬೆಂಬಲಿಗರ ಸಭೆಯಲ್ಲಿ ಎಂಎಲ್ಸಿ ಮರಿತಿಬ್ಬೇಗೌಡ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
ಭಿಕ್ಷುಕರಿಗೆ 1 ರೂಪಾಯಿಯೂ ಕೊಡದೇ ಮುಂದೆ ಸಾಗಿದ ಸೈಫ್ ಮಗ ಇಬ್ರಾಹಿಂ ಅಲಿ ಖಾನ್; ವಿಡಿಯೋ ವೈರಲ್
ಶಾಲೆಗಳಲ್ಲಿ ಭಗವದ್ಗೀತೆ ಬೋಧನೆಗೆ ಶಿಕ್ಷಣ ಇಲಾಖೆ ನಿರ್ಧಾರ; ಖಾಸಗಿ ಶಾಲೆಗಳ ಒಕ್ಕೂಟ ಕಿಡಿ
Published On - 10:43 am, Mon, 9 May 22