ಮಂಡ್ಯದಲ್ಲಿ ಸ್ನೇಹಿತನ ಕೊಲೆ ಮಾಡಿ ಮಾದಪ್ಪನ ದರ್ಶನ ಮುಗಿಸಿ ಮೈಸೂರಿನಲ್ಲಿ ಅಡಗಿ ತುಳಿತಿದ್ದ ಕಿರಾತಕರು ಅರೆಸ್ಟ್

| Updated By: ಆಯೇಷಾ ಬಾನು

Updated on: Mar 13, 2022 | 3:55 PM

ಮಾರ್ಚ್ 3 ರ ರಾತ್ರಿ ಕಾರೇಕುರ ಗ್ರಾಮದ ಸಾಗರ್ (29)ಎಂಬಾತನನ್ನು ಅವನ ಸ್ನೇಹಿತರೇ ಕೊಲೆ ಮಾಡಿದ್ದರು. ರಾಘವೇಂದ್ರ, ಅಭಿಲಾಷ್, ಜಯಕುಮಾರ್, ಸ್ವಾಮಿ, ಕಿರಣ್ ಎಂಬ ಐವರು ಕಿರಾತಕರು ಸಾಗರ್ನ ಕೊಲೆ ಮಾಡಿದ್ದರು.

ಮಂಡ್ಯದಲ್ಲಿ ಸ್ನೇಹಿತನ ಕೊಲೆ ಮಾಡಿ ಮಾದಪ್ಪನ ದರ್ಶನ ಮುಗಿಸಿ ಮೈಸೂರಿನಲ್ಲಿ ಅಡಗಿ ತುಳಿತಿದ್ದ ಕಿರಾತಕರು ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ಸ್ನೇಹಿತನನ್ನೆ ಕೊಲೆ ಮಾಡಿ ಮಾದಪ್ಪನ ಮೊರೆ ಹೋದ ಕಿರಾತಕರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ 10 ದಿನಗಳ ಹಿಂದೆ ಅಂದ್ರೆ ಮಾರ್ಚ್ 3 ರ ರಾತ್ರಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಮಾರ್ಚ್ 3 ರ ರಾತ್ರಿ ಕಾರೇಕುರ ಗ್ರಾಮದ ಸಾಗರ್ (29)ಎಂಬಾತನನ್ನು ಅವನ ಸ್ನೇಹಿತರೇ ಕೊಲೆ ಮಾಡಿದ್ದರು. ರಾಘವೇಂದ್ರ, ಅಭಿಲಾಷ್, ಜಯಕುಮಾರ್, ಸ್ವಾಮಿ, ಕಿರಣ್ ಎಂಬ ಐವರು ಕಿರಾತಕರು ಸಾಗರ್ನ ಕೊಲೆ ಮಾಡಿದ್ದರು. ಮೃತ ಸಾಗರ್ ತನ್ನ ಸ್ನೇಹಿತರ ಮುಂದೆ ಹವಾ ಮೈನ್ಟೈನ್ ಮಾಡ್ತಿದ್ದ. ಅಷ್ಟೇ ಅಲ್ಲದೇ ಸ್ನೇಹಿತರ ಸಹೋದರಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಇದರಿಂದ ಬೇಸತ್ತು ಐವರು ಸ್ನೇಹಿತರು ಸಾಗರ್ ಕೊಲೆಗೆ ಸ್ಕೆಚ್ ಹಾಕಿದ್ದರು. ಅದರಂತೆ ಮಾರ್ಚ್ 03 ರಂದು ಸಂಚು ರೂಪಿಸಿ ಕಾರೇಕುರದ ಗ್ರಾಮದ ಹೊರವಲಯದ ಗದ್ದೆಯಲ್ಲಿ ಕೊಲೆ ಮಾಡಿದ್ದಾರೆ.

ಬೈಕ್ನಲ್ಲಿ ಮನೆಗೆ ವಾಪಸ್ಸು ತೆರಳುತ್ತಿದ್ದ ಸಾಗರ್ನನ್ನು ರಸ್ತೆಯಲ್ಲಿ ಅಡ್ಡೆಗಟ್ಟಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಎಸ್ಕೇಪ್ ಆಗಿದ್ದಾರೆ. ಮಲೆ ಮಾದಪ್ಪನ ದರ್ಶನ ಪಡೆದು ನಾಗಮಲೈಗೆ ತೆರಳಿದ್ದಾರೆ. ನಾಗಮಲೈನಲ್ಲಿ ಕೃತ್ಯದ ದಿನ ಧರಿಸಿದ್ದ ಬಟ್ಟೆ ಬಚ್ಚಿಟ್ಟು ಮೈಸೂರಿಗೆ ಹೋಗಿದ್ದಾರೆ. ಮೈಸೂರಿನಲ್ಲಿ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದು ಮಂಡ್ಯ ಮಂಟಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ನಾಲ್ವರು ಪಿ.ಹೊಸಹಳ್ಳಿ ಗ್ರಾಮದವರು. ಓರ್ವ ಮೈಸೂರಿನ ಇಲವಾಲ ನಿವಾಸಿ.

ಇದನ್ನೂ ಓದಿ: ಇನ್ನೂ ಸ್ವೀಪರ್ ಆಗಿಯೇ ಕೆಲಸ ಮಾಡುತ್ತಿದ್ದಾರೆ ಪಂಜಾಬ್ ಮುಖ್ಯಮಂತ್ರಿಯನ್ನು ಸೋಲಿಸಿದ ಆಪ್ ಶಾಸಕನ ಅಮ್ಮ

Bollywood: ಸಾಮಾಜಿಕ ಜಾಲತಾಣಗಳಿಗೆ ವಿದಾಯ ಹೇಳಿದ ಬಾಲಿವುಡ್ ಸೆಲೆಬ್ರಿಟಿಗಳು ಯಾರು ಗೊತ್ತಾ..!

Published On - 3:55 pm, Sun, 13 March 22