Fire in Train: ಧಾರವಾಡಕ್ಕೆ ತೆರಳುತ್ತಿದ್ದ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ

ತಕ್ಷಣ ರೈಲನ್ನು ನಿಲ್ಲಿಸಿ, ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ಸ್ಥಳಾಂತರಿಸಲಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದರು.

Fire in Train: ಧಾರವಾಡಕ್ಕೆ ತೆರಳುತ್ತಿದ್ದ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ
ಮೈಸೂರು-ಧಾರವಾಡ ಎಕ್ಸ್​ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 01, 2022 | 8:37 AM

ಮಂಡ್ಯ: ಮೈಸೂರಿನಿಂದ ಧಾರವಾಡಕ್ಕೆ ಹೊರಟಿದ್ದ ಮೈಸೂರು-ಧಾರವಾಡ ಎಕ್ಸ್​ಪ್ರೆಸ್​ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ರೈಲನ್ನು ನಿಲ್ಲಿಸಿ, ಪ್ರಯಾಣಿಕರನ್ನು ಮತ್ತೊಂದು ಬೋಗಿಗೆ ಸ್ಥಳಾಂತರಿಸಲಾಯಿತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದರು. ಮೈಸೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದ ಬಳಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ರೈಲು ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಟಿತ್ತು. ಬೆಂಕಿ ಕಾಣಿಸಿಕೊಂಡ ತಕ್ಷಣ ರೈಲು ನಿಲ್ಲಿಸಿದ್ದರಿಂದ ಅನಾಹುತ ತಪ್ಪಿದೆ. ಎಕ್ಸ್​ಪ್ರೆಸ್​ ರೈಲಿನ 3ನೇ ಬೋಗಿಯಾಗಿದ್ದ D1 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಪ್ರಯಾಣಿಕರು ಬೋಗಿಯಿಂದ ಕೆಳಗಿಳಿದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ ನಂತರ ರೈಲು ಮತ್ತೆ ಸಂಚಾರ ಆರಂಭಿಸಿತು. ಕೊನೆಗೂ ಧಾರವಾಡ ಎಕ್ಸ್​ಪ್ರೆಸ್ ರೈಲು ಪ್ರಯಾಣಿಕರು ನಿಟ್ಟುಸಿರುಬಿಟ್ಟರು. ಬೆಂಕಿ ಕಾಣಿಸಿಕೊಂಡ ತಕ್ಷಣವೇ ರೈಲನ್ನು ನಿಲ್ಲಿಸಿದ್ದರಿಂದ ಅನಾಹುತ ತಪ್ಪಿತು. ಮೈಸೂರಿನಲ್ಲೇ ಬೆಂಕಿ ಹೊತ್ತಿಕೊಂಡಿತ್ತು. ಆದರೆ ಯಾರೂ ಗಮನಿಸಲಿಲ್ಲ. ಆದರೆ ಸ್ವಲ್ಪ ಹೊತ್ತಿಗೆ ದೊಡ್ಡದಾಗಿ ಹರಡಿಕೊಂಡಿತು. ನಮ್ಮ ಹುಡುಗರು ಚೈನ್ ಎಳೆದರು. ನಾವು ರೈಲು ನಿಲ್ಲುವ ಮೊದಲೇ ಬೋಗಿಯಿಂದ ಕೆಳಗೆ ಬಿದ್ದು ಓಡಿದೆವು, ಗಾಯಗಳಾಗಿವೆ. ಇನ್ನು ಮುಂದೆ ಹೀಗೆ ಆಗದಂತೆ ಗಮನ ಹರಿಸಬೇಕು ಎಂದು ಮಹಿಳಾ ಪ್ರಯಾಣಿಕರೊಬ್ಬರು ಆಗ್ರಹಿಸಿದರು.

ಹಳಿತಪ್ಪಿದ ಗೂಡ್ಸ್ ರೈಲು

ಬೆಂಗಳೂರಿನ ಯಶವಂತಪುರ ಬಳಿ ನಿನ್ನೆ (ಏಪ್ರಿಲ್ 30) ರಾತ್ರಿ 9.10ರ ಸುಮಾರಿಗೆ ಗೂಡ್ಸ್​ ರೈಲು ಹಳಿತಪ್ಪಿದ್ದು, ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದರು. ಅದೃಷ್ಟವಶಾತ್​ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ರೈಲು ಹಳಿತಪ್ಪಿದ ಹಿನ್ನೆಲೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಹಳಿ ಬಿಟ್ಟು ಪ್ಲಾಟ್​ಫಾರ್ಮ್​​ ಮೇಲೆ ನುಗ್ಗಿದ ರೈಲು, ನೀರಿನ ಅಂಗಡಿ ಧ್ವಂಸ

