ಮಂಡ್ಯ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆದಿದೆ ನಕಲಿ ನೋಟಿನ ಹಾವಳಿ!

ಮಂಡ್ಯ: ಸಕ್ಕರೆ ನಗರಿ ಎಂದೇ ಖ್ಯಾತಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಖೋಟಾ ನೋಟುಗಳ ಹಾವಳಿ ತಲೆದೂರಿದೆ. ದಂಧೆಕೋರರಿಗೆ ಅಮಾಯಕ ವೃದ್ಧರೇ ಟಾರ್ಗೆಟ್ ಆಗಿದ್ದು, ಹಣದ ಆಮಿಷ ತೋರಿಸಿ ವಂಚನೆ ಮಾಡಿದ್ದಾರೆ. ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ವೃದ್ಧ ಮಂಚಯ್ಯ ಎಂಬುವರಿಗೆ ಕಲರ್ ಜೆರಾಕ್ಸ್ ನೋಟು ಕೊಟ್ಟು ದಂಧೆಕೋರರು ಕುರಿ ಕೊಂಡೊಯ್ದಿದ್ದಾರೆ. ಮಂಚಯ್ಯ ಗ್ರಾಮದ ಬಳಿ ಒಬ್ಬನೇ ಕುರಿ ಮೇಯಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಕುರಿಯನ್ನು ಕೊಂಡುಕೊಳ್ಳುವುದಾಗಿ ಹೇಳಿದ್ದಾರೆ. 3 ಸಾವಿರ ಬೆಲೆ ಬಾಳುವ ಕುರಿಗೆ 5 ಸಾವಿರ […]

ಮಂಡ್ಯ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆದಿದೆ ನಕಲಿ ನೋಟಿನ ಹಾವಳಿ!
Follow us
ಸಾಧು ಶ್ರೀನಾಥ್​
|

Updated on:Jan 27, 2020 | 6:52 PM

ಮಂಡ್ಯ: ಸಕ್ಕರೆ ನಗರಿ ಎಂದೇ ಖ್ಯಾತಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಖೋಟಾ ನೋಟುಗಳ ಹಾವಳಿ ತಲೆದೂರಿದೆ. ದಂಧೆಕೋರರಿಗೆ ಅಮಾಯಕ ವೃದ್ಧರೇ ಟಾರ್ಗೆಟ್ ಆಗಿದ್ದು, ಹಣದ ಆಮಿಷ ತೋರಿಸಿ ವಂಚನೆ ಮಾಡಿದ್ದಾರೆ. ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ವೃದ್ಧ ಮಂಚಯ್ಯ ಎಂಬುವರಿಗೆ ಕಲರ್ ಜೆರಾಕ್ಸ್ ನೋಟು ಕೊಟ್ಟು ದಂಧೆಕೋರರು ಕುರಿ ಕೊಂಡೊಯ್ದಿದ್ದಾರೆ.

ಮಂಚಯ್ಯ ಗ್ರಾಮದ ಬಳಿ ಒಬ್ಬನೇ ಕುರಿ ಮೇಯಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಕುರಿಯನ್ನು ಕೊಂಡುಕೊಳ್ಳುವುದಾಗಿ ಹೇಳಿದ್ದಾರೆ. 3 ಸಾವಿರ ಬೆಲೆ ಬಾಳುವ ಕುರಿಗೆ 5 ಸಾವಿರ ರೂಪಾಯಿ ಕೊಟ್ಟು ಕೊಂಡೊಯ್ದಿದ್ದಾರೆ. ನೋಟುಗಳ ಬಗ್ಗೆ ಅನುಮಾನ ಬಂದು ಚೆಕ್ ಮಾಡಿದಾಗ ಜೆರಾಕ್ಸ್ ನೋಟು ಎಂಬುದು ಪತ್ತೆಯಾಗಿದೆ.

500 ರೂ. ಮುಖಬೆಲೆಯ 10 ಕಲರ್ ಜೆರಾಕ್ಸ್ ನೋಟುಗಳನ್ನ ನೀಡಿ ಕುರಿಗಾಹಿ ಮಂಚಯ್ಯಗೆ ವಂಚಿಸಿದ್ದಾರೆ. ಇತ್ತ ಕುರಿಯೂ ಇಲ್ಲದೆ, ಅತ್ತ ಹಣವೂ ಇಲ್ಲದ ಸ್ಥಿತಿ ವೃದ್ಧ ಮಂಚಯ್ಯನವರದ್ದಾಗಿದೆ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 3:03 pm, Mon, 27 January 20