ಲೋಕಲ್​ ಟ್ರೇನ್​ವೊಂದು ಪ್ಲಾಟ್​ಫಾರ್ಮ್​​​ಗೆ ನುಗ್ಗಿ, ಅದರ ತುದಿಯಲ್ಲಿ ಇದ್ದ ಬಫರ್​​ಗೆ ಡಿಕ್ಕಿ ಹೊಡೆದ ಘಟನೆ ಚೆನ್ನೈನ ಬೀಚ್​ ರೈಲ್ವೆ ಸ್ಟೇಶನ್​​ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಪ್ಲಾಟ್​ಫಾರ್ಮ್​​ನ ಮೇಲಿದ್ದ ಐಆರ್​ಸಿಟಿಸಿಗೆ ಸೇರಿದ ನೀರು ಮಾರಾಟ ಅಂಗಡಿಗೆ ಹಾನಿಯಾಗಿದೆ. ಅಂದಹಾಗೇ, ಇದೊಂದು ಸಬ್​ಅರ್ಬನ್​ (ಅಲ್ಲೇ ಸ್ಥಳೀಯವಾಗಿ ಸಂಚರಿಸುವ) ರೈಲಾಗಿದ್ದು, ಘಟನೆ ನಡೆದಾಗ ಅದರೊಳಗೆ ಪ್ರಯಾಣಿಕರು ಇರಲಿಲ್ಲ. ಆದರೆ ಪ್ಲಾಟ್​ಫಾರ್ಮ್​ ಮೇಲೆ ಒಂದಷ್ಟು ಮಂದಿ ನಿಂತಿದ್ದರು ಎಂದು ವರದಿಯಾಗಿದೆ. ಇದೊಂದು ಎಲೆಕ್ಟ್ರಿಕಲ್​ ಮಲ್ಟಿಪಲ್​ ಯುನಿಟ್​ ಆಗಿದ್ದು, ಬೀಚ್​ ಸ್ಟೇಶನ್​​ನಿಂದ ಹೊರಟ ಸಂದರ್ಭದಲ್ಲಿ ರೈಲಿನಲ್ಲಿ ವಿದ್ಯುತ್​ ಅಡಚಣೆಯುಂಟಾಗಿ ಬ್ರೇಕ್​ ಫೇಲ್​ ಆಗಿದ್ದರಿಂದ ಹೀಗಾಯಿತು. ಸಂಜೆ ಸುಮಾರು 4.25ರ ಹೊತ್ತಿಗೆ ಘಟನೆ ನಡೆದಿದೆ. ಲೋಕೋ ಪೈಲಟ್ ಶಂಟರ್ ಶಂಕರ್ ಎಂಬುವರು ರೈಲು ಚಾಲನೆ ಮಾಡುತ್ತಿದ್ದರು ಎಂದು ರೈಲ್ವೆ ಪೊಲೀಸ್​ ತಿಳಿಸಿದ್ದಾರೆ.

ಈ ರೈಲು ಬೀಚ್​ ಸ್ಟೇಶನ್​​ನಿಂದ ಚೆಂಗಲ್ಪಟ್ಟುವಿಗೆ ಹೋಗಬೇಕಿತ್ತು. ಸಂಜೆ 4.35ರ ಹೊತ್ತಿಗೆ ಬೀಚ್​ ಸ್ಟೇಶನ್​​ ಬಿಡಬೇಕಿತ್ತು. ಹಾಗೇ, ರೈಲು ನಿಧಾನಕ್ಕೆ ಚಲಿಸುತ್ತಿತ್ತು. ಪ್ಲಾಟ್​ಫಾರ್ಮ್​ನ ತುತ್ತತುದಿಗೆ ಹೋಗುವಷ್ಟರಲ್ಲಿ ಲೋಕೊ ಪೈಲಟ್​ ಶಂಕರ್​ ನಿಯಂತ್ರಣ ಕಳೆದುಕೊಂಡರು. ಒಮ್ಮೆಲೇ ರೈಲಿನ ವೇಗ ಜಾಸ್ತಿ ಆಗಿ ಪ್ಲಾಟ್​ಫಾರ್ಮ್​ಗೆ ಹೊಡೆಯಿತು. ಹೀಗಾಗಿ ರೈಲಿನ ಮೊದಲ ಕೋಚ್​ (ಮೋಟಾರ್​ ಕೋಚ್​) ಪ್ಲಾಟ್​ಫಾರ್ಮ್​​ ಮೇಲೆ ಹತ್ತಿತು. ಟ್ರೇಲರ್​ ಕೋಚ್​ ಪ್ಲಾಟ್​ಫಾರ್ಮ್​ ಗೋಡೆಗೆ ಹೊಡೆಯಿತು. ಶಂಕರ್​ ರೈಲಿನಿಂದ ಜಿಗಿದು ಪಾರಾದರು. ಅವರಿಗೆ ಯಾವುದೇ ಗಾಯವಾಗಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಲ್ಹಾದ್ ಜೋಶಿ ಮತ್ತು ಜಗದೀಶ್ ಶೆಟ್ಟರ್ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಪುಟಾಣಿ ರೈಲು ಹಳಿ ತಪ್ಪಿದ್ದು!

ಇದನ್ನೂ ಓದಿ: ಶಿವಮೊಗ್ಗದಿಂದ ತಿರುಪತಿ ಮಾರ್ಗವಾಗಿ ಚೆನ್ನೈಗೆ ಹೊಸ ರೈಲು; ನೂತನ ರೈಲು ಸೇವೆಗೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ

Published On - 8:34 am, Sun, 1 May 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